Narayanaswamy B.V. He was awarded Ph.D

ಬೆಂಗಳೂರು: ಫೆ.08: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡ ಬೊಮ್ಮನಹಳ್ಳಿ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದ ಶ್ರೀಮತಿ ಅಕ್ಕಯಮ್ಮ ಮತ್ತು ಶ್ರೀ ವೆಂಕಟೇಶಪ್ಪ ರವರ ಪುತ್ರರಾದ ನಾರಾಯಣಸ್ವಾಮಿ ಬಿ.ವಿ.ರವರು ಪ್ರಸ್ತುತ ಬೆಂಗಳೂರು ವಿವಿಯಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ

ವಿದ್ಯಾರ್ಥಿಯಾಗಿರುವ ನಾರಾಯಣಸ್ವಾಮಿ ಬಿ.ವಿ. ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ರಮೇಶ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಅವೇರ್ನೆಸ್ ಅಂಡ್ ಯುಟಿಲೈಜೇಷನ್ ಆಫ್ ಐಸಿಟಿ ಇನಿಶಿಯೇಟಿವ್ ಆಫ್ ಮಿನಿಸ್ಟ್ರಿ ಆಫ್ ಎಜುಕೇಶನ್, ಗವರ್ನಮೆಂಟ್ ಆಫ್ ಇಂಡಿಯಾ ಬೈ ದ ಯೂನಿವರ್ಸಿಟಿ ಲೈಬ್ರರೀಸ್ ಇನ್ ಕರ್ನಾಟಕ ಸ್ಟೇಟ್, ಆನ್ ಯೂಸರ್ ಅಸೆಸ್ಮೆಂಟ್ ಸ್ಟಡಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.