Breaking News

ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭ,,

ಬಡ ಜನತೆ ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ,,! ಲಲಿತಮ್ಮ ಯಡಿಯಾಪೂರ,,

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

Indira Canteen to be opened soon

ಕುಕನೂರು : ಪಟ್ಟಣದಲ್ಲಿ ಇದೇ ಮೇ.27ರಂದು ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಲಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ ಹೇಳಿದರು.

ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದಿರಾ ಕ್ಯಾಂಟಿನಿನಲ್ಲಿ ಕಡಿಮೆ ದರದಲ್ಲಿ ಗುಣ ಮಟ್ಟದ ಊಟ, ಉಪಹಾರ ದೊರೆಯಲಿದ್ದು ಬಡ ಜನತೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ನಂತರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ್ ಮಾತನಾಡಿ ಇಂದಿನ ದುಬಾರಿ ಕಾಲಘಟ್ಟದಲ್ಲಿ ಹೋಟಲ್ ಗಳಲ್ಲಿ ಊಟ, ಉಪಹಾರಕ್ಕೆ 80 ರಿಂದ 100ರೂಪಾಯಿ ವ್ಯಯಿಸಿ ಊಟ, ಉಪಹಾರ ಮಾಡಬೇಕಿತ್ತು, ಇದರಿಂದ ಬಡ, ಮದ್ಯಮ ವರ್ಗದ ಕೂಲಿಕಾರರು, ಹಮಾಲರು ದುಡಿದ ಅರ್ಧ ಹಣದಲ್ಲಿ ಊಟ, ಊಪಹಾರಕ್ಕೆ ಕಳೆಯಬೇಕಾಗಿತ್ತು, ಇಂದು ಆ ತಾಪತ್ರಯ ದೂರವಾಗಿ ಕಡಿಮೆ ವೆಚ್ಚದಲ್ಲಿ ಆರೋಗ್ಯಪೂರ್ಣ ಉತ್ತಮ ಗುಣಮಟ್ಟದ ಆಹಾರ ಇಂದಿರಾ ಕ್ಯಾಂಟಿನಿನಲ್ಲಿ ದೊರೆಯುತ್ತದೆ ಎಂದರು.

ಬಡ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಬೇಗ ಬರುವುದರಿಂದ ಊಟ, ಉಪಹಾರಕ್ಕೆ ಹಣದ ಚಿಂತೆ ಕಾಡುತಿತ್ತು, ಈಗ ಕಡಿಮೆ ದರದಲ್ಲಿ ಊಟ ದೊರೆಯುತಿದ್ದು ಶಾಲಾ, ಕಾಲೇಜು ಮಕ್ಕಳಿಗೂ ಸಹ ಅನುಕೂಲವಾಗಲಿದೆ ಎಂದರು.

ಊಟದಲ್ಲಿ ವಾರದ ಒಂದು ದಿನ ವಿಷೇಶವಾಗಿ ರಾಗಿ ಮುದ್ದೆ, ಉಪಹಾರ ಪಲಾವ್, ಇಡ್ಲಿ, ಅನ್ನ ಸಾಂಬಾರ ದೊರೆಯಲಿದೆ ಎಂದರು.

ಈ ಇಂದಿರಾ ಕ್ಯಾಂಟಿನ್ ಇದೆ. ಮೇ 27ರಂದು ಉಧ್ಘಾಟನೆಯಾಗಲಿದೆ. ಕಾರ್ಯಕ್ರಮದ ಉಧ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರಾದ ಬಸವರಾಜ ರಾಯರಡ್ಡಿ ವಹಿಸಲಿದ್ದಾರೆ. ಇನ್ನೂಳಿದಂತೆ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮುಖಂಡರು, ಜನ ಪ್ರತಿನಿಧಿಗಳು, ಹಿರಿಯರು, ಮಹಿಳೆಯರು, ಸರಕಾರಿ ಕಚೇರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ, ರಾಮಣ್ಣ ಬಂಕದಮನಿ, ನೂರುದ್ದಿನ್ ಸಾಬ ಗುಡಿಹಿಂದಲ್, ಯಲ್ಲಪ್ಪ ಕಲ್ಮನಿ ಹಾಗೂ ಇನ್ನಿತರರು ಇದ್ದರು.

ವರದಿ : ಪಂಚಯ್ಯ ಹಿರೇಮಠ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *