The assets of the companies that cheated should be confiscated, auctioned and the money should be paid: Sharanabasappa Danakai

ಕುಷ್ಟಗಿ : ರಾಜ್ಯದಲ್ಲಿ ಟಿಪಿಜೆಪಿ ಸಂಘಟನೆ ಪ್ರತಿಯೊಂದು ಜಿಲ್ಲೆಯಲ್ಲಿ ಸಂಘನೆಮಾಡಿ ವಿವಿಧ ಕಂಪನಿಗಳಿಂದ ಮೋಸವಾಗಿರುವ ಗ್ರಾಹಕರ ಪರವಾಗಿ ಹೋರಾಟ ಮಾಡುತ್ತ ಬಂದಿರುತ್ತದೆ ಆದರೆ ಹಣ ಬಂದಿಲ್ಲ, ಮೋಸ ಮಾಡಿರುವ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆ ನಡೆಸಿ ಬಡ ರೈತರ,ಕೂಲಿ ಕಾರ್ಮಿಕರ, ಬೀದಿ ವ್ಯಾಪಾರಿಗಳ,ಮದ್ಯಮ ವರ್ಗದ ಸಾರ್ವಜನಿಕರ ಹಣವನ್ನು ನಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಮಾ’ ೧೨ ರಂದು ಜರುಗಿದ ,ಹಣ ಕೊಡಿಸಿ ಪ್ರಾಣ ಉಳಿಸಿ ಪವರ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಮಾತನಾಡಿ , ರೈತರಿಗೆ ಬಡವರಿಗೆ ಮೋಸ ಮಾಡಿರುವ ಕಂಪನಿಗಳಾದ ಸಮೃದ್ಧ ಜೀವನ ,ಗ್ರೀನ್ ಬಡ್ಸ , ಪಲ್ಸ, ವಿತ್ರಿ,ಗುರುಟೀಕ್ , ಅಗ್ರಿಗೋಲ್ಡ್, ಜನಸ್ನೇಹಿ ಹಿಗೇ ವಿವಿಧ ಕಂಪನಿಗಳಲ್ಲಿ ಹಣವನ್ನು ಬಡ ರೈತರು,ಕೂಲಿಕಾರರು ಸೇರಿದಂತೆ ತಮ್ಮ ಮಕ್ಕಳ ಬದುಕಿಗಾಗಿ ಹಣ ತುಂಬಿ ಹಣ ಮರಳಿ ಬರಲಾರದೆ ೧೦ ವರ್ಷಗಳಿಂದ ಕಂಗಲಾಗಿ ತೊಂದರೆ ಅನುಭವಿಸಿದ್ದಾರೆ ಇಂತಹ ಅಧಿಕವಾಗಿ ಇರುವ ೧೮೦ ಕ್ಕೂ ವಿವಿಧ ಕಂಪನಿಗಳು ಚಿಟ್ ಮಾಡಿರುತ್ತವೆ ಇದರಿಂದ ಎಷ್ಟೊ ಬಡ ಪಾಯಿಗಳು ಮಾನ ಮರ್ಯಾದೆಗೆ ಅಂಜಿ ಜೀವದ ಭಯಕ್ಕೆ ಹೆದರಿಕೊಂಡು ಊರು ಬಿಟ್ಟಿದ್ದಾರೆ ,ಕೆಲವರು ಆತ್ಮಹತ್ಯೆಗೆ ಶರಣರಾಗಿದ್ದಾರೆ ಇದರಿಂದ ಅವರ ಕುಟುಂಬದವರ ಪಾಡೆನು ? ಆದ್ದರಿಂದ ೨೦೧೯ ರ ಬಡ್ಸ್ ಕಾಯ್ದೆ ಪ್ರಕಾರ ಹಾಗು ಇನ್ನಿತರ ಕಾಯ್ದೆ ನಿಯಮಗಳನ್ನು ಜಾರಿ ಮಾಡಿ , ಇಂತಹ ಕಂಪನಿಗಳಿಗೆ ಸರ್ಕಾರದವರೆ ಅನುಮತಿ ನಿಡಿದ್ದಿರಿ ! ಆದ್ದರಿಂದ ಬಡ ರೈತರ ಜೀವ ಉಳಿಸುವ ಶಕ್ತಿ ನಿಮ್ಮ ಕೈಯಲ್ಲಿದೆ ಆದ್ದರಿಂದ ಸಿ.