Breaking News

ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನುಮಾಡಿದವರಿಗೆ ಶಿಕ್ಷೆಯಾಗಬೇಕು-ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ

Regarding the case of cutting the Yajnopoovita in the CET exam, those who committed this heinous act should be punished – Vaishvakarman Brahmin condemnation

ಜಾಹೀರಾತು
Screenshot 2025 04 23 19 01 06 50 6012fa4d4ddec268fc5c7112cbb265e7

ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು – ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ (ಗುರೂಜಿ ವೇದಬ್ರಹ್ಮಶ್ರೀ ಆಚಾರ್ಯ ಟಿ. ಮೋಹನ ರಾವ್ ಶರ್ಮ. ಬೆಂಗಳೂರು. )

ಮೊನ್ನೆ ನಡೆದಂತಹ ಸಿಇಟಿ ಎಕ್ಸಾಮ್ ನಲ್ಲಿ ಶಿವಮೊಗ್ಗ , ತೀರ್ಥಹಳ್ಳಿ ,ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತವನ್ನು ಕಿತ್ತು ಹಾಕುವ ಹಾಗೂ ಕಟ್ ಮಾಡುವ ದುರಂತವನ್ನು ನಾವು ಖಂಡಿಸುತ್ತಿದ್ದೇವೆ. ನಮ್ಮ ಭಾರತದ ನೆಲೆ ಯಜ್ಞ ಭೂಮಿ ಎಂದು ಕರೆಯುತ್ತಾರೆ.
ಅದರಲ್ಲೂ ದಕ್ಷಿಣ ಭಾರತ ಆಧ್ಯಾತ್ಮಿಕ ಹಾಗೂ ಸನಾತನ ಸಂಸ್ಕೃತಿಯಲ್ಲಿ ಮುಂದುವರೆದಂತಹ ತಪೋಭೂಮಿ ಆಗಿರುತ್ತದೆ. ಎಂಬುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ.
ಇದಕ್ಕೆ ಪುರಾವೆಗಳು ಪುರಾತನ ಕಾಲದಿಂದಲೂ ನಡೆದು ಬಂದಿರುವಂತಹ ವೈದಿಕ ಆಚಾರ ಸಂಸ್ಕೃತಿ ಇದೆ. ಮತ್ತು ಇದನ್ನ ರಕ್ಷಣೆ ಮಾಡುವ ಸಂಸ್ಕೃತಿ ಯುಗ ಯುಗಗಳಿಂದಲೂ ಚಕ್ರವರ್ತಿಗಳು ರಾಜರು ಉಳಿಸಿ ಬೆಳೆಸಿ ಸಂರಕ್ಷಿಸಿಕೊಂಡು ಬಂದಿದ್ದಾರೆ.
ಪ್ರಸ್ತುತ ಕಾಲದಲ್ಲೂ ಕೂಡ ನಮ್ಮ ಸನಾತನ ಸಂಸ್ಕೃತಿಯನ್ನು ಪಾಶ್ಚ್ಯಾತ್ಯ ದೇಶಿಯರು ಕೂಡ ತುಂಬಾ ಗೌರವಿಸುತ್ತಾ ಸ್ಟೇಟ್ಮೆಂಟುಗಳು , ವ್ಯಾಖ್ಯಾನಗಳು ಮಾಡುತ್ತಾ ಇದನ್ನು ನೋಡಲಿಕ್ಕೆ ಹಾಗೂ ಕಲಿಬೇಕು ಎಂಬ ಕೋರಿಕೆಯಿಂದ ನಮ್ಮ ದೇಶಕ್ಕೆ ಆಗಮಿಸಿ ನಮ್ಮ ಸನಾತನ ಧಾರ್ಮಿಕ ಸಂಸ್ಕೃತಿಯನ್ನು ಇಷ್ಟಪಟ್ಟು ಕಲಿಯುತ್ತಿದ್ದಾರೆ.
ನಮ್ಮ ಸನಾತನ ಸಾಂಪ್ರದಾಯದಲ್ಲಿ ಯಜ್ಞೋಪವೀತಕ್ಕೆ ಅತ್ಯುತ್ತಮ ಸ್ಥಾನ ಮಾನವಿದೆ.
ಇದನ್ನು ಪ್ರಾಂತೀಯ ಭಾಷೆಯಲ್ಲಿ ಜನಿವಾರ ಎಂದು ಕರೆಯುವುದುಂಟು.
