ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನಾದಿನಾಚರಣಹಾಗೂದತ್ತಿಉಪನ್ಯಾಸಕಾರ್ಯಕ್ರಮ.
111th Inauguration Ceremony of Kannada Sahitya Parishad and lecture programme.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ .ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗಂಗಾವತಿ, ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು
ಶ್ರೀರಾಮನಗರ,ಇವರಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ,೧೧೧ ನೇ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಭೂದಾನಿಗಳಾದ ಚಿಲುಕೂರಿ ರಾಮಕೃಷ್ಣ ಹಾಗೂ ಗ್ರಾಮದ ಹಿರಿಯರಾದ, ಗ್ರಾಮಪಂಚಾಯತ್ ಸದಸ್ಯರು ವೀರರಾಜು ಗ್ರಾಂ ಪಂ ಅಧ್ಯಕ್ಷರಾದ ಶ್ರೀಶಾಂತಪ್ಪ ರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಶೋಭಾ ಕೆ ಎಸ್ ಪ್ರಾಚಾರ್ಯರು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಕಾರ್ಯಕ್ರಮವನ್ನು ಆಶಯನುಡಿಗಳನ್ನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ರುದ್ರೇಶ್ ಎಂ ಆರ್‍ಹಾಳ, ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ರಲ್ಲಿ ಹುಟ್ಟಿಕೊಂಡದ್ದು ಕನ್ನಡ ಸಾಹಿತ್ಯ ಪರಿಷತ್ತು ಇಂದು (ಮೇ ೫) ೧೧೧ನೆಯ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನಿಸಿಕೊಂಡಿರುವ ಇದು ಕನ್ನಡಿಗರೆಲ್ಲರ ಮಾತೃಸಂಸ್ಥೆ ಕೂಡ ಹೌದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲರಾದ ಡಾ.ಶೋಭಾ ಕೆ.ಎಸ್ ರವರು
ಕನ್ನಡ ಭಾಷೆಯನ್ನು ಉಳಿಸಬೇಕು,ಬೆಳೆಸಬೇಕು,
ಬಳಸಬೇಕೆಂದರು.ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದರು.
ನಂತರದಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ಪರಿಚಯ ಮತ್ತು ಕನ್ನಡ ಸಾಹಿತ್ಯದ ಅಸ್ಮಿತೆ ಕುರಿತು ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕರಾದ ತಾತಪ್ಪ ಕೆ. ಮಾತನಾಡಿ
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿ. ಅಲ್ಲಿಂದ ಮುಂದೆ ನಿರಂತರವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುತ್ತ ಬಂದಿದ್ದು, ಅವುಗಳು ಕನ್ನಡ ನಾಡು-ನುಡಿಗಳ ಕುರಿತು ಚಿಂತನೆ ನಡೆಸುವ ಮಹತ್ವದ ಕೊಡುಗೆ ಜೊತೆಗೆ ಕನ್ನಡಿಗರು ಒಂದಾಗಿ ಸೇರುವ ತಾಣಗಳಾಗಿವೆ. ಕರ್ನಾಟಕ ರಾಜ್ಯದ ಏಕೀಕರಣ ಮತ್ತು ನಾಮಕರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನೀಡಿದ ಕೊಡುಗೆ ಅಪಾರ ಇದೆ ಎಂದರು. ನಂತರ ಶಿಕ್ಷಕರಾದ ಶರಣಪ್ಪ ಕಂಬಾರ ಮಾತನಾಡಿ, ಭಾರತ ಸ್ವಾತಂತ್ರ್ಯದಲ್ಲಿ ಕೆಲವು ಮಹಿಳೆಯರ ಪಾತ್ರ, ನಾಡಿನ ಪ್ರಚಲಿತ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ, ಶೋಷಣೆ ರಹಿತ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ಕಾಲೇಜು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿ ಹೇಳಿದರು. ಸಹಪ್ರಾಧ್ಯಾಪಕರಾದ ಡಾ.ಸರ್ಫರಾಜ್ ಅಹ್ಮದ್ ಹಾಗೂ ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀ ಮಹ್ಮದ್ ರಫಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀ ಶರಣೇಗೌಡ ಪೊಲೀಸ್ ಪಾಟೀಲ್ ರವರು ಕನ್ನಡ ಭಾಷೆಯ ಹಿರಿಮೆ ಗರಿಮೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಕ್ರಿಯಾಶೀಲವಾದ ಕಾರ್ಯಚಟುವಟಿಕೆಗಳನ್ನು ಕುರಿತು ಅಧ್ಯಕ್ಷೀಯ ನುಡಿಗಳನ್ನಾಡಿದರು.
ವೇದಿಕೆಯ ಮೇಲೆ ಗ್ರಾ.ಪಂ ಸದಸ್ಯರಾದ ಶ್ರೀ ಮೆಹಬೂಬ ಹಾಗೂ ಕಸಾಪ ಪದಾಧಿಕಾರಿಗಳಾದ ರಮೇಶ್ ಬಾಳಿಕಾಯಿ, ಶಶಿಧರ್ ಕಾಲೇಜಿನ ಸಿಬ್ಬಂದಿಯವರ ಶಶಿಕುಮಾರ್, ವಿರೂಪಾಕ್ಷಪ್ಪ, ಶಂಕ್ರಪ್ಪ,ಯಮನೂರಪ್ಪ ಸಿಂಗನಾಳ ಹಾಗೂ ಉಪನ್ಯಾಸಕರಾದ ವೆಂಕಟರಾಜು,ದೇವರಾಜ್ ಅಲ್ಲದೇ ಜಬೀನಾಬೇಗಂ, ವಿನಾಯಕ,ಶಾಂತಮ್ಮ ಉಪಸ್ಥಿತರಿದ್ದರು.ಪಲ್ಲವಿ,
ದಾನೇಶ್ವರಿ ನಿರೂಪಿಸಿದರೆ, ಗಾಯಿತ್ರಿ ಸ್ವಾಗತಿಸಿ, ರಾಜೇಶ್ ವಂದಿಸಿದರು, ಸುಶ್ರಾವ್ಯವಾಗಿ ಶಾರದಾ,ಕಾವೇರಿ,ಶಿವಾಂಜಲಿ ಪ್ರಾರ್ಥಿಸಿದರು.
