ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ವಿರುದ್ಧ. ಖಾತ್ರಿ ಯೋಜನೆಕೂಲಿಕಾರರಿಂದ ಗಂಭೀರ ಆರೋಪ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Vaddarahatti Gram Panchayat PDO Suresh against. Serious allegations from Khatri scheme workers.

ಜಾಹೀರಾತು


ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಟ್ಲಪುರ ಕೆರೆ ತಿರುಮಲಾಪುರಕೆರೆ ಗಡ್ಡಿ ಕೆರೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕೆಲಸ ಮಾಡಲಾಗಿದ್ದು ಆದರೆ ಕೂಲಿ ಮಾಡಿರುವಂತಹ ಕೂಲಿ ಕಾರ್ಮಿಕರಿಗೆ ತಮ್ಮ ಅಕೌಂಟಿಗೆ ಹಣ ಹಾಕದೆ ಪಿಡಿಒ ಸುರೇಶ್ ವಂಚಿಸುತ್ತಿದ್ದಾರೆ ಎಂದು ಈ ಕುರಿತು ಕೂಲಿಕಾರ್ಮಿಕರು ಗಂಭೀರವಾಗಿ ಆರೋಪ ಮಾಡಿದ್ದಾರೆ ಕೂಲಿ ಕಾರ್ಮಿಕರಾದ ಮೇಟಿ ಲಿಂಗನಗೌಡ ಲಕ್ಷ್ಮಣ ನಾಯಕ ಮುದ್ದಣ್ಣ ನಾಯಕ ಚಂದ್ರಯ್ಯ ಸ್ವಾಮಿ ಶಿವಪ್ಪ ಕಾಟoಬ್ಳಿ ಅವರಪ್ಪ ಯಮನೂರಪ್ಪ ಹನುಮಂತಪ್ಪ ಮೈಬುಸಾಬ್ ಸೋಮಶೇಖರ್ ಅಕ್ಕಮ್ಮ ನಂದಿನಿ ಶಶಿಕಲಾ ಚಂದ್ರಕಲಾ ಸೇರಿದಂತೆ ಪಿಡಿಒ ಸುರೇಶ್ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನವೊಂದಕ್ಕೆ ನೀಡಬೇಕಾದ ಒಟ್ಟು ಕೂಲಿಯನ್ನು ಇದುವರೆಗೆ ಕೂಲಿ ಕಾರ್ಮಿಕರ ಖಾತೆಗೆ ಜಮಾ ಮಾಡದೆ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಕೂಲಿ ಕೆಲಸಕ್ಕೆ ಬಾರದ ಎಷ್ಟೋ ಕಾರ್ಮಿಕರ ಹೆಸರಿಗೆ ಅನಧಿಕೃತವಾಗಿ ಹಣ ಸಂದಾಯ ಮಾಡಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಹಸಿಲ್ದಾರರು ಸಹಾಯಕ ಆಯುಕ್ತರು. ಜಿಲ್ಲಾಧಿಕಾರಿಗಳು ತಕ್ಷಣವೇ ಪಿಡಿಒ ವಿರುದ್ಧ ತನಿಖೆ ನಡೆಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ಖಾತ್ರಿ ಯೋಜನೆಯ ಕಾರ್ಮಿಕ ರಿಗೆ ಕೂಲಿ ಅಣ್ಣ ಪಾವತಿಸಬೇಕು ಇಲ್ಲವಾದಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ ನಾಗಪ್ಪ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

Total Views: 0
Share This Article