ಸಮಾಜದಲ್ಲಿ ಸನಾತನ ಧರ್ಮಕ್ಕೆ ರಕ್ಷಣೆ ಮಾಡಿಕೊಂಡು ವೇದಗಳನ್ನು ಉಪನಿಷತ್ತುಗಳನ್ನು ಶಿಲ್ಪ ಶಾಸ್ತ್ರಗಳನ್ನು ಆಗಮ ಶಾಸ್ತ್ರಗಳನ್ನು ಕಲಿತು ಸಾಂಪ್ರದಾಯಕ ಶಿಲ್ಪವನ್ನು , ದೇವಾಲಯ ಶಿಲ್ಪವನ್ನು ಮಾಡಿ ಪ್ರತಿಷ್ಠಾಪನಾಧಿಗಳನ್ನು ಮಾಡುತ್ತಾ ಪೌರೋಹಿತ್ಯ ಕೂಡ ಮಾಡುತ್ತಾ ಸನಾತನ ಭಾರತೀಯ ಸಾಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿರುವಂತಹ ಸನಾತನ ವೈದಿಕ ಬ್ರಾಹ್ಮಣರು ಆದ ವಿಶ್ವಕರ್ಮ ವಂಶಿಯರು (ವೈಶ್ವಕರ್ಮಣರು/ವಿಶ್ವಕರ್ಮ ಬ್ರಾಹ್ಮಣರು) , ಮತ್ತು ಸಮಾಜದಲ್ಲಿ ಬ್ರಾಹ್ಮಣರು ಎಂದು ಗುರುತಿಸಿಕೊಂಡು ದೇವಸ್ಥಾನಗಳಲ್ಲಿ ಅರ್ಚಕತ್ವ ಹಾಗೂ ಸಮಾಜದಲ್ಲಿ ಪೌರೋಹಿತವನ್ನು ಮಾಡುತ್ತಿರುವ ಪೌರಾಣಿಕ ಬ್ರಾಹ್ಮಣರು ಕೂಡ ಯಜ್ಞೋಪವೀತ ಧಾರಣೆಯನ್ನು ಮಾಡುತ್ತಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಅದನ್ನು ಕಾಪಾಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.
ತಮ್ಮ ಮಕ್ಕಳಿಗೆ ಬಹಳಷ್ಟು ಖರ್ಚು ವೆಚ್ಚ ಮಾಡಿ ವೈದಿಕ ಸಾಂಪ್ರದಾಯದಂತೆ ಬಂಧು ಮಿತ್ರರೆಲ್ಲರಿಗೂ ಕರೆದು ಸಾಂಪ್ರದಾಯವನ್ನು ಅನುಸರಿಸಿಕೊಂಡು ಅದ್ಧೂರಿಯಾಗಿ ಮಾಡುವ ಆಚಾರವನ್ನು ಅನುಸರಿಸುತ್ತಾ ಬರ್ತಿದ್ದಾರೆ.
ಯಜ್ಞೋಪವೀತವನ್ನು ಧಾರಣೆ ಮಾಡಿದ ದಿನದಿಂದ ಆ ವಟು ಅಂದ್ರೆ ಆ ಬ್ರಹ್ಮಚಾರಿ ನಿತ್ಯ ಅನುಷ್ಠಾನ ಸಂಧ್ಯಾವಂದನಾಧಿಗಳನ್ನು ಮಾಡುತ್ತಾ ಸನಾತನ ಧರ್ಮವನ್ನು ಕಾಪಾಡುವುದಕ್ಕೆ ಸಿದ್ಧನಾಗ್ತಾನೆ.
ಹಿಂದಿನ ಕಾಲದ ವಿದ್ಯಾಲಯಗಳೆಂದರೆ ಗುರುಕುಲಗಳು. ಈ ಗುರುಕುಲಗಳಲ್ಲಿ ಮಕ್ಕಳನ್ನು ಸೇರಿಸಲು ಆ ಮಕ್ಕಳಿಗೆ ಉಪನಯನ ಮಾಡಿ ಯಜ್ಞೋಪವೀತಧಾರಣವನ್ನು ಮಾಡಿದ ನಂತರವೇ ಗುರುಕುಲದ ಪ್ರವೇಶಕ್ಕಾಗಿ ಅರ್ಹತೆಯನ್ನು ವಿದ್ಯಾರ್ಥಿ ಹೊಂದುತ್ತಾನೆ.
