Private hospital performing duties in violation of rules

ಕೊಟ್ಟೂರು,25 : ಕಳೆದ ವರ್ಷ ಪ್ರಾರಂಭವಾಗಿರುವ ಸಿಟಿ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಮಕ್ಕಳ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಇನ್ನು ನೊಂದಣಿಯಾಗದಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇವರು ಸರ್ಕಾರಿ ನೌಕರರಾಗಿ ಈ ರೀತಿ ಮಾಡುವುದು ಸರಿಯಲ್ಲ. ಸರ್ಕಾರ ಒಬ್ಬ ವೈದ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೆ ಆತನು ಗುತ್ತಿಗೆ ಆದಾರ ಅಥವಾ ಸ್ವಂತಕ್ಕೆ ಕೆಲಸ ಮಾಡಬಾರುದು ಎಂಬ ನಿಯಮ ವಿದೆ ಅದರೇ ಈ ವೈದ್ಯ ಈ ರೀತಿ ಗುತ್ತಿಗೆ ಆದಾರದ ಮೇಲೆ ಹಲವು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ.

ಈತನು ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರಿನಲ್ಲಿ ಮಕ್ಕಳ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ೧,೨೦,೦೦೦ ರೂ ಸಂಬಳ ಪಡೆಯುತ್ತಿದ್ದು. ಅದರೂ ಸಹ ಡಾ ಸೋಮಶೇಖರ್ ಅವರು ಕೊಟ್ಟೂರು ಆಸ್ಪತ್ರೆಯಲ್ಲಿ ಗುತ್ತಿಗೆ ವೈದ್ಯಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗೆ ಪಟ್ಟಣದಲ್ಲಿ ಹಿಂದಿನ ವರ್ಷ ಪ್ರಾರಂಭವಾಗಿರುವ ಸಿಟಿ ಖಾಸಗಿ ಆಸ್ಪತ್ರೆ ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಥಾರಿಟಿಯಿಂದ ನೋಂದಣಿಯಾಗಿರುವುದಿಲ್ಲ ಎಂದು ತಿಳಿದಿದ್ದು ಸಹ ಇತಂಹ ಖಾಸಗಿ ಆಸ್ಪತ್ರೆಯಲ್ಲಿ ಸದರಿ ವೈದ್ಯರು ಕಾರ್ಯ ನಿರ್ವಹಿಸಬಾರದು ಎಂದು ನಿಯಮ ಇದ್ದರು, ಈ ವೈದ್ಯರು ಯಾವುದೇ ಸರ್ಕಾರಿ ನಿಯಮಗಳನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದು ಅಪರಾಧವಾಗಿರುತ್ತದೆ . ಈ ವೈದ್ಯರನ್ನು ಸರ್ಕಾರಿ ಕೆಲಸದಿಂದ ತೆಗೆದು ಹಾಕಬೇಕೆಂದು ಸಾರ್ವಜನಿಕರಾದ ರಮೇಶ್ , ಮಂಜುನಾಥ್ ಒತ್ತಾಯಿಸಿದರು..
Kalyanasiri Kannada News Live 24×7 | News Karnataka
