ವಡ್ಡರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಇಲಾಖೆಯನರ್ಸರಿಯಲ್ಲಿಕಾಯಕಬಂಧುಗಳಕಾರ್ಯಾಗಾರ

A workshop for fitness enthusiasts at the nursery of the Forest Department under the jurisdiction of Vaddarahatti Gram Panchayat

ಜಾಹೀರಾತು

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕಾಯಕ ಬಂಧುಗಳ ಕಾರ್ಯಾಗಾರ ನಡೆಸಿ ಕಾಯಕಬಂಧುಗಳ ಕರ್ತವ್ಯಗಳು ಹಾಗೂ ನರೇಗಾ ಯೋಜನೆಯ ಮಾಹಿತಿ ನೀಡಲಾಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಚಲವಾದಿ ಅವರು ಮಾತನಾಡಿ,
ದಿನಕ್ಕೆ 2 ಬಾರಿ NMMS ಹಾಜರಾತಿ ಕಡ್ಡಾಯವಾಗಿ ಇರುತ್ತದೆ. ಕಾಯಕ ಬಂಧುಗಳು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ಕೂಲಿಕಾರರು ಕೆರೆ, ನಾಲಾ ಹೂಳೆತ್ತುವ ಕಾಮಗಾರಿಗಳಲ್ಲಿ ಮಾಡಬೇಕಾದ ಕೆಲಸದ ಪ್ರಮಾಣ ಕುರಿತು ಮಾಹಿತಿ ನೀಡಿದರು.

ಐಇಸಿ ಸಂಯೋಜಕರು ಮಾತನಾಡಿ, ನರೇಗಾ ಕೂಲಿ ಮೊತ್ತ 349 ರಿಂದ 370 ರೂಗೆ ಹೆಚ್ಚಳವಾಗಿದೆ. ಬೇಸಿಗೆ ಅವಧಿಯಲ್ಲಿ ಕೆಲಸದಲ್ಲಿ ಶೇ.30 ರಿಯಾಯಿತಿ ಸೌಲಭ್ಯವಿದೆ. ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ಶುರುವಾಗಿದ್ದು, ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುವುದು. ಕಾಯಕ ಬಂಧುಗಳು ಗ್ರಾಪಂಗೆ ನಮೂನೆ 6 ಸಲ್ಲಿಸಿ ಕೂಲಿಕಾರರಿಗೆ ಕೆಲಸ ಕೊಡಿಸುವಂತೆ ತಿಳಿಸಲಾಯಿತು. ಜೊತೆಗೆ ನರೇಗಾ ಏಕೀಕೃತ ಸಹಾಯವಾಣಿ 82775 06000 ಕುರಿತು ಮಾಹಿತಿ ನೀಡಿ ನರೇಗಾ ಜಾಗೃತಿ ಕರಪತ್ರ ವಿತರಿಸಲಾಯಿತು.

ಈ ವೇಳೆ, ತಾಂತ್ರಿಕ ಸಂಯೋಜಕರು, ಗ್ರಾಪಂ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಇದ್ದರು.