ಇದರ ಅರ್ಥ ಏನಂದ್ರೆ ವಿದ್ಯಾರ್ಥಿ ಗುರುಕುಲಕ್ಕೆ ಅಥವಾ ವಿದ್ಯಾಲಯಕ್ಕೆ ಸೇರಬೇಕಾದರೆ ಮುಖ್ಯವಾದ ಅರ್ಹತೆ ಯಜ್ಞೋಪವೀತ ಧಾರಣೆಯೇ ಆಗಿರುತ್ತದೆ. ಇಂತಹ ಪರಂಪರೆ ಇರುವಂತಹ ನಮ್ಮ ದೇಶದಲ್ಲಿ ಅದರಲ್ಲಿಯೂ ನಮ್ಮ ಕಲ್ಯಾಣ ಕರ್ನಾಟಕ ರಾಜ್ಯದಲ್ಲಿ ಈಗ ಕೆಲವು ದುಷ್ಟ ಅಧಿಕಾರಿಗಳು ಆ ವಿದ್ಯಾಲಯ ಅರ್ಹತೆಗೆ ಕಾರಣವಾದ ಯಜ್ಞೋಪವಿತವನ್ನೇ ತೆಗೆದುಹಾಕುವ ದುಷ್ಕಾರ್ಯಕ್ಕೆ ಮುಂದಾಗಿದ್ದಾರೆ.
ನಮ್ಮ ಸನಾತನ ಧರ್ಮಕ್ಕೆ ಬುನಾದಿ ಬೇರುಗಳು ಲಕ್ಷಾಂತರ ವರ್ಷಗಳ ಹಿಂದೆಯೇ ಬೆಳೆದು ಮಹಾವೃಕ್ಷವಾಗಿ ಈಗಲೂ ಸಹ ಸನಾತನ ಧರ್ಮೀಯರನ್ನು ಈ ಪುಣ್ಯಭೂಮಿಯ ಮೇಲೆ ನೆಲೆಸುವುದುಕ್ಕಾಗಿ ನೆರಳು ಕೊಡ್ತಾ ಇದೆ. ನಮ್ಮ ದೇವಿ ದೇವತೆಯರ ವಿಗ್ರಹಗಳಲ್ಲಿ ಕೂಡ ಯಜ್ಞೋಪವೀತವು ನಾವು ನೋಡಬಹುದು.
ತ್ರೇತಾಯುಗದ ಚಕ್ರವರ್ತಿ ಹಾಗೂ ಭಗವಂತನೂ ಅವತಾರ ಪುರುಷನಾದಂತಹ ಶ್ರೀರಾಮನ ಮೈಮೇಲೆಯೂ ಯಜ್ಞೋಪವೀತ ವನ್ನು ನಾವು ನೋಡಬಹುದು.
ಧರ್ಮ ಸಂಸ್ಥಾಪನೆಗಾಗಿ ಮಹಾಭಾರತದ ಕುರುಕ್ಷೇತ್ರದ ಧರ್ಮ ಯುದ್ಧವನ್ನು ನಡೆಸಿಕೊಟ್ಟಂತಹ ಅವತಾರ ಪುರುಷ ಜಗದ್ಗುರು ಆದಂತಹ ಶ್ರೀ ಕೃಷ್ಣನ ಮೈ ಮೇಲಿಯೂ ನೋಡಬಹುದು.
ಅದೇ ರೀತಿ ರಾಘವೇಂದ್ರ ಸ್ವಾಮಿಗಳು ಆದಿಶಂಕರ ಆಚಾರ್ಯರು ಗುರುಕುಲದ ಗುರುಗಳು ವಿದ್ಯಾರ್ಥಿಗಳು ಕ್ಷತ್ರಿಯರು ವೈಶ್ಯರು ಮುಂತಾದ ಜನರು ತಮ್ಮ ಪದ್ಧತಿಯಂತೆ ಸನಾತನ ಧರ್ಮದ ಆಚಾರವನ್ನು ಅನುಸರಿಸಿಕೊಂಡು ಯಜ್ಞೋಪವಿತಧಾರಣವನ್ನು ಮಾಡುತ್ತಾರೆ.
ಯಜ್ಞೋಪವೀತ ಧಾರಣೆಯ ಅಧಿಕಾರ ಸನಾತನ ಭಾರತದಲ್ಲಿ ಹುಟ್ಟಿ ಬೆಳೆದಿರುವ ಮತ್ತು ಸನಾತನ ಧರ್ಮವನ್ನು ಅನುಸರಿಸಿ ಬರುತ್ತಿರುವ ಎಲ್ಲಾಜನರಿಗೂ ಅಧಿಕಾರವಿದೆ. ಆದರೆ ಅದಕ್ಕೆ ಇರುವಂತಹ ಯಜ್ಞೋಪವೀತದ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಸಮಯ ಇಲ್ಲದವರು ಆಗದೆ ಇರುವವರು ಅದನ್ನ ಧರಿಸುವುದಿಲ್ಲ.
ಎಲ್ಲರೂ ಧರಿಸಬಹುದು ಎಂಬುದಕ್ಕೆ ಆಧಾರ ಮನುಸ್ಕೃತಿಯಲ್ಲಿ ಒಂದು ಶ್ಲೋಕ ಕೊಡುತ್ತದೆ.
” ಜನ್ಮನಾಜಾಯತೆ ಶೂದ್ರಃ, ಕರ್ಮಣಾ ಜಾಯತೆ ದ್ವಿಜಃ, ವೇದಪಾಠಂತು ವಿಪ್ರಾಣಾಂ ಬ್ರಹ್ಮ ಜ್ಞಾನಂತು ಬ್ರಾಹ್ಮಣಃ” – ಮನುಸ್ಮೃತಿ.
ಈ ಶ್ಲೋಕದ ಆಧಾರದಿಂದ ಸನಾತನ ಧರ್ಮವನ್ನು ಅವಲಂಬಿಸುವ ಎಲ್ಲರಿಗೂ ಯಜ್ಞೋಪವಿತವನ್ನು ಧರಿಸುವ ಅಧಿಕಾರವಿರುತ್ತದೆ. ಆದರೆ ಇದರ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಆಗದೇ ಇರುವವರು ಧರಿಸುತ್ತಿಲ್ಲ.
ಈ ನಿಟ್ಟಿನಲ್ಲಿ ಸರ್ಕಾರ ನಡೆಸುವ ಸಿಇಟಿ ಎಕ್ಸಾಮ್ ನಲ್ಲಿ ಇಂತಹ ಮಹಿಮಾನ್ವಿತ ಯಜ್ಞೋಪವೀತವನ್ನು ಅವಮಾನ ಮಾಡಿ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವಂತಹ ಸೂತ್ರವನ್ನು ಕಟ್ ಮಾಡಿ ಸನಾತನ ಧರ್ಮಕ್ಕೆ ದ್ರೋಹ ತರುವಂತೆ ಕ್ರೌರ ಕಾರ್ಯಕ್ಕೆ ಮಾಡಲು ಹಾಗೂ ಮಾಡಿಸುವ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಶಿಕ್ಷಿಸಿ ಇಂತಹ ಧರ್ಮ ದ್ರೋಹ ಕಾರ್ಯಗಳು (ಚಟುವಟಿಕೆ ಗಳನ್ನು) ಮುಂದೆ ಆಗದಂತೆ ನೋಡುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

ಇಂತಿ ಗುರೂಜಿ
ವೇದಬ್ರಹ್ಮಶ್ರೀ ಆಚಾರ್ಯ ಮೋಹನ ರಾವ್ ಶರ್ಮ,
(ಎಐವಿಎಫ್ ಸಂಸ್ಥೆ ಕರ್ನಾಟಕದ ಉಪಾಧ್ಯಕ್ಷರು,
ಅಂಜನಾದ್ರಿ ಆಶ್ರಮ ಹಾಗೂ ವೀರ ಬ್ರಹ್ಮೇಂದ್ರ ಸ್ವಾಮಿ ಆಶ್ರಮದ ಗುರೂಜಿ ಹಾಗೂ ಅಧ್ಯಕ್ಷರು,
ಅಂತರ್ರಾಷ್ಟ್ರೀಯ ವೈಶ್ವಕರ್ಮಣ ಧಾರ್ಮಿಕ ಪರಿಷತ್ ಎಂಬ ಸಂಸ್ಥೆಯ ಗುರೂಜಿ ಹಾಗೂ ಅಧ್ಯಕ್ಷರು.)
ಸ್ಥಪತಿ, ವೇದಾದ್ಯಾಯಿ ಶಿಲ್ಪ ಶಾಸ್ತ್ರ ಪಂಡಿತರು ಹಾಗೂ ಉಪನ್ಯಾಸಕರು, ಜ್ಯೋತಿಷ್ಯ ವಾಸ್ತು ಸಂಖ್ಯಾಶಾಸ್ತ್ರ ನಿಪುಣರು, ಸನಾತನ ಧರ್ಮ ವೈದಿಕ ಆಚಾರ ಜಾಗೃತಿಕರಣ ಶಿಬಿರಗಳ ಗುರುಗಳು. ಮತ್ತು ಸಮಾಜ ಸೇವಕಿ:ಪದ್ಮಾವತಿ ಸುಭಾಷ್ ಆಚಾರ್ಯ,- ಎಐವಿಎಫ್ ಕರ್ನಾಟಕ ಮಹಿಳಾ ಅಧ್ಯಕ್ಷರು,
ಸಂಘ ಸೇವಕಿ, ಬಳ್ಳಾರಿ.
ಆನೆಗೊಂದಿ ಮೂಲ ಮಠದ ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಸಂಘಟನೆ ಕಾರ್ಯದರ್ಶಿ, ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.