Breaking News

ಮಕರ ಸಂಕ್ರಾಂತಿ ನಿಮಿತ್ಯ:ಸೋಪು, ಶ್ಯಾಂಪೂ ಬಿಡಿ ಕಡ್ಲೆಹಿಟ್ಟಿ ನಿಂದ ಸ್ನಾನ ಮಾಡಲು, ಕಡ್ಲೆಹಿಟ್ಟಿನ ಪಾಕೆಟ್ ವಿತರಣೆ

On the occasion of Makar Sankranti: Soap, shampoo, and kadlehitti bags distributed for

ಜಾಹೀರಾತು

bathing

ಗಂಗಾವತಿ:ನರ‍್ಮಲ ತುಂಗಭದ್ರ ಅಭಿಯಾನದ ಮುಂದುವರಿದ ಭಾಗವಾಗಿ ಮಕರ ಸಂಕ್ರಾಂತಿ ನಿಮಿತ್ಯ ವರದಶ್ರೀ ಪೌಂಢೇಶನ್, ಗ್ರಾಮೀಣ ಭಾರತಿ ೯೦.೪ಎಫ್ ಎಂ ರೇಡಿಯೋ, ನರ‍್ಮಲ ತುಂಗಭದ್ರಾ ಅಭಿಯಾನ ಬಳಗ , ಚಾರಣ ಬಳಗ, ರೋಟರಿ ಕ್ಲಬ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸರ‍್ವನಿಕರಲ್ಲಿ ಇಂದು ಜಾಗೃತಿ ಮೂಡಿಸಲಾಯಿತು.
ಸೋಪು, ಶಾಂಪೂ ಬಿಡಿ ಕಡ್ಲೆಹಿಟ್ಟು ಬಳಸಿ ಪುಣ್ಯಸ್ನಾನ ಮಾಡಿ.. ಜೀವನದಿಗಳನ್ನು ಮಲೀನ ಮಾಡದಿರಿ, ನದಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿರಿ ಎಂದು ಕರಪತ್ರಗಳನ್ನು ಹಂಚಲಾಯಿತು.
ಇಂದು ಬೆಳಿಗ್ಗೆ ನಗರದ ಕುವೆಂಪು ಬಡಾವಣೆಯ ನಾಗರಿಕರಿಗೆ ಕಡ್ಲೆಹಿಟ್ಟಿನ ಪಾಕೆಟ್ಗಳನ್ನು ವಿತರಿಸಲಾಯಿತು.
ಬಳಿಕ ನಗರದ ೨೬ನೇ ವರ‍್ಡಿನ ಮಕ್ಕಳ ಉದ್ಯಾನವನದ ಬಳಿ ನಗರಸಭೆಯ ಪೌರಕರ‍್ಮಿಕರಿಗೆ ಕಡ್ಲೆಹಿಟ್ಟಿನ ಪಟ್ಟಣಗಳನ್ನು ವಿತರಿಸಲಾಯಿತು.
ಈ ವೇಳೆ ನಾಗರಾಜ್ ಗುತ್ತೇದಾರ ಹಿರಿಯ ವಕೀಲರು, ಗ್ರಾಮೀಣ ಭಾರತಿ ೯೦.೪ಈಒ ರೇಡಿಯೋ ನಿಲಯದ ನರ‍್ದೇಶಕರಾದ ರಾಘವೇಂದ್ರ ತೂನ, ನಟ ವಿಷ್ಣುತರ‍್ಥ ಜೋಶಿ, ದಂತ ವೈದ್ಯ ಡಾ ಶಿವಕುಮಾರ ಮಾಲಿಪಾಟೀಲ್, ರೋಟರಿ ಕ್ಲಬ್ ನ ಟಿ ಆಂಜನೇಯ, ಪತ್ರರ‍್ತ ಮಂಜುನಾಥ್ ಗುಡ್ಲಾನೂರ್, ಶಿವಪ್ಪ ಗಾಳಿ, ಶ್ರವಣಕುಮಾರ ರಾಯ್ಕರ್, ಎ.ಕೆ ಮಹೇಶ್, ಮಹಾಲಿಂಗಪ್ಪ ಬನ್ನಿಕೊಪ್ಪ, ಅಮರೇಗೌಡ, ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷರಾದ ಕೃಷ್ಣ ಗಂಗಾವತಿ, ಪ್ರಹ್ಲಾದ್ ಕುಲರ‍್ಣಿ, ಮೈಲಾರಪ್ಪ ಬೂದಿಹಾಳ, ಹನುಮೇಶ್ ಭಾವಿಕಟ್ಟಿ ಸೇರಿದಂತೆ ಇನ್ನಿತರರು ಇದ್ದರು.
ನಂತರ ಆನೆಗುಂದಿಯ ಚಿಂತಾಮಣಿಯಲ್ಲಿ ಮಕರ ಸಂಕ್ರಮಣ ದಿನದಂದು ಪುಣ್ಯಸ್ನಾನಕ್ಕಾಗಿ ಬರುವ ಸರ‍್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಮ್ಮ ಜೀವನಾಡಿಯಾಗಿರುವ ತುಂಗಭದ್ರಾ ನದಿ ಮಲೀನಗೊಳ್ಳುತ್ತಿದ್ದು, ಕುಡಿಯಲು, ಬಳಸಲು ಯೋಗ್ಯವಿಲ್ಲದಂತಾಗಿದೆ. ಬಟ್ಟೆ, ಸೋಪು, ಶ್ಯಾಂಪೂ, ಪ್ಲಾಸ್ಟಿಕ್ ನಂತಹ ವಿಷಕಾರಿ ಮಲೀನಕಾರಕ ವಸ್ತುಗಳನ್ನು ದಯವಿಟ್ಟು ನದಿಗೆ ಎಸೆಯಬೇಡಿ.. ನದಿಯಲ್ಲಿರುವ ಜಲಚರ ಜೀವಿಗಳನ್ನು ರಕ್ಷಿಸಿ, ಜೀವಜಲವನ್ನು ಉಳಿಸಿಕೊಳ್ಳೋಣ ಇದು ನಮ್ಮೆಲ್ಲರ ಜವಾಬ್ದಾರಿ. ತುಂಗಭದ್