Breaking News

ಕೆಡಿಎಸ್ಎಸ್ ಸಂಸ್ಥಾಪಕ ಅಧ್ಯಕ್ಷರ ಪ್ರೊ ಕೃಷ್ಣಪ್ಪ ಜಯಂತೋತ್ಸವ.

KDSS Founder President Prof Krishnappa Jayanthotsava.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಗಂಗಾವತಿ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟ ಇದಕ್ಕಾಗಿ ಹಗಲಿರುಲು ಶ್ರಮಿಸುತ್ತಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವುದರ ಮೂಲಕ ದಲಿತರ ಬದುಕಿನ ಆಶಾಕಿರಣವಾದ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ 87 ನೇ ವರ್ಷದ ಜಯಂತೋತ್ಸವ ಸೋಮವಾರದಂದು ಡಾಕ್ಟರ್ ಬಾಬು ಜಗಜೀವನ್ ರಾವ್ ವೃತ್ತದ ಬಳಿ ಆಯೋಜಿಸಲಾಯಿತು.
ಕೆ ಡಿ ಎಸ್ ಎಸ್ ಜಿಲ್ಲಾ ಸಮಿತಿ ಹಾಗೂ ತಾಲೂಕಾ ಸಮಿತಿ ನೇತೃತ್ವದಲ್ಲಿ ಜರುಗಿದ ಜಯಂತೋತ್ಸವ ಸಮಾರಂಭವನ್ನು ಸಂಘಟನೆಯ ವಿಭಾಗಿಯ ಅಧ್ಯಕ್ಷರಾದ ಹಂಪೇಶ್ ಹರಿ ಗೋಲ್ ಪ್ರೊಫೆಸರ್ ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿ. ಸಂವಿಧಾನದಲ್ಲಿ ತಿಳಿಸಿರುವಂತೆ ನಮ್ಮ ಬಾಳು ಸಮಪಾಲು ಎಂಬ ತತ್ವದ ಅಡಿಯಲ್ಲಿ ಪ್ರೊಫೆಸರ್ ಕೃಷ್ಣಪ್ಪ ಅವರು ದಲಿತರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳಾದ ಶಿಕ್ಷಣ ಉದ್ಯೋಗ ಸಾಮಾಜಿಕ ಬದ್ಧತೆ ಇವುಗಳ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಇಂದು ಬೃಹತ್ ಸಂಘಟನೆಯಾಗಿ ಬೆಳೆದಿದೆ. ಅವರ ಚಿಂತನೆಗಳು ಆದರ್ಶಗಳು ಸರ್ವ ಕಾಲಕ್ಕೂ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಇಲಾಖೆ ಪಿ ಐ ಪ್ರಕಾಶ್ ಮಾಳೆ. ಹುಲಿಗೇಶ್ ದೇವರಮನಿ ಹನುಮಂತಪ್ಪ ನಾಯಕ್. ಜಂಬಣ್ಣ ಸಿಂಗ್ರಿ ಪಾರ್ವತಮ್ಮ ಹರಿಗೋಳ ರಮೇಶ್ ಕೋಟೆ ಕಾರಟಗಿ ತಾಲೂಕ ಅಧ್ಯಕ್ಷ ಅಂಜನಪ್ಪ ಸೈಯದ್ ಸಂಗಾಪುರ್ ಯಲ್ಲಪ್ಪ ಕಟ್ಟಿಮನಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *