Appeal for Gangavathi-Daroji railway line grant.

ಗಂಗಾವತಿ: ನಗರದಿಂದ ದರೋಜಿ ಗ್ರಾಮಕ್ಕೆ ನೂತನವಾಗಿ ರೇಲ್ವೆ ಲೈನ್ ನಿರ್ಮಾಣಕ್ಕೆ ರಾಜ್ಯದ ಅನುದಾನವನ್ನು ನೀಡಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಯಲಬುರ್ಗಾ ಶಾಸಕ ಹಾಗೂ ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರಿಗೆ ರವಿವಾರ ಹೊಸಪೇಟೆಯ ಖಾಸಗಿ ಹೋಟಲ್ ನಲ್ಲಿ ಲಿಖಿತ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಂದ
ಮನವಿ ಸ್ವೀಕರಿಸಿದ ರಾಯರೆಡ್ಡಿಯವರು,ಈ ವಿಷಯವಾಗಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ವಾಣಿಜ್ಯೊಧ್ಯಮ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಯಲಬುರ್ಗಾ ತಾಲೂಕು ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖಯ್ಯ ಹಿರೇಮಠ ಭಾನಾಪೂರ, ಗಂಗಾವತಿ ನಗರ ಸಭಾ ಹಿರಿಯ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ ಹಿರೇಮಠ ಸೇರಿದಂತೆ ಮುಂದಾದವರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
