Follow traffic rules for safety… Sub-Inspector Ismail Saab appeals.

ಗಂಗಾವತಿ -6–ಸುರಕ್ಷಿತೆಯ ಹಿತದ್ರಷ್ಟಿಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಗಂಗಾವತಿಯ ನಗರ ಸಂಚಾರ ಪೊಲೀಸ್ ಠಾಣೆಯ ನೂತನ ಉಪನಿರಿಕ್ಷಕರಾದ ಇಸ್ಮಾಯಿಲ್ ಸಾಬ್ ಹೇಳಿದರು. ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯು ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಆಕಸ್ಮಿಕ ಜನಿಸಿದ ನಾವು ನಮ್ಮ ಜೀವವನ್ನು ಕಾಪಾಡಿಕೊಳ್ಳುವದು ಎಲ್ಲರ ಜವಾಬ್ದಾರಿಯಾಗಿದೆ ರಸ್ತೆಯ ಅಪಘಾತದಲ್ಲಿ ಗಾಯಗೊಂಡು ಅಥವಾ ಜೀವ ಕಳೆದುಕೊಂಡು ಕುಟುಂಬದವರ ದುಃಖಕ್ಕೆ ಕಾರಣವಾಗಬಾರದು. ಮಧ್ಯಪಾನ ಮಾಡಿ ವಾಹನ ಚಲಾಯಿಸುವದು, ವಾಹನ ಚಳಿಸುತ್ತಾ ಮೊಬೈಲ್ನಲ್ಲಿ ಮಾತನಾಡುವದು. ಅತೀ ವೇಗವಾಗಿ ಚಲಿಸುವದು ಮಾಡದೇ ಮಕ್ಕಳಿಗೆ ಬೈಕ್ ನೀಡಬಾರದು ಸೇರಿದಂತೆ ಸಂಚಾರಿಯ ಎಲ್ಲಾ ನಿಯಮಗಳನ್ನು ಪಾಲಿಸುವದರ ಮೂಲಕ ನಮ್ಮ ಇಲಾಖೆಗೆ ಸಮಸ್ತ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.ಸಂಘ ದ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ಇಸ್ಮಾಯಿಲ್ ಸಾಹೇಬ್ ಇವರು ಇಲಾಖೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಕಾರ್ಯನಿರ್ವಾಸುತ್ತಾ ಸಂಚಾರಿ ನಿಯಮಗಳನ್ನು ಜನತೆಗೆ ತಿಳಿಸುತ್ತಾ ಜನಸ್ನೇಹಿಯಾಗಿದ್ದಾರೆ. ಇವರ ಅವಧಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡುವದರ ಜೊತೆಗೆ ಪ್ರತಿದಿನ ನಗರದಲ್ಲಿ ಸಾವಿರಾರು ವಾಹಗಳು ಹಾಗೂ ಟ್ರಿಪರ್ ಗಳು ಚಲಿಸುತ್ತಿದ್ದು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಶಾಲಾ ಪ್ರಾರಂಭ ಹಾಗೂ ಮುಕ್ತಾಯ ಸಮಯದಲ್ಲಿ ಅಬೇಡ್ಕರ್ ಸರ್ಕಲ್, ಕನಕದಾಸ ಸರ್ಕಲ್, ಸೇರಿದಂತೆ ಪ್ರಮುಖ ಸರ್ಕಲ್ ಗಳಲ್ಲಿ ಪೊಲೀಸ್ ಅಥವಾ ಹೋಮ್ ಗಾರ್ಡ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಮಕ್ಕಳಲ್ಲಿರುವ ಆತಂಕ ದುರಮಾಡಬೇಕು. ಹಾಗೂ ನಗರದಲ್ಲಿ ದ್ವಿಚಕ್ರ ವಾಹನಗಳ ಮತ್ತು ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ನಮ್ಮ ಸಂಘವು ಇಲಾಖೆಗೆ ಸಹಕಾರ ನೀಡುವದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ, ಕೃಷ್ಣ ಮೆಟ್ರಿ, ಸುರೇಶ, ರಮೇಶ್, ಮತ್ತಿತರರು ಇದ್ದರು ಎಂದು ಮ್ಯಾಗಳಮನಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.