Breaking News

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC premises,,, Police Department which is in full swing,

ಜಾಹೀರಾತು
ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಮತ್ತು ಪಟ್ಟಣದ ಅನೇಕ ರೈತರಿಗೆ ನೀಡುವ ಯೋಜನೆ, ಪ್ರಯೋಜನ, ಸಾಲಸೌಲಭ್ಯಗಳ ಕುರಿತು ಪ್ರತಿ ರೈತರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಅವರನ್ನು ಸಹಕಾರಿ ಕ್ಷೇತ್ರದತ್ತ ಸೆಳೆಯಲು ಸಿಎಂ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಬಸವರಾಜ ರಾಯರಡ್ಡಿಯವರು ಮುತುವರ್ಜಿ ವಹಿಸಿ ರೈತರಿಗೆ ಜಾಗೃತಿ ಸಮಾವೇಶ ನಡೆಸಲು ತಿರ್ಮಾನಿಸಿದಂತೆ ಶನಿವಾರದಂದು ಬೃಹತ್ ಮಟ್ಟದ ಸಮಾವೇಶ ನಡೆಯಲಿದೆ.

ಸಹಕಾರ ರಂಗದಲ್ಲಿ ಬರುವ ತಾಲೂಕಿನ ಎಲ್ಲಾ 34 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘಗಳ ನಿರ್ದೇಶಕರು, ಎಣ್ಣೆ ಬೆಳೆಗಾರರ ಸಂಘದ ಸದಸ್ಯರು ಸೇರುವ ಬೃಹತ್ ಜಾಗೃತಿ ಸಮಾವೇಶವಾಗಿದೆ.

ಈ ಕಾರ್ಯಕ್ರಮವು ಇದೇ ಫೆ.08ರ ಶನಿವಾರದಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಲಿದೆ.

ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ವಿವಿಧ ಗಣ್ಯರು ಆಗಮಿಸಲಿದ್ದು ಪಟ್ಟಣವು ಮದುವಣಗಿತ್ತಿಯಂತೆ ತಯಾರುಗೊಳ್ಳುತ್ತಿದ್ದರೇ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಗತ ಕೋರುವ ಬ್ಯಾನರ್ ಗಳು ನಳ ನಳಿಸುತ್ತಿವೆ. ಕಾರ್ಯಕ್ರಮದ ವೇದಿಕೆಯತ್ತ ಪೋಲಿಸ್ ಇಲಾಖೆ ಭೇಟಿ ನೀಡಿ ಮುತುವರ್ಜಿ ವಹಿಸುತ್ತಿರುವುದು ಕಂಡು ಬಂದಿತು

ಅಂದು ಬೆಳಿಗ್ಗೆ 9.30 ಗಂಟೆಗೆ ಕುಕನೂರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರದೊಂದಿಗೆ ಮೆರವಣಿಗೆಯ ಮೂಲಕ ಆಗಮಿಸಿ ಎಪಿಎಂಸಿ ಆವರಣದಲ್ಲಿ ಸಹಕಾರಿ ಜಾಗೃತ ಸಮಾವೇಶ ಕಾರ್ಯಕ್ರಮವನ್ನು ಜರುಗುವುದು.

ಈ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ, ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ, ಶಾಸಕ ಜಿ. ಟಿ. ದೇವೇಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮತ್ತು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಇತರ ಅಧಿಕಾರಿ ಮತ್ತು ಮುಖಂಡರುಗಳು ಆಗಮಿಸಲಿದ್ದಾರೆ.

About Mallikarjun

Check Also

ಶ್ರೀ ಶಂಕರ ಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ.

Sharadamba of Sri Shankara Math celebrates its seventh anniversary. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.