Breaking News

ಜೂನ್23ಕ್ಕೆರಾಯಚೂರಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ; 371 ಜೆ ದಶಮಾನೋತ್ಸ,ಬುಡಕಟ್ಟು ಉತ್ಸವ, 936 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ,ಉದ್ಘಾಟನೆ

Chief Minister’s program in Raichur on June 23; 371 J Dashmanotsas, tribal festival, foundation stone laying and inauguration of works worth Rs 936 crore

ಜಾಹೀರಾತು
Screenshot 2025 06 20 15 09 17 21 6012fa4d4ddec268fc5c7112cbb265e7

ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್ ಅವರಿಂದ ಜಂಟಿ ಪತ್ರಿಕಾಗೋಷ್ಠಿ

ರಾಯಚೂರ ಜೂನ್ 20 (ಕ.ವಾ.): ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಜೂನ್ 23ರಂದು ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತ ಅಡಿಗಲ್ ಸಮಾರಂಭದ ಜೊತೆಗೆ 371 ಜೆ ದಶಮಾನೋತ್ಸವ ಮತ್ತು ಬುಡಕಟ್ಟು ಉತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ರಾಯಚೂರ ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ಹಾಗೂ ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ
ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ
ಬಸನಗೌಡ ದದ್ದಲ್ ಅವರು ಜೂನ್ 20 ರಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಶಾಸಕರ ಕಚೇರಿ ಆವರಣದಲ್ಲಿ ಬೆಳಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ
ಸಂಸದರಾದ ಜಿ.ಕುಮಾರ ನಾಯಕ ಅವರು ಮಾತನಾಡಿ, ಸಂವಿಧಾನದ ಅನುಚ್ಚೇದ 371 (ಜೆ) ಕಾಯಿದೆ ಅನುಷ್ಠಾನದಿಂದಾಗಿ ಈ ಭಾಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಸೌಕರ್ಯ ಲಭ್ಯವಾಗಿ ನಮ್ಮ
ಭಾಗದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ.
ಕೆಕೆಆರ್ ಡಿಬಿ ಅಡಿಯಲ್ಲಿ
ಇದುವರೆಗೆ 13,000 ಕೋಟಿ ರೂ ಅನುದಾನ ನೀಡಲಾಗಿದೆ. ಇದನ್ನು ಸಂಭ್ರಮಿಸಲಿಕ್ಕೆ ದಶಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಜೊತೆಗೆ ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ ಅಂದಾಜು 936 ಕೋಟಿ ರೂ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಯು ಮಾನ್ಯ ಮುಖ್ಯಮಂತ್ರಿಗಳಿಂದ ನೆರವೇರಲಿದೆ ಎಂದು ತಿಳಿಸಿದರು.
ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಜೂನ್ 23ರಂದು ನಡೆಯುವ ಕಾರ್ಯಕ್ರಮವು ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲಿದೆ. ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಹಿರಿಯ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂದು ಅಂದಾಜು 936 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಲಿದೆ ಎಂದರು.
ರಾಯಚೂರ ವಿವಿ ಆವರಣದಲ್ಲಿ ವಿಶೇಷ ಕಾರ್ಯಕ್ರಮವಿದೆ. ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ರಾಯಚೂರ ವಿವಿಗೆ ಮರುನಾಮಕರಣ ನಡೆಯಲಿದೆ. ಒಂದೂವರೆ ಕೋಟಿ ರೂ ವೆಚ್ಚದಲ್ಲಿ ರಾಯಚೂರ ವಿವಿ ಆವರಣದಲ್ಲಿ 6 ಎಕರೆ ಪ್ರದೇಶದಲ್ಲಿ ಹೊಸದಾಗಿ ಉದ್ಯಾನ ವನ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮದ ಸಿದ್ಧತೆಯು ಭರ್ಜರಿ ನಡೆದಿದೆ. ಒಂದೆಡೆ
ಬುಡಕಟ್ಟು ಉತ್ಸವದ ಮಳಿಗೆಗಳ ನಿರ್ಮಾಣ ಕಾರ್ಯ ಮತ್ತೊಂದೆಡೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯ ಮಳಿಗೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬುಡಕಟ್ಟು ಸಮುದಾಯವರ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಮತ್ತು ಅವರ ಕಲೆಗಳ ಅನಾವರಣಕ್ಕೆ ಉತ್ಸವದಲ್ಲಿ ಏರ್ಪಾಡು ಮಾಡಲಾಗಿದೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ನಿಗಮ, ಬೋವಿ ನಿಗಮ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಗೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳಡಿ 100 ಫಲಾನುಭವಿಗಳಿಗೆ ಕಾರು, ಟ್ರಾಕ್ಟರ್ ಸೇರಿದಂತೆ ನಾನಾ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಲಿದೆ. 60 ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಇದೆ ವೇಳೆ ವಿತರಿಸಲಾಗುವುದು.
ಇದೆ ವೇಳೆ ಸಂವಿಧಾನದ ಅನುಚ್ಚೇದ 371(ಜೆ)
ದಶಮಾನೋತ್ಸವ ಕಾರ್ಯಕ್ರಮವು ವಿಭಿನ್ನವಾಗಿ ನಡೆಯಲಿದೆ. 371(ಜೆ)
ಹೋರಾಟಗಾಥೆ, ಈ ಮೀಸಲು ಸೌಲಭ್ಯ ಪಡೆದು ಉದ್ಯೋಗ ಗಿಟ್ಟಿಸಿದ ನೌಕರರ ಯಶೋಗಾಥೆ ಮಾಹಿತಿಯ ಮತ್ತು ಹೋರಾಟದ ವಿಭಿನ್ನ ಛಾಯಾಚಿತ್ರಗಳು ಒಳಗೊಂಡ
ಪುಸ್ತಕದ‌ ಲೋಕಾರ್ಪಣೆ ನಡೆಯಲಿದೆ ಎಂದರು.
24 ಕೋಟಿ ರೂ ವೆಚ್ಚದಲ್ಲಿ 72 ಸರ್ಕಾರಿ ಶಾಲೆಗಳಲ್ಲಿ 185 ಹೆಚ್ಚುವರಿ ಶಾಲಾ ಕೊಠಡಿಗಳು, ಶೌಚಾಲಯ, ಬೋಜನಾಲಯ ನಿರ್ಮಾಣ ಕಾಮಗಾರಿಗೆ, 12 ಕೋಟಿ ರೂ ವೆಚ್ಷದಲ್ಲಿ 5 ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ,
6 ಕೋಟಿ ವೆಚ್ಚದಲಿ 27 ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, 48 ಕೋಟಿ ರೂ ವೆಚ್ಚದಲ್ಲಿ 98 ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ,
111 ಕೋಟಿ ರೂ ವೆಚ್ಚದಲ್ಲಿ 24 ಬಿಟಿ ರಸ್ತೆ ಕಾಮಗಾರಿಗಳಿಗೆ,
289 ಕೋಟಿ ರೂ ವೆಚ್ಚದಲ್ಲಿ 6 ಕೆರೆ ತುಂಬುವ ಯೋಜನೆ ಮತ್ತು ಏತ ನೀರಾವರಿ ಯೋಜನೆ ಕಾಮಗಾರಿಗೆ, 152 ಕೋಟಿ ರೂ ವೆಚ್ಚದಲ್ಲಿ 1 ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ,
21 ಕೋಟಿ ರೂ ವೆಚ್ಚದಲ್ಲಿ 218 ಹಳೆಯ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿಗೆ,
3 ಕೋಟಿ ರೂ ವೆಚ್ಚದಲ್ಲಿ 12 ಚರ್ಚಗಳ ದುರಸ್ತಿ ಕಾಮಗಾರಿಗೆ, 2.83 ಕೋಟಿ ರೂ ವೆಚ್ಚದಲ್ಲಿ 35 ಮಸೀದಿ, ದರ್ಗಾ ಮತ್ತು ಆಶುರ್ ಖಾನ್ ಅಭಿವೃದ್ದಿ ಕಾಮಗಾರಿಗೆ,
222 ಕೋಟಿ ರೂ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ, 7 ಕೋಟಿ ರೂ ವೆಚ್ಚದಲ್ಲಿ 36 ಗ್ರಂಥಾಲಯಗಳ ನಿರ್ಮಾಣ ಕಾಮಗಾರಿಗೆ,
3 ಕೋಟಿ ರೂ ವೆಚ್ಚದಲ್ಲಿ 12 ಗ್ರಾಮದಲ್ಲಿ
ಸಮುದಾಯ ಶೌಚಾಲಯ ನಿರ್ಮಾಣ ಕಾಮಗಾರಿಗೆ,
7 ಕೋಟಿ ರೂ ವೆಚ್ಚದಲ್ಲಿ 2 ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪಕೇಂದ್ರ ಕಾಮಗಾರಿಗಳಿಗೆ,
48 ಕೋಟಿ ರೂ ವೆಚ್ಚದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯದಲ್ಲಿ ಜೆನೋಮ ಸೆಂಟರ್, ಉದ್ಯಾನವನ ಮತ್ತು ಬೋಧನಾ ಕೊಠಡಿ ಕಾಮಗಾರಿಗಳಿಗೆ, 40 ಲಕ್ಷ ರೂ ವೆಚ್ಚದಲ್ಲಿ ಪಶು ಆಸ್ಪತ್ರೆ,
2 ಕೋಟಿ ರೂ ವೆಚ್ಚದಲ್ಲಿ
ಟ್ರಿ ಪಾರ್ಕ ನಿರ್ಮಾಣ ಕಾಮಗಾರಿ ಸೇರಿದಂತೆ ಇನ್ನೀತರ ಬೇರೆ ಬೇರೆ ಇಲಾಖೆಗಳ ಕಾಮಗಾರಿ ಒಳಗೊಂಡು ಅಂದಾಜು 936 ಕೋಟಿ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕರಾದ
ಎ ವಸಂತಕುಮಾರ, ಮುಖಂಡರಾದ ಬಸವರಾಜಪಾಟಿಲ ಇಟಗಿ,
ಮಲ್ಲಿಕಾರ್ಜುನ ಪಾಟೀಲ,
ಅಬ್ದುಲ್ ಖರೀಂ,
ರಜಾಕ್ ಉಸ್ತಾದ್,
ಜಯಂತರಾವ್ ಪತಂಗೆ,
ರಾಜಶೇಖರ ರಾಮಸ್ವಾಮಿ,
ಅಸ್ಲಂ ಪಾಶಾ,
ಚಂದ್ರಶೇಖರ ಪಾಟೀಲ,
ನಾಗೇಂದ್ರಪ್ಪ ಮಟಮಾರಿ,
ಪಂಪಾಪತಿ, ಚನ್ನಬಸು ನಾಯಕ ಸೇರಿದಂತೆ ಇತರರು ಇದ್ದರು.

About Mallikarjun

Check Also

screenshot 2025 10 17 17 14 29 84 e307a3f9df9f380ebaf106e1dc980bb6.jpg

ಬೆಳ್ಳೆತೆರೆಗೆ ಬರಲು ಸಜ್ಜಾದ “ಮಾವುತ”

Mavutha" is all set to hit the big screen ಬೆಂಗಳೂರು : ಎಸ್ ಡಿ ಆರ್ ಪ್ರೊಡಕ್ಷನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.