Breaking News

ವಿಶ್ವ ಮಾದಕ ವಸ್ತುಗಳ ದುರುಪಯೋಗ ಮತ್ತು ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

International Day against Drug Abuse and Illicit Trafficking

ಜಾಹೀರಾತು

ಗಂಗಾವತಿ: ವಿಶ್ವ ಮಾದಕ ವಸ್ತುಗಳ ದುರುಪಯೋಗ ಮತ್ತು ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ನಗರದಲ್ಲಿ ಗುರುವಾರ ಜಾಥಾ ಮೂಲಕ ಆಚರಿಸಲಾಯಿತು.

ನಗರದ ಸೇ೦ಟ್ ಫಾಲ್ಸ್ ಫ಼ಾರ್ಮಸಿ ಕಾಲೇಜು ವಿಧ್ಯಾರ್ಥಿಗಳು ಹಾಗೂ ಗಂಗಾವತಿ-ಕನಕಗಿರಿ-ಕಾರಟಗಿ ಸಂಯುಕ್ತ ತಾಲೂಕು ಔಷಧ ವ್ಯಾಪಾರಿಗಳು
ಜಂಟಿಯಾಗಿ ಈ ಜಾಥಾವನ್ನು ಹಮ್ಮಿಕೊಂಡಿದ್ದವು.

ನಗರದ ಬಸ್ ನಿಲ್ದಾಣದಿಂದ ಗಾಂಧೀ ಚೌಕವರೆಗೂ ನಡೆದ ಜಾಥಾ ಘೋಷಣೆಗಳೊಂದಿಗೆ ನಡೆಯಿತು. ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿ,ಅಫ಼ೀಮು-ಚರಸ್-ಗಾಂಜಾ ಇವುಗಳನ್ನು ಡ್ರಗ್ಸ್ ಗಳೆಂದು ಕರೆಯುಲಾಗುತ್ತದೆ.ಇವುಗಳಿಗೆ ಅಡಿಟ್ ಆದವರಿಗೆ, ಅವುಗಳ ಚಟ ಬಿಡಿಸಲು ಔಷಧಗಳನ್ನು ವೈಧ್ಯರು ಸೂಚಿಸುತ್ತಾರೆ.ವೈಧ್ಯರ ಪ್ರಿಸ್ಕ್ರಿಪ್ಶನ್ ಆಧಾರದ ಮೇಲೆ ಔಷಧಗಳನ್ನು ಮಾರಾಟ ಮಾಡಬೇಕು.ಅದು ಬಿಟ್ಟು ಅಂತಹ ಔಷಧಗಳನ್ನು ಕೇಳಿದವರಿಗೆಲ್ಲಾ ಕೊಡುವುದು ಕಾನೂನಿನ ಪ್ರಕಾರ ಅಪರಾಧ ಆದ್ದರಿಂದ ಔಷಧ ವ್ಯಾಪಾರಿಗಳು ಎಚ್ಚರಿಕೆಯಿಂದ ವ್ಯಾಪಾರ ಮಾಡಲು ಸೂಚಿಸಿದರು.ತೊಂದರೆ ಆಗಬಹುದೆಂದು ಅಂತಹ ಔಷಧಗಳನ್ನು ಖರೀಧಿಸುವುದನ್ನು ಹಾಗೂ ಮಾರಾಟ ಮಾಡದೇ ಇರುವುದು ಸರಿಯಲ್ಲ ಎಂದರು.

ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಮಾತನಾಡಿ ಔಷಧ ಮತ್ತು ಕಾಂತಿವರ್ಧಕ ನಿಯಮಗಳ ಪ್ರಕಾರ ವ್ಯವಹರಿಸುವಂತೆ ಕರೆ ನೀಡಿದರು.ಶೆಡ್ಯೂಲ್ಡ್ ಔಷಧಗಳನ್ನು ರೋಗಿಗಳಿಗೆ ನೇರವಾಗಿ ಮಾರಾಟ ಮಾಡಬಾರದು ಎಂದು ಹೇಳಿದರು.

ಔಷಧ ವ್ಯಾಪಾರಿಗಳು ಕಟ್ಟು ನಿಟ್ಟಿನಲ್ಲಿ ನಿಯಮನುಸಾರ ಕಾರ್ಯನಿರ್ವಹಿಸಬೇಕು,ಶೆಡ್ಯೂಲ್ಡ್ ಔಷಧಗಳನ್ನು ವೈಧ್ಯರ ಸಲಹಾ ಚೀಟಿಗಳ ಆಧಾರದ ಮೇಲೆ ಮಾರಾಟ ಮಾಡಬೇಕು,ಅಮಲು ಬರಿಸುವ ಔಷಧಗಳ ಮಾರಾಟದಲ್ಲಿ ನಿಯಮಗಳನ್ನು ಪಾಲಿಸಬೇಕು ಎಂದು ನಗರ ಠಾಣೆಯ ಪಿ.ಐ.ಪ್ರಕಾಶ ಮಾಳೆ ಔಷಧ ವ್ಯಾಪಾರಿಗಳಿಗೆ ಕರೆ ನೀಡಿದರು.

ಪೋಲಿಸ್ ಇಲಾಖೆಯು ಔಷಧ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ನಂತರ ಔಷಧ ವ್ಯಾಪಾರಿಗಳು ಜಾಗ್ರತರಾಗಿದ್ದಾರೆ,ನಿಯಮನುಸಾರ ವ್ಯಾಪಾರ ಮಾಡುತ್ತಿದ್ದಾರೆ.ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಶೋಕಸ್ವಾಮಿ ಹೇರೂರ ಅವರು ಔಷಧ ವ್ಯಾಪಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅಮಲು ಭರಿಸುವ ಔಷಧಗಳ ಮಾರಾಟದ ಮೇಲೆ ನಿಗಾ ವಹಿಸಿದ್ದಾರೆ ಎಂದು ಡಿ.ಎಸ್.ಪಿ.ಸಿದ್ದಲಿಂಗಪ್ಪ ಗೌಡ ಪಾಟೀಲ್ ಅಭಿಪ್ರಾಯ ಪಟ್ಟರು.

ಸೇ೦ಟ್ ಫ಼ಾಲ್ಸ್ ಫಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ, ಕಾರ್ಯದರ್ಶಿ ಸರ್ವೇಶ್ ವಸ್ತ್ರದ, ನಿರ್ದೇಶಕ ಹೃತಿಕ್,
ಔಷಧ ವ್ಯಾಪಾರಿಗಳು, ಫ಼ಾರ್ಮಸಿಸ್ಟಗಳು, ಫ಼ಾರ್ಮಸಿ ವಿಧ್ಯಾರ್ಥಿಗಳು ಮತ್ತು ಪೋಲಿಸ್ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *