New JCB for Kottoor Town Panchayat. Yantra: Inauguration by President Rekha Baddi Ramesh

ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿ ವತಿಯಿಂದ ಹೊಸದಾಗಿ ಜೆ.ಸಿ.ಬಿ. ಯಂತ್ರವನ್ನು ಖರೀದಿ ಮಾಡಿ ಮಂಗಳವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ಬದ್ದಿ ರಮೇಶ್ ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನಸುರುಲ್ಲಾ ಈ ಜೆ.ಸಿ.ಬಿ. ಯಂತ್ರವನ್ನು ಪಟ್ಟಣದ ಸಾರ್ವಜನಿಕರಿಗೆ ಶವ ಸಂಸ್ಕಾರ ಮಾಡಲು ಗುಂಡಿ ತೆಗೆಯುವ ಸಲುವಾಗಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು. ಪಟ್ಟಣದಲ್ಲಿ ಯಾರೇ ಮೃತರಾದರೂ ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ಸಹಾಯಕರನ್ನು ಸಂಪರ್ಕಿಸಿದರೆ, ಈ ಜೆ.ಸಿ.ಬಿ. ಯಂತ್ರ ಹಾಗೂ ಮುಕ್ತಿ ವಾಹನವನ್ನು ಕಳಿಸಿಕೊಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಿದ್ದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರು ಅಂಜಿನಮ್ಮ, ಪಟ್ಟಣ ಪಂಚಾಯಿತಿ ಸದಸ್ಯರ ಕೆ ಶಫೀ , ಕೆಂಗರಾಜ್, ತೋಟದ ರಾಮಣ್ಣ, ವಿನಯ್ ಕುಮಾರ್ ಹೊಸಮನಿ, ಟಿ ರುಕ್ಸನ ಭಾನು, ಕಡ್ಲಿ ವೀರೇಶ,,ಪ್ರಮುಖ ಮುಖಂಡರಾದ ಬದ್ದಿ ಮರಿಸ್ವಾಮಿ,ರಾಜೀವ್, ವಿರುಪಾಕ್ಷಿ ,ಕಾಸಲ್ ಪ್ರಕಾಶ್, ಉಪಸ್ಥಿತರಿದ್ದರು.