ಎಂ ಸಿದ್ದರಾಮಯ್ಯನವರು ಎಲ್ಲಾ ಕಂಪನಿಗಳ ಕಂಪ್ಯೂಟರ್ ಸಿಸ್ಟಂ ಸ್ಟಾಪವೇರ ಓಪನ್ ಮಾಡಿಸಿ, ಹಣ ನಿಡುವ ಕಾರ್ಯಾಮಾಡಬೇಕು ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಏಜೆಂಟರು ಸೇರಿಕೊಂಡು ಕಮೀಷನ್ ಆಸೆಗಾಗಿ ಗ್ರಾಹಕರ ಹಣ ತುಂಬಿ ಸಾರ್ವಜನಿಕರ ಕಿರಿ ಕಿರಿ ತಾಳಲಾರದೆ ನಿರುದ್ಯೋಗಿಯಾಗಿದ್ದಾರೆ ಇಂತವರಿಗೆ ಉದ್ಯೋಗ ಒದಗಿಸಿ ಇವರ ಬಾಳ ಬದುಕಿಗೆ ಸರ್ಕಾರ ಆಸರೆ ಯಾಗಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರೈತ ಸಂಘದ ಯಲಬುರ್ಗಾ ತಾಲೂಕ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. . ಟಿಪಿಜೆಪಿ ಸಂಘನೆಯ ಕೊಪ್ಪಳ ಜಿಲ್ಲಾ ಅದ್ಯಕ್ಷ ಹನುಮೇಶ ಕಲ್ಮಂಗಿ ಅವರು ಮಾತನಾಡಿ ಎಪ್ರಿಲ್ ೯ ರಂದು ಹುಬ್ಬಳ್ಳಿಯಲ್ಲಿರು ಬೃಹತ್ ಪವರ್ ಅಭಿಯಾನದಲ್ಲಿ ವಿವಿಧ ಕಂಪನಿಗಳಲ್ಲಿ ಮೋಸ ಹೋಗಿರುವ ಗ್ರಾಹಕರು, ಎಂಜೇಟರು ೨ ಲಕ್ಷಕ್ಕೂ ಅಧಿಕವಾಗಿ ಭಾಗವಹಿಸಿ ಟಿಪಿಜೆಪಿ ಸಂಘಟನೆಯ ರಾಜ್ಯ ಅದ್ಯಕ್ಷ ಅಪ್ಪಾಸಾಹೇಬ ಬುಗಡೆ ಅವರಿಗೆ ಸಾಥ್ ನಿಡಬೇಕು ಅಂದಾಗ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತದೆ ಎಂದರು. ಕುಷ್ಟಗಿ ತಾಲೂಕು ಅಧ್ಯಕ್ಷ ಮಂಜೂರ ಅಲಿ ಬನ್ನು,ಕೊಪ್ಪಳ ತಾಲೂಕ ಅದ್ಯಕ್ಷ ಗವಿಸಿದ್ದಪ್ಪ ಪಲ್ಲೇದ ಅವರು ಮಾತನಾಡಿ ಹಣ ಮರಳಿ ಪಡೆಯ ಬೇಕಾದರೆ ಹಣ ಕಳೆದು ಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಈ ವೇಳೆ ಗ್ರಾಹಕರಾದ ಶಿವಯ್ಯ ರಾವಣಿಕಿಮಠ, ಕೆ.ಡಿ.ವಾಲಿಕಾರ, ಯಲ್ಲಪ್ಪ ಜಿಗಳೂರ , ಶರಣಪ್ಪ ಪತ್ತಾರ,ರಜೀಯಾ ಸುಲ್ತಾನ್, ಬಾಳನಗೌಡ ಪುಂಡಗೌಡರ,ವೇಂಕಟೇಶ ವಡ್ಡರ, ಕಾಳಪ್ಪ ಬಡಿಗೇರ, ಹಮ್ಮದ ಹುಸೇನ್ ರಾಂಪೂರ, ಶಾಂತಪ್ಪ ಇಟಗಿ, ದ್ಯಾಮಣ್ಣ ಸೂಡಿ ಸೇರಿದಂತೆ ಇತರರು ಇದ್ದರು.