Gangavathi hobli level progress review meeting

ಗಂಗಾವತಿ ಅಭಿವೃದ್ಧಿಗೆ ಹೆಚ್ಚು ಗಮನಹರಿಸಿ ಸಂಸದರಾದ ಶ್ರೀ ಕೆ.ರಾಜಶೇಖರ ಹಿಟ್ನಾಳ ಸಲಹೆ
ಗಂಗಾವತಿ : ಗಂಗಾವತಿ ನಗರ ಜಿಲ್ಲೆಯಲ್ಲೇ ದೊಡ್ಡ ನಗರವಾಗಿ ಬೆಳೆಯುತ್ತಿದ್ದು, ಗಂಗಾವತಿ ಸರ್ವತೋಮುಖ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಂಸದರಾದ ಶ್ರೀ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ತಾ.ಪಂ. ಮಂಥನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗಂಗಾವತಿ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ನಗರದಲ್ಲಿ ಬಾಕಿ ತೆರಿಗೆ ವಸೂಲಿ ಶೇ.100 ರಷ್ಟು ಆಗಬೇಕು. ನಾಲ್ಕನೇ ಹಂತದ ನಗರೋತ್ಥಾನ ಅನುದಾನ ಸರಿಯಾಗಿ ಬಳಕೆಯಾಗಬೇಕು. 1.20 ಲಕ್ಷ ಜನ ವಸತಿ ಇರುವ ನಗರವನ್ನು ಪ್ರವಾಸೋದ್ಯಮ ಹಾಗೂ ಎಲ್ಲ ರೀತಿಯಿಂದ ಅಭಿವೃದ್ಧಿ ಪಡಿಸಬೇಕಿದೆ. ನಗರದಲ್ಲಿ ಅನಧಿಕೃತ ಲೇಔಟ್ ಗಳಿಂದ ಫಾರಂ 3 ಸಮಸ್ಯೆಯಾಗಿದ್ದು, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸೋಣ. ಫಾರಂ 3 ಹಾಗೂ ಹಕ್ಕುಪತ್ರ, ಸ್ಲಂ ಬೋರ್ಡ್ ನಿವಾಸಿಗಳ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ನಂತರ ನಗರಸಭೆ ಸದಸ್ಯರು, ಅಧ್ಯಕ್ಷರು, ಸ್ಥಾಯಿ ಸಮಿತಿಯ ಸದಸ್ಯರಿಂದ ಸಮಸ್ಯೆಗಳ ಪಟ್ಟಿ ಪಡೆದು, ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಎಲ್ಲರೂ ಜೊತೆಗೂಡಿ ಕೆಲಸ ಮಾಡೋಣ ಎಂದರು.
ಗಂಗಾವತಿ ತಾಲೂಕಿನಲ್ಲಿ ಸಂಗಾಪುರ ಗ್ರಾಮವನ್ನು ಸಂಸದರ ದತ್ತು ಗ್ರಾಮಕ್ಕೆ ಆಯ್ಕೆಯಾಗಿದೆ. ಈ ಕುರಿತು ಗ್ರಾಮದಲ್ಲಿ ಸರ್ವೇ ಕಾರ್ಯ ಮಾಡಲಾಗಿದ್ದು, ನೆಡತೋಪು, ಗೋದಾಮು, ಅಂಗನವಾಡಿ, ಸಿಸಿ ರಸ್ತೆ , ಚರಂಡಿ, ಸ್ಮಶಾನ ಅಭಿವೃದ್ಧಿ, ಶೌಚಾಲಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳನ್ನೊಳಗೊಂಡ 3.37 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಜಿಪಂಗೆ ಕಳುಹಿಸಲಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕರಾದ ಶ್ರೀ ಮಹಾಂತಗೌಡ ಪಾಟೀಲ್ ಅವರು ಸಭೆಗೆ ಮಾಹಿತಿ ನೀಡಿದರು. ನಂತರ ಗಂಗಾವತಿ ಹೋಬಳಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಸೃಜನೆಗೊಂಡ ಮಾನವ ದಿನಗಳ ವರದಿ ಒಪ್ಪಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮರೆಡ್ಡಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಿಎಂವೈ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 4853 ವಸತಿ ರಹಿತರ ಸರ್ವೇ ಕಾರ್ಯ ಮಾಡಲಾಗಿದೆ. ಮೇ 15 ರವರೆಗೆ ಸರ್ವೇ ಕಾರ್ಯ ನಡೆಯಲಿದೆ ಎಂದರು.
ಗಂಗಾವತಿ ಹೋಬಳಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಎಸ್ ಬಿಎಂ, ಎನ್ ಆರ್ ಎಲ್ ಎಂ- ಸಂಜೀವಿನಿ ಯೋಜನೆ, ನರೇಗಾ ಪ್ರಗತಿ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಜೆಜೆಎಂ ಪ್ರಗತಿ ಕುರಿತು ಆರ್ ಡಬ್ಲ್ಯು ಎಸ್ ಸಿಬ್ಬಂದಿ ಮಾಹಿತಿ ನೀಡಿದರು.
ಈ ವೇಳೆ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಪ್ರತಿಕ್ರಿಯಿಸಿ, ಹಳ್ಳಿಗಳಲ್ಲಿ ಇನ್ನೂ ಸ್ವಲ್ಪ ಕಾಮಗಾರಿ ಮುಗಿದರೆ ಜೆಜೆಎಂ ನೀರು ಮನೆಮನೆಗೆ ಸಿಗಲಿದೆ. ನಲ್ಲಿಗಳಿಗೆ ನೀರು ಸಂಪರ್ಕ ಕಲ್ಪಿಸುವ ಕಾರ್ಯವಾಗಬೇಕಿದೆ ಎಂದರು.
ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗದ ಹಕ್ಕುಪತ್ರಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಾಹಸ ಸಂಸ್ಥೆಯವರು ಸಣಾಪುರ, ಆನೆಗೊಂದಿಯಲ್ಲಿ ಘನತಾಜ್ಯ ವೈಜ್ಞಾನಿಕ ನಿರ್ವಹಣೆ ಕುರಿತು ಸಂಸದರಿಗೆ ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷರಾದ ಶ್ರೀಮತಿ, ಹೀರಾಬಾಯಿ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ ಚೌಡ್ಕಿ,ತಹಸೀಲ್ದಾರ್ ಶ್ರೀ ಯು.ನಾಗರಾಜ,
ನಗರಸಭೆ ಫೌರಾಯುಕ್ತರಾದ ಶ್ರೀವಿರೂಪಾಕ್ಷಮೂರ್ತಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಶ್ರೀ ಡಾ.ಕೆ.ವಿ.ವೆಂಕಟೇಶ ಬಾಬು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನಗರಸಭೆ ಅಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷರು -ಉಪಾಧ್ಯಕ್ಷರು, ಸದಸ್ಯರು, ಕೆಡಿಪಿ ಹಾಗೂ ವಿವಿಧ ಸಮಿತಿ ಸದಸ್ಯರು ಇದ್ದರು.