Emphasis on all-round development in the budget, Manjula Shivappa Khattimara, president of the village

ವಡ್ಡರಹಟ್ಟಿಯಲ್ಲಿ 2025-26ನೇ ಸಾಲಿನ ಆಯ್ಯವ್ಯಯ ಮಂಡನೆ
ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಆಯ್ಯವ್ಯಯ ಮಂಡನೆ ಮತ್ತು ಅನುಮೋಧನೆ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ಶಿವಪ್ಪ ಹತ್ತಿಮರದ ಅವರು ಒಟ್ಟು 8 ಕೋಟಿ 90 ಲಕ್ಷ ರೂ. ಬಜೆಟ್ ಮಂಡನೆ ಮಾಡಿದರು.
ಉದ್ಯೋಗ ಖಾತರಿ ಯೋಜನೆಯ (ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆ) ಸೇರಿ 7 ಕೋಟಿ 30 ಲಕ್ಷ ರೂ., ಸ್ಥಳೀಯ ಸಂಪನ್ಮೂಲ ಸಂಗ್ರಹಣೆಯಾದ 96 ಲಕ್ಷ ರೂ., 15 ನೇ ಹಣಕಾಸು ಅನುದಾನದ 64 ಲಕ್ಷ ರೂ. ಹೀಗೆ ಎಲ್ಲ ಅನುದಾನ ಸೇರಿ ಒಟ್ಟು 8 ಕೋಟಿ 90 ಲಕ್ಷ ರೂ. ಬಜೆಟ್ ಮಂಡನೆ ಮಾಡಲಾಗಿದೆ ಎಂದರು.
ಈ ಬಜೆಟ್ ನ ನಿರೀಕ್ಷಿತ ಅನುದಾನದಲ್ಲಿ ಬಡತನ ನಿರ್ಮೂಲನೆಗೆ ಆಧ್ಯತೆ, ಮಹಿಳಾ ಅಭಿವೃದ್ಧಿ ಮತ್ತು ಸಬಲೀಕರಣ, ಮಕ್ಕಳ ಕಾಳಜಿ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳು, ಶಿಕ್ಷಣ ಮತ್ತು ಕ್ರೀಡಾಭಿವೃದ್ಧಿ, ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಚ್ಛತೆ-ಗ್ರಾಮ ನೈರ್ಮಲಿಕರಣ, ಸುಸ್ಥಿರತೆ, ಕುಡಿಯುವ ನೀರು ಮತ್ತು ನಿರ್ವಹಣೆ, ನಾಗರಿಕ ಸೌಲಭ್ಯಗಳ ಕಾಮಗಾರಿಗಳು, ಉದ್ಯಾನವನಗಳ ಅಭಿವೃದ್ಧಿ ಪಡಿಸುವುದು, ವಿಕಲಚೇನತರ ಅಭಿವೃದ್ಧಿ ಕಾರ್ಯಕ್ರಮ, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆ, ಹಾಗೂ ಇತ್ಯಾದಿ ಕಾರ್ಯಕ್ರಮಗಳಾಗಿವೆ. ಈ ಎಲ್ಲ ವಿಭಾಗಗಳನ್ನು ವಿವಿಧ ಯೋಜನೆ ಹಾಗೂ ಅನುದಾನದಲ್ಲಿ ಹಂಚಿಕೆ ಮಾಡಿಕೊಂಡು ಕಾರ್ಯಕ್ರಮದ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಪಂ ಅಧ್ಯಕ್ಷರಾದ ಮಂಜುಳಾ ಹತ್ತಿಮರದ ಅವರು ತಿಳಿಸಿದರು.
ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ಬಜೆಟ್ ಗೆ ಪೂರಕಾಗಿ ನಿಗದಿತ ಕಾಲಾವಧಿಯಲ್ಲಿ ಸರ್ಕಾರದ ನಿಯಮ ಹಾಗೂ ಗ್ರಾಪಂ ಮಂಡಳಿಯ ತೀರ್ಮಾನದಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದರು.
ಬೇಸಿಗೆ ಕಾಲ ಶುರುವಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ನೀರು ಪೂರೈಸಲು ಸಮಯ ನಿಗಧಿ ಮಾಡಲಾಗುವುದು. ಎಲ್ಲ ನಿವಾಸಿಗಳು ನೀರು ಪೋಲು ಆಗದಂತೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕು. ನೀರು ಪೋಲು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
((ಬಾಕ್ಸ್ ))
ಸಭೆಯಲ್ಲಿ ವಿವಿಧ ವಿಷಯ ಚರ್ಚೆ
ಬಜೆಟ್ ಮಂಡನೆ ಜೊತೆಗೆ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಚರ್ಚೆ, ಬೇಸಿಗೆ ಎದುರಿಸಲು ಮುಂಜಾಗ್ರತಾ ಕ್ರಮಗಳು, ವಸತಿ, ತೆರಿಗೆ ಪರಿಷ್ಕರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾಪಂ ಕಾರ್ಯದರ್ಶಿಗಳಾದ ಈಶಪ್ಪ, ಗ್ರಾಪಂ ಉಪಾಧ್ಯಕ್ಷರು, ಸರ್ವಸದಸ್ಯರು, ಎಲ್ಲ ಸಿಬ್ಬಂದಿಗಳು ಹಾಜರು ಇದ್ದರು.