Breaking News

ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಾಲೂಕು ಆಡಳಿತ ನಿರ್ಧಾರ

Taluk administration decides to celebrate cultural leader Vishwaguru Basavanna’s 892nd birth anniversary with great enthusiasm

ಜಾಹೀರಾತು
20250423 184258 COLLAGE Scaled

ಗಂಗಾವತಿ:ದಿ, 23.04.2025ರಂದು ಸಾಯಂಕಾಲ 4:00 ನಗರದ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಹಶೀಲ್ದಾರ, ಶ್ರೀ ಯು.ನಾಗರಾಜ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಶ್ವ ಗುರು ಬಸವೇಶ್ವರ ಜಯಂತಿಯನ್ನು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಬೇಕು ಹಾಗೂ ಮೆರವಣಿಗೆಯ ರಸ್ತೆಯುದ್ದಕ್ಕೂ ನೀರು ಸಿಂಪಡಣೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ ಮಾಡಿ ಬಿಸಿಲಿನ ತಾಪ ಹೆಚ್ಚಿದ್ದರಿಂದ ಮೆರವಣಿಗೆಯನ್ನು ನಿಗದಿತ ಸಮಯದಂತೆ ಹೊರಡಿಸಿದರೆ ಚೆನ್ನಾಗಿರುತ್ತದೆ ಎಂದು ತಿಳಿಸಿರು, ಆದೇರೀತಿಯಾಗಿ ಜಯಂತಿಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸುವ ಕುರಿತು ಕ್ರಮಕೈಗೊಳ್ಳಬೇಕು. ಸದರಿ ಜಯಂತಿಯನ್ನು ಎಲ್ಲಾ ಧರ್ಮದವರು ಜಯಂತಿಯನ್ನು ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಸಭೆಯಲ್ಲಿ ತಿಳಿಸಿದರು ಹಾಗೂ ಎಲ್ಲಾ ಸಮಾಜ ಬಾಂಧವರು, ತಮ್ಮ ಸಂಯೋಗದೊಂದಿಗೆ ಸದರಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು ಹಾಗೂ ದಿನಾಂಕ:30.04.2025 ರಂದು ಬೆಳಿಗ್ಗೆ 8:00 ಗಂಟೆಗೆ ಎಲ್ಲಾ ತಾಲೂಕು ಮಟ್ಟದ ಕಛೇರಿಗಳಲ್ಲಿ, ಗ್ರಾಮಪಂಚಾಯತ್ ಕಛೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬಸವೇಶ್ವರ ಭಾವಚಿತ್ರದ ಪೂಜಾ ಕಾರ್ಯ ನೇರವೇರಿಸಿಕೊಂಡು ನಂತರ 09 ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ಸೇರಿ ಧ್ವಜಾರೋಹಣ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಹಾಗೂ ಈ ಕೆಳಕಂಡ ತಾಲೂಕು ಮಟ್ಟದ ಅಧಿಕಾರಿ ವರ್ಗದವರಿಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ಕೋರಿದರು.

IMG20250423170308 1024x768

ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಟ್ರ್ಯಾಕ್ಟರ್‌ನಲ್ಲಿ ಇಟ್ಟು ಸಿಂಗರಿಸಿ ಮೆರವಣಿಗೆ ತರುವುದು ಹಾಗೂ ವೃತ್ತಕ್ಕೆ ಹೂವಿನ ಅಲಂಕಾರ ಮಾಡುವುದು ಮತ್ತು ಮೆರವಣಿಗೆಯ ರಸ್ತೆ ಉದ್ದಕ್ಕೂ ನೀರು ಸಿಂಪಡಿಸುವುದು, ಸ್ವಚ್ಛತೆ ಹಾಗೂ ಕಾರ್ಯಕ್ರಮದ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಮಾಡುವುದು. ಪ್ರಮುಖ ಎಲ್ಲಾ ವೃತ್ತಗಳಿಗೆ ಬಾಳೆಕಂಬ, ತೆಂಗಿನ ಗರಿ ಕಟ್ಟುವುದು ಹಾಗೂ ಬಸವೇಶ್ವರ ವೃತ್ತದಲ್ಲಿ ಹೂವಿನ ಅಲಂಕಾರ ಮಾಡುವುದು. ಸದರಿ ಕಾರ್ಯಕ್ರಮದ ವೇದಿಕೆಯಲ್ಲಿ ಹೂವಿನ ಕುಂಡಲಿಗಳನ್ನು ತಂದು ಇಡುವುದು.ವೇದಿಕೆ ಕಾರ್ಯಕ್ರಮ ಶಾಸಕರ ಮಾದರಿಯ ಸ. ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸೂಕ್ತ ಶಾಮಿಯಾನ, ಮೈಕೆಸೆಟ್, ಆಸನ ಹಾಗೂ ವೇದಿಕೆ ವ್ಯವಸ್ಥೆ ಮಾಡುವುದು. ಪ್ರಸಾದ ವ್ಯವಸ್ಥೆ ಯನ್ನು ನಗರಸಭೆ ಸದಸ್ಯ ಸಿಂಗನಾಳ ಉಮೇಶ್ ಮಾಡಲು ಒಪ್ಪಿದರು.

ಈ ಸಭೆಯಲ್ಲಿ ವಿವಿದ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಬಸವಪರ ಸಂಘಟನೆ ಗಳ ಸದಸ್ಯರು, ಭಾಗವಹಿಸಿದ್ದು. ಈಸಭೆಯಲ್ಲಿ ಪತ್ರಕರ್ತ ಗೈರು ವಿಶೇಷವಾಗಿತ್ತು.

‘ಕಾರ್ಯಕ್ರಮದ ಸ್ತಬ್ಧ ಚಿತ್ರ ಮೆರವಣಿಗೆಯ ಟ್ರ್ಯಾಕ್ಟರ್‌ನಲ್ಲಿ ಮೇಕ್‌ಸೆಟ್, ಜನರೇಟರ್ ವ್ಯವಸ್ಥೆ ಮಾಡುವುದು ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಿದ್ಯುತ್ ನಿಲುಗಡೆಯಾಗದಂತೆ ಕ್ರಮ ವಹಿಸುವುದು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.