
ಬಂದ್‌ಗೆ ಪ್ರಿಂರ‍್ಸ್ ಅಸೋಸಿಯೇಷನ್ ಬೆಂಬಲ;
ವಿನೂತನ ಪ್ರತಿಭಟನೆ
ಕೊಪ್ಪಳ : ಇಲ್ಲಿಗೆ ಸಮೀಪದ ಗ್ರಾಮಗಳಲ್ಲಿ ಈಗಾಗಲೇ ಸ್ಥಾಪನೆ ಆಗಿರುವ
ಕಾರ್ಖಾನೆಗಳಿಂದ ಮತ್ತು ಈಗ ಹೊಸದಾಗಿ ಆರಂಭವಾಗುತ್ತಿರುವ ಬಿಎಸ್‌ಪಿಎಲ್
ಕಾರ್ಖಾನೆಗಳಿಂದ ಇಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಆಗುವದಿಲ್ಲ, ಅದು ಕೇವಲ
ಭ್ರಮೆ ಎಂದು ಪ್ರಿಂರ‍್ಸ್ ಮಾಲೀಕರು ಬಂದ್‌ಗೆ ಬೆಂಬಲ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಿಂಟರ್ಸ್ ಅಸೊಸಿಯೇಷನ್ ಸಂಚಾಲಕ ಮಂಜುನಾಥ ಜಿ.
ಗೊಂಡಬಾಳ ಮತ್ತು ಕೊಪ್ಪಳ ಜಿಲ್ಲಾ ಮುದ್ರಣ ಮಾಲೀಕರ ಸಂಘದ
ಜಿಲ್ಲಾಧ್ಯಕ್ಷ ಶ್ರೀಶೈಲಪ್ಪ ನಿಡಶೇಸಿ ಜಂಟಿ ಹೇಳಿಕೆ ಮೂಲಕ ಪ್ರಕಟಣೆ ನೀಡಿದ್ದಾರೆ.
ಕೊಪ್ಪಳ ಮತ್ತು ಭಾಗ್ಯನಗರದಲ್ಲಿರುವ ಎಲ್ಲಾ ಮುದ್ರಣಕಾರರು
ಬಂದ್‌ಗೆ ಬೆಂಬಲ ನೀಡಿದ್ದು, ಫೆ. ೨೨ ರಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ
ಮೂಲಕ ನಡೆಯುವ ವಿಚಾರ ಸಂಕಿರಣ ಮತ್ತು ಫೆ. ೨೪ರ ಪರಿಸರ ಹಿತರಕ್ಷಣಾ
ವೇದಿಕೆಯ ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಬೃಹತ್ ಕೈಗಾರಿಗಳಿಂದಾದ ಪರಿಸರ ಮಾಲಿನ್ಯವಾಗುತ್ತದೆ ಅಲ್ಲದೇ ಇಲ್ಲಿನ
ಎಲ್ಲಾ ವ್ಯವಸ್ಥೆ ಹಾಳಾಗಿ ಹೋಗುತ್ತವೆ. ಇನ್ನು ಈ ಕಾರ್ಖಾನೆಗಳ ಮಾಲಕರು,
ಮುಖ್ಯ ಹುದ್ದೆಗಳಲ್ಲಿ ಇರುವ ಯಾರೂ ಕಾರ್ಖಾನೆಗಳ ಪರಿಸರದಲ್ಲಿ
ವಾಸವಾಗಿಲ್ಲ ಬದಲಾಗಿ ಅವರು ಪಕ್ಕದ ಹೊಸಪೇಟೆ ಮತ್ತು ದೂರದ
ಊರುಗಳಲ್ಲಿ ಇದ್ದಾರೆ. ಇಲ್ಲಿನ ಕಾರ್ಖಾನೆಗಳು ಕಳೆದ ೨೦-೨೫ ವರ್ಷಗಳಿಂದ
ಇಲ್ಲಿಯೇ ಉದ್ಯೋಗ ಸೃಷ್ಟಿಯ ಹುಸಿ ಮಾತು ಭರವಸೆ ನೀಡುತ್ತಿದ್ದು
ಅವರೆಲ್ಲರೂ ಪ್ರಿಂಟಿAಗ್ ಕೆಲಸಗಳನ್ನು ಸಹ ಬೇರೆ ಜಿಲ್ಲೆಗಳಲ್ಲಿ ಮಾಡಿಸುತ್ತಾರೆ
ನಮ್ಮ ಕೊಪ್ಪಳದ ಪ್ರಿಂಟಿAಗ್ ಪ್ರೆಸ್‌ನವರಿಗೆ ಕೆಲಸ ಕೊಟ್ಟಿಲ್ಲ, ಅವರು
ಹೇಳುವದು ಎಲ್ಲವೂ ಕೇವಲ ಮಾತುಗಳು ಅಷ್ಟೇ.
ಇನ್ನು ಈಗಿರುವ ಕಾರ್ಖಾನೆಗಳ ಕಥೆ ನೋಡಿದ ಮೇಲೆ ಹೊಸ
ಕಾರ್ಖಾನೆಗಳ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ, ಜೊತೆಗೆ ಕೆಲವರು
ಕರ್ಖಾನೆಗಳು ಬೇಕು ಎನ್ನುತ್ತಿದ್ದಾರೆ. ಅಂತಹ ಕೆಲವು ನೂರು ಜನರ
ಉದ್ಯೋಗಕ್ಕಾಗಿ ಲಕ್ಷಾಂತರ ಜನರು ಸಾಯಲು ಸಿದ್ದರಿಲ್ಲ ಎಂಬ ಮಾತನ್ನು
ಹೇಳಲು ಬಯಸುತ್ತೇವೆ. ಈ ಕಾರ್ಖಾನೆಗಳಲ್ಲಿ ಈಗ ಕೊಟ್ಟಿರುವ ಕೆಲಸಗಳು
ಡಿ ದರ್ಜೆಯ ನೌಕರರು ಎಂಬ ಅರಿವು ನಮಗೆ ಇರಬೇಕು, ಅಲ್ಲಿನ ನೌಕರರ
ಸಂಬಳಕ್ಕಿAತ ಗಿರ್‌ಮಿಟ್ ಮತ್ತು ಎಗ್‌ರೈಸ್ ಬಂಡಿಯವರು ಜಾಸ್ತಿ ದುಡಿಯುತ್ತಾರೆ
ಎಂದು ಹೇಳಿದ್ದು, ಪ್ರಿಂರ‍್ಸ್ ಅಸೊಸಿಯೇಷನ್ ಮೂಲಕವೂ ಸಹ ವಿನೂತನ
ಪ್ರತಿಭಟನೆ ಮಾಡುವದಾಗಿ ಹೇಳಿದ್ದಾರೆ.