Breaking News

“ಕೊಟ್ಟೂರಿನಲ್ಲಿ ಫಾರಂ 3 ಮೇಳ “

“Koṭṭūrinalli phāraṁ 3 mēḷa”

ಜಾಹೀರಾತು




Form 3 Mela at Kottoor”

ಕೊಟ್ಟೂರು : ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ  ಕೋಶ  ಇವರ ಆದೇಶದ ಮೇರೆಗೆ ಮಂಗಳವಾರದಂದು  ಪಟ್ಟಣದ ಗಚ್ಚಿನಮಠದ ಮುಂಭಾಗದಲ್ಲಿ  ಪಟ್ಟಣ ಪಂಚಾಯತಿ  ಫಾರಂ 3 ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಫಾರಂ 3 ಮೇಳವನ್ನು ಕುರಿತು ಪಟ್ಟಡ ಪಂಚಾಯಿತಿ ಮುಖ್ಯಧಿಕಾರಿ   ಎ ನಸ್ರುಲ್ ಅವರು ಮಾತನಾಡಿದರು  ಜಿಲ್ಲಾಧಿಕಾರಿಗಳ ಆದೇಶ ಮನೆ ಬಾಗಿಲಿಗೆ   ಫಾರಂ 3 ಯೋಜನಾ ಅಡಿಯಲ್ಲಿ ನಡೆಯುತ್ತಿದ್ದು  ಸಾರ್ವಜನಿಕರು ತಮ್ಮ ಆಸ್ತಿಯ ಮಾಲಿಕತ್ವ ದೃಢೀಕರಿಸುವ  ನೊಂದಾಯಿತ  ದಾಖಲಾತಿಗಳನ್ನು  ನೀಡಿ ಪಡೆದುಕೊಳ್ಳಬಹುದು  ಈ ಯೋಜನೆಯನ್ನು  ಸಾರ್ವಜನಿಕರು  ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ನಂತರ ಮಾತನಾಡಿದ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ರವರು  ಸಾರ್ವಜನಿಕರು ತಮ್ಮ  ಕೆಲಸಗಳಿಗೆ  ಮನೆಯಿಂದ ಕಚೇರಿ ಕಚೇರಿಯಿಂದ ಮನೆಗೆ  ಅಲೆದಾಡುವ ಪರಿಸ್ಥಿತಿ ನೋಡಿದ್ದೇವೆ ಇದರಿಂದ ಮುಕ್ತಿ ಪಡೆಯಲು  ಜಿಲ್ಲಾಧಿಕಾರಿಗಳವರು ನಿಮ್ಮ ಕೆಲಸವನ್ನು ಮನೆ ಬಾಗಿಲು ತಲುಪುವ ಯೋಜನೆಯನ್ನು ಜಾರಿಗೆ  ತಂದಿದ್ದಾರೆ. ಇನ್ನು ಮುಂದೆ ಅಂತ್ಯಸಂಸ್ಕಾರ   ಸೌಕರ್ಯವನ್ನು ಪಟ್ಟಣ ಪಂಚಾಯತಿ  ಪಂಚಾಯಿತಿಯಿಂದ  ಉಚಿತವಾಗಿ  ನೀಡುತ್ತದೆ. ಸಾರ್ವಜನಿಕರು ತಮ್ಮ ವಾರ್ಡಿನಲ್ಲಿರುವ ಸಮಸ್ಯೆಯನ್ನು   ಫೋನಿನ ಮುಖಾಂತರ ಅಧಿಕಾರಿಗಳೊಂದಿಗೆ ಸಂಪರ್ಕಿಸಿದರೆ ತಮ್ಮ ಕೆಲಸವನ್ನು ಮಾಡಿಕೊಡುತ್ತಾರೆ. ಆದ್ದರಿಂದ  ಸಾರ್ವಜನಿಕರು  ಈ ಯೋಜನೆ  ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ  ಪಟ್ಟಣ ಪಂ. ಅಧ್ಯಕ್ಷ  ಬಿ.ರೇಖಾ ರಮೇಶ್, ಉಪಾಧ್ಯಕ್ಷರಾದ ಜಿ ಸಿದ್ದಯ್ಯ, ಸದಸ್ಯರುಗಳಾದ  ಹೊಸಮನಿ ವಿನಯ್ ಕುಮಾರ್, ಕೆಂಗಪ್ಪ, ವಿದ್ಯಾ ಮೇಘರಾಜ್,  ಸಫಿ, ತೋಟದ ರಾಮಣ್ಣ, ಇತರರು ಉಪಸ್ಥಿತರಿದ್ದರು.

About Mallikarjun

Check Also

ಬಸವನದುರ್ಗಾ ಗ್ರಾಮದ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡು ಆರಂಭ

Book stall opens at Basavandurga village bus stand ಜ್ಞಾನ ವೃದ್ಧಿಗಾಗಿ ಪುಸ್ತಕ ಗೂಡು ತಾಪಂ ಇಓ ರಾಮರೆಡ್ಡಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.