Breaking News

ಟೆಡ್‌ಎಕ್ಸ್, ಟೆಡ್‌ಟಾಕ್ ಮಾದರಿಯಲ್ಲಿ ಭಾರತದ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮ ಮಹಾನ್ ಕಿಡ್ಸ್ ಶಾಲೆಯಲ್ಲಿ: ನೇತ್ರಾಜ್ ಗುರುವಿನಮಠ

TEDX, India’s First School Forum Program on TedTalk Model at Mahan Kids School: Netraj Guruvinamath

ಜಾಹೀರಾತು

ಗಂಗಾವತಿ: ಇಂದು ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಮಹಾನ್ ಕಿಡ್ ಟಾಕ್ಸ್ ಎನ್ನುವ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಇದು ಭಾರತದಲ್ಲಿ ಮೊಟ್ಟಮೊದಲ ಶಾಲಾ ವೇದಿಕೆಯಾಗಿದೆ ಎಂದು ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನಮಠ ಪ್ರಕಟಣೆಯಲ್ಲಿ ತಿಳಿಸಿದರು.
ಶಾಲೆಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಪ್ರತಿ ಶನಿವಾರ ೨೦ ಮಕ್ಕಳಿಗೆ ಈ ವೇದಿಕೆಯನ್ನು ನೀಡಲಾಗುತ್ತಿದ್ದು, ಮಕ್ಕಳು ಮಾತನಾಡುವ ಮೊದಲು ವಿಷಯವನ್ನು ತಿಳಿದುಕೊಳ್ಳಬೇಕು. ವಿಷಯವನ್ನು ತಿಳಿದುಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು. ಈ ಒಂದು ಕಾರ್ಯಕ್ರಮದಿಂದ ಮಕ್ಕಳ ಕಲಿಕೆ ಇನ್ನು ಉನ್ನತ ಮಟ್ಟಕ್ಕೆ ಏರಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಅಂತರಾಷ್ಟಿçÃಯ ಮಟ್ಟದಲ್ಲಿ ನಡೆಯುತ್ತಿರುವ ಟೆಡ್‌ಎಕ್ಸ್, ಟೆಡ್‌ಟಾಕ್ ಮಾದರಿಯನ್ನು ಹೋಲುವ ಕಾರ್ಯಕ್ರಮ ಇದಾಗಿದ್ದು ಭಾರತದಲ್ಲಿ ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಥ ಒಂದು ವಿನೂತನ ಪ್ರಯೋಗವನ್ನು ಮಾಡಲಾಗಿದೆ. ಈ ವೇದಿಕೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳು ವಾರಕ್ಕೆ ೨೦ ಮಕ್ಕಳಂತೆ ಮಕ್ಕಳು ತಮಗೆ ಇಷ್ಟ ಇರುವ ವಿಶೇಷ ವಿಷಯವನ್ನು ಎಲ್ಲಾ ಮಕ್ಕಳ ಮತ್ತು ಪಾಲಕರ ಮುಂದೆ ಮಾತನಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಬೇರೆ ಬೇರೆ ವಿಷಯಗಳ ಮೇಲೆ ತುಂಬಾ ಕ್ರಿಯಾತ್ಮಕವಾಗಿ ಮಾತನಾಡಿದರು. ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು ಮಕ್ಕಳ ಕಲಿಕೆ ಆತ್ಮವಿಶ್ವಾಸ, ಶಬ್ದಗಳ ಬಳಕೆ, ಹೊಸ ಹೊಸ ವಿಷಯಗಳನ್ನು ಕಲಿಯುವುದು, ಕಲಿತಿರುವುದನ್ನು ಎಲ್ಲರ ಮುಂದೆ ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ಇಂಥ ವೇದಿಕೆಯನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಯೋಜಿಸಿದ್ದಕ್ಕಾಗಿ ಪಾಲಕರು ಹರ್ಷ ವ್ಯಕ್ತಪಡಿಸಿ, ನಮ್ಮ ಮಕ್ಕಳಿಗೆ ಈ ಶಾಲೆಯಲ್ಲಿ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಪಾಲಕರು ಶ್ಲಾಘಿಸಿದರು.
ಈ ಶನಿವಾರ ಎಂ.ಡಿ ಇರ್ಫಾನ್ ಚೆಸ್ ಕುರಿತು, ಆಲ್ ಫಾಲ್ಸ್ ಸಮಯದ ಕುರಿತು, ಜಿಯಾನ್ ಅಲಿ ಊಟದ ಅಭ್ಯಾಸದ ಕುರಿತು, ಅಭಿಜ್ಞಾ ಯಾಕೆ ನಾವು ಧನ್ಯವಾದಗಳು ಹೇಳಬೇಕು, ಅರ್ಹಾನ್ ಸೌರಮಂಡಲದ ಕುರಿತು, ಅರ್ಫಾನಿ ದಯೆ ಕುರಿತು, ಆಧ್ಯ ಎಸ್.ಹೆಚ್ ನೀರಿನ ಕುರಿತು, ಶಿಫಾ ನಾವು ಬೆಳಗ್ಗೆ ಎದ್ದ ತಕ್ಷಣ ಏನು ಮಾಡುತ್ತಿದ್ದೇವೆ, ಫರ್ಹಾಜ್ ಆರೋಗ್ಯವೇ ಭಾಗ್ಯ, ಸಾಯಿ ತನ್ವಿ ನಾನು ನನ್ನ ಸಾಕುಪ್ರಾಣಿಯಿಂದ ಏನನ್ನು ಕಲಿತಿರುವೆ, ಅನ್ವಿತ ಯಾರನ್ನು ಜಡ್ಜ್ ಮಾಡಬಾರದು, ಕೃತಿಕ ಯುನಿಟಿ ಇಸ್ ಸ್ಟೆçಂಥ್, ಅಂಚಿತ ಸ್ಮಾರ್ಟ್ವರ್ಕ್, ಶಾಹಿಂ ಹೌ ಪ್ರಾಕ್ಟೀಸ್ ಮೇಟ್ ಮ್ಯಾನ್ ಪರ್ಫೆಕ್ಟ್, ಜಜಾ ಹುಸ್ನ ಎಲ್ಲಾ ಸಂದರ್ಭಗಳಲ್ಲೂ ಹೇಗೆ ಸಂತೋಷವಾಗಿರಬೇಕು, ಸಾತ್ವಿಕ್ ಇನ್ಫೇಶನ್ ಹಣದುಬ್ಬರ, ಕಾರ್ತಿಕ್ ಬಿಟ್ ಕಾಯಿನ್, ತೋಹಿದ ಶಿಕ್ಷಕರ ಕುರಿತು, ಅಲ್ವೇರ ಶಿಕ್ಷಣದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ಮಕ್ಕಳ ಕಲಿಕೆಗೆ ಮಹಾನ್ ಕಿಡ್ಸ್ ಶಾಲೆ ಎಲ್ಲಾ ರೀತಿಯಿಂದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪಾಲಕರು ಮಕ್ಕಳಿಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪೂರ್ಣಿಮಾ, ಮಂಜುನಾಥ್, ಕುಮುದಿನಿ, ದೀಪ, ಸಹನಾ ಶೈಲಜಾ, ಚಂದ್ರಶೇಖರ್ ಕುಂಬಾರ್, ಸಿದ್ದೇಶ್, ತೇಜಸ್ವಿನಿ, ಮುತ್ತ, ಸಲಿನಾ, ಶಾಂತಿ ಸೇರಿದಂತೆ ಪಾಲಕರು ಕೂಡ ಇದ್ದರು.

About Mallikarjun

Check Also

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

Important decision taken at the District Level Guarantee Scheme Implementation Authority Committee meeting ಬ್ಯಾಂಕಿನ ಸಾಲಕ್ಕೆ …

Leave a Reply

Your email address will not be published. Required fields are marked *