Breaking News

ಕೊಟಯ್ಯ ಕ್ಯಾಂಪ್ ನಲ್ಲಿ ಜಾಗೃತಿ ಕಾರ್ಯಕ್ರಮ

ದುಡಿಯೋಣ ಬಾ & ಸ್ತ್ರೀ ಚೇತನ ಅಭಿಯಾನದ ಲಾಭ ಪಡೆಯಿರಿ,ತಾ.ಪಂ. ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಮಾಹಿತಿ

ಜಾಹೀರಾತು

Awareness program at Kotaiya Camp

ಗಂಗಾವತಿ : ತಾಲೂಕಿನ ಹೊಸ್ಕೇರಾ ಗ್ರಾಮದ ಆಂಜನೇಯ ದೇವಸ್ಥಾಳ ಬಳಿ ಹಾಗೂ ಕೊಟಯ್ಯ ಕ್ಯಾಂಪ್ ನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ನಡೆಸಿ ಶುಕ್ರವಾರ ಕೂಲಿಕಾರರಿಗೆ ನರೇಗಾ ಜಾಗೃತಿ ಕರಪತ್ರ ವಿತರಿಸಿ ಮಾಹಿತಿ ನೀಡಲಾಯಿತು.

ಈ ವೇಳೆ, ತಾಪಂ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ದುಡಿಯೋಣ ಬಾ ಅಭಿಯಾನ ಶುರುವಾಗಿದ್ದು, ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುತ್ತಿದೆ. ಜೊತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕೈಗೊಳ್ಳಲಾಗಿದೆ. ಎಲ್ಲರೂ ಈ ಅಭಿಯಾನಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಪಂ ನಮೂನೆ 6 ಸಲ್ಲಿಸಿ ಕೆಲಸ ಪಡೆಯುವಂತೆ ತಿಳಿಸಿದರು.

ಏ.1 ರಿಂದ ನರೇಗಾ ಕೂಲಿ ಮೊತ್ತ 349 ರಿಂದ 370 ರೂ.ಗೆ ಹೆಚ್ಚಿಸಲಾಗಿದೆ. ವರ್ಷಕ್ಕೆ 100 ಮಾನವ ದಿನಗಳ ಅವಕಾಶವಿದೆ. ವೃದ್ಧರು, ವಿಕಲಚೇತನರು, ಗರ್ಬಿಣಿಯರು, ಬಾಣಂತಿಯರಿಗೆ ಕೆಲಸದಲ್ಲಿ ರಿಯಾಯಿತಿ ಸೌಲಭ್ಯವಿರುತ್ತದೆ. ಇನ್ನೂ ಮೇ ತಿಂಗಳ ಬೇಸಿಗೆ ಅವಧಿಯಲ್ಲಿ ಕೆಲಸದಲ್ಲಿ ಶೇ.30 ವಿನಾಯತಿ ಇರುತ್ತದೆ ಎಂದರು.

ಗ್ರಾಪಂ ಸಿಬ್ಬಂದಿಗಳು ದಿನಕ್ಕೆ ಎರಡು ಬಾರಿ ಎನ್ ಎಂಎಂಎಸ್ ಹಾಜರಿ ಕಡ್ಡಾಯ & ಪಾರದರ್ಶಕವಾಗಿ ಹಾಕಬೇಕು. ಸಾರ್ವಜನಿಕರ ಕುಂದುಕೊರತೆಗಾಗಿ ಏಕೀಕೃತ ಸಹಾಯವಾಣಿ ಸಂಖ್ಯೆ 82775 06000 ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.

ತಾಂತ್ರಿಕ ಸಹಾಯಕರಾದ ಶರಣಯ್ಯ ಅವರು, ಕೂಲಿಕಾರರು ತಮಗೆ ಅಳತೆ ನೀಡಿರುವ ಪ್ರಕಾರ ಕೆಲಸ ನೀರ್ವಹಿಸಬೇಕು. ಕೆಲಸದ ಪ್ರಮಾಣದ ಮೇಲೆ ಕೂಲಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ. ಕಾರ್ಯದರ್ಶಿಗಳಾದ ವಿರುಪಾಕ್ಷಯ್ಯಸ್ವಾಮಿ,ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯ ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾನೇಶ, ತಾ.ಪಂ. ನರೇಗಾ ಡಿಇಓ ಹನುಮೇಶ, ಗ್ರಾಪಂ
ಸಿಬ್ಬಂದಿಗಳಾದ ದೊಡ್ಡಬಸವ, ಲಕ್ಷ್ಮಣ, ಮಲ್ಲಿಕಾರ್ಜುನ, ಬಿಎಫ್ ಟಿ ಮಂಜುನಾಥ, ವಿಆರ್ ಡಬ್ಲ್ಯೂ ಮಂಜುನಾಥ, ಡಣಾಪುರ ಗ್ರಾಪಂ ಗ್ರಾಮ ಕಾಯಕ ಮಿತ್ರರಾದ ಮಲ್ಲಮ್ಮ, ಸಂಜೀವಿನಿ ಯೋಜನೆಯ
ಎಂ.ಬಿ.ಕೆ. ದ್ರಾಕ್ಷಾಯಣಿ, ಎಲ್ ಸಿಆರ್ ಪಿಗಳಾದ ಅನಿತಾ, ಅನಂತ ಲಕ್ಷ್ಮಿ, ಪಶುಸಖಿ ಜ್ಯೋತಿ, ಸ್ವಸಹಾಯ ಸಂಘದ ಮಹಿಳೆಯರು, ಕೂಲಿಕಾರರು ಇದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.