Water scarcity in summer The barrage dried up, even a drop of water had to be priced!

ವರದಿ: ಸಚೀನ ಆರ್ ಜಾಧವ
ಸಾವಳಗಿ: ಜಮಖಂಡಿ ತಾಲೂಕಿನ ನೀರಿನ ಮೂಲಗಳಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ, ಜಂಬಗಿ ಸೇತುವೆ ಬಳಿ ನೀರು ಬತ್ತಿ ಹೋಗಿದ್ದು ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣಿ ತುಸು ತಟ್ಟಲಿದ್ದು ಮೇ ತಿಂಗಳಿಂದ ಜೂನ ವರೆಗೆ ಒಂದು ತಿಂಗಳು ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ.

ಈಗಾಗಲೆ ಬಿಸಿಲಿನ ತಾಪ ಹೆಚ್ಚಾಗಿದ್ದು ಬಾಯಾರಿಗೆ ನಿವಾರಿಸಲು ನೀರು ಅತ್ಯವಶ್ಯವಾಗಿದೆ. ನೀರು ಪ್ರಾಣಿ ಸಂಕುಲದ ಮುಖ್ಯ ಜೀವಾಳವಾಗಿದೆ. ನೀರನ್ನು ಮಿತವಾಗಿ ಬಳಸಿ, ಪ್ರಾಣಿ ಪಕ್ಷಿಗಳಿಗೆ, ಜಾನುವಾರಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕಾಗಿದೆ, ನೀರನ್ನು ಮಿತವಾಗಿ ಬಳಸಬೇಕಿದೆ.
ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ ೫ ಟಿಎಂಸಿ ನೀರಿನ ಸಂಗ್ರಹವಿದ್ದು ಬೇಸಿಗೆಯನ್ನು ನೀಗಿಸಬಹುದಾಗಿದ್ದು ಆದರು ಒಂದು ತಿಂಗಳವರೆಗೆ ತುಸು ತೊಂದರೆ ಉಂಟಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ಅಷ್ಟೇನು ತೊಂದರೆ ಉಂಟಾಗದಿದ್ದು ಬೇಸಿಗೆಯ ಬಿಸಿ ೧ ತಿಂಗಳು ತಟ್ಟಲಿದೆ. ಗ್ರಾಮೀಣ ಭಾಗದಲ್ಲಿ ನದಿ ಬಾಗದ ರೈತರಿಗೆ ಕೃಷಿ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಮಲ್ಟಿ ವಿಲೇಜ ಸ್ಕೀಮ್ ಅಡಿಯಲ್ಲಿ ಬರುವ ನದಿ ತೀರದ ಗ್ರಾಮಗಳಿಗೆ ವಿದ್ಯುತ ೭ಗಂಟೆ ಬದಲಿಗೆ ವಿದ್ಯುತ ಕಡಿತಗೊಳಿಸಲು ಪ್ರಪೋಸಲ್ ಕಳಿಸಲಾಗಿದ್ದು ಇದರಿಂದ ರೈತರು ನದಿಯಿಂದ ನೀರನ್ನು ಬಳಸಿಕೊಳ್ಳುವುದನ್ನು ಕಡಿಮೆ ಮಾಡಬಹುದು.
1) ನಗರದಲ್ಲಿನ ಕಟ್ಟೆಕೆರೆ, ಲಕ್ಕನಕೆರೆ, ಮಹಾರಾಣಿ ಕೆರೆ, ಹುನ್ನೂರ ಕೆರೆ, ಸೇರಿದಂತೆ ಎಲ್ಲಾ ಕೆರೆಗಳು ಭರ್ತಿ ಇದ್ದು ಕುಡಿಯುವ ನೀರಿನ ತೋಂದರೆ ನಿವಾರಿಸಲು ಕೆರೆಗಳನ್ನು ತುಂಬಿಸಲಾಗಿದೆ ಮತ್ತು ಕೊಳವೆ ಭಾವಿಗಳನ್ನು ರಿಪೇರಿ ಮಾಡಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಉಂಟಾದರೆ ಪ್ರತಿ ಹಳ್ಳಿಯಲ್ಲೂ ೧೦ ರೈತರ ಖಾಸಗಿ ಕೊಳವೆ ಭಾವಿಗಳನ್ನು ಗುರುತಿಸಲಾಗಿದ್ದು ತೊಂದರೆ ಉಂಟಾದಾಗ ಬಾಡಿಗೆ ಪಡೆದು ಬವಣಿ ನೀಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದ ಜನರು, ರೈತರು, ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸಲು ವಿನಂತಿಸಿದ್ದಾರೆ.
ಸದಾಶೀವ ಮಕ್ಕೋಜಿ, ತಹಶೀಲ್ದಾರ ಜಮಖಂಡಿ.
,ಮುತ್ತೂರು ಕಂಕಣವಾಡಿ, ಜಂಬಗಿ, ಹಿರೇಪಡಸಲಗಿ, ಚಿಕ್ಕಪಡಸಲಗಿ, ತುಬಚಿ, ಗೋಠೆ, ಗದ್ಯಾಳ, ಸಾವಳಗಿ, ಅಡಿಗುಡಿ, ಟಕ್ಕಳಕಿ, ಕೊಣ್ಣುರ, ಮರೆಗುದ್ದಿ ಸೇರಿದಂತೆ ಹಲವು ಗ್ರಾಮಗಳು ನೀರಿನ ಬವಣೆ ಅನುಭವಿಸುವ ಸಾಧ್ಯತೆ ಇದೆ.