Breaking News

ಐಐಎಚ್ಎಂಆರ್ ನ 20ನೇ ಸಂಸ್ಥಾಪನಾ ದಿನ : ಆಸ್ಪತ್ರೆ ಮತ್ತು ಆರೋಗ್ಯನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭ

IIHMR’s 20th Foundation Day: Postgraduate course in Hospital and Healthcare Management launched

ಜಾಹೀರಾತು

ಬೆಂಗಳೂರು; ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ ನಿಂದ ಹಾರ್ಟ್ ಹೆಲ್ತ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ರೋಗಿ ನಿರ್ವಹಣಾ ವ್ಯವಸ್ಥೆಗೆ ಚಾಲನೆ ಮತ್ತು ಎಂಬಿಎಗೆ ಸರಿ ಸಮಾನವಾಗಿ ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗಿದೆ.
ಐಐಎಚ್ಎಂಆರ್ ನ 20ನೇ ಸಂಸ್ಥಾಪನಾ ದಿನ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ರೆಡ್ ಹೆಲ್ತ್ ಸಹಯೋಗದಲ್ಲಿ ಭಾರತದ ಪ್ರಥಮ ಮತ್ತು ಏಕೈಕ ಸ್ನಾತಕೋತ್ತರ ಪ್ರೋಗ್ರಾಮ್ ಪ್ರಿ-ಹಾಸ್ಪಿಟಲ್ ಕೇರ್‌ ಕೋರ್ಸ್ ಪ್ರಾರಂಭ ಮಾಡಲಾಗಿದೆ. ಆರೋಗ್ಯ ತಜ್ಞರು ಮತ್ತು ನಿರ್ವಾಹಕರಿಗೆ ಉದ್ಯೋಗಿಗಳ ಕೆಲಸದ ಒತ್ತಡವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುವ ಪ್ರಯೋಜನ್ ಅಪ್ಲಿಕೇಶನ್ ಗೂ ಸಹ ಚಾಲನೆ ನೀಡಲಾಯಿತು. ಎನ್.ಜಿ. ಎನ್. ಇಂಟರ್ ನ್ಯಾಶನಲ್ ನ ಕಾರ್ಯನಿರ್ವಾಹಕ ನಿರ್ದೇಶಕ
ಡಾ. ರಾಮ್ ಮಿಲನ್ ಶುಕ್ಲಾ, ಐಐಎಚ್ಎಂಆರ್ ನ ಹಿರಿಯ ಸಲಹೆಗಾರರಾದ ಡಾ. ಕೇದಾರ್ ಸಿ. ಎಸ್, ಐಐಎಚ್ಎಂಆರ್ ಸೊಸೈಟಿಯ ಟ್ರಸ್ಟಿ ಕಾರ್ಯದರ್ಶಿ, ಡಾ.ಎಸ್.ಡಿ.ಗುಪ್ತಾ, ಐಐಎಚ್ಎಂಆರ್ ಬೆಂಗಳೂರು ನಿರ್ದೇಶಕರಾದ ಡಾ.ಉಷಾ ಮಂಜುನಾಥ್, ಡೀನ್ ಡಾ. ಜೇಸನ್ ಡಿ. ಉಗರ್ಗೋಲ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ದೀಪಶ್ರೀ ಎಂ.ಆರ್ ಸಮ್ಮುಖದಲ್ಲಿ ಹೊಸ ಕೋರ್ಸ್ ಗಳನ್ನು ಶುಭಾರಂಭ ಮಾಡಲಾಯಿತು.
ದಕ್ಷಿಣ ಭಾರತದಲ್ಲಿ ಆರೋಗ್ಯ, ಆಸ್ಪತ್ರೆ ನಿರ್ವಹಣೆ, ಸಂಶೋಧನೆ ಮತ್ತು ತರಬೇತಿಯಲ್ಲಿ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಐಐಎಚ್ಎಂಆರ್ ನ್ಯಾಕ್ ಶ್ರೇಣಿಯ ಎ ಮಾನ್ಯತೆ ಪಡೆದುಕೊಂಡಿದೆ. ಆರೋಗ್ಯ ನಿರ್ವಹಣಾ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ಜೊತೆಗೆ ಬಿ-ಸ್ಕೂಲ್ ಎಂಬ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಕೋರ್ಸ್ ಗಳಿಗೆ ಎಐಸಿಟಿಇ ಮತ್ತು ಎನ್.ಬಿ.ಎ ಮಾನ್ಯತೆ ದೊರೆತಿದ್ದು, ಎನ್.ಎ.ಬಿ.ಇಟಿ ಮಾನ್ಯತೆ ಪಡೆದ ಭಾರತದ ಮೊದಲ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
%%$

About Mallikarjun

Check Also

ಕೃಷಿ ಪಂಡಿತ ಪ್ರಶಸ್ತಿಗೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Application deadline extended for Krishi Pandita Award ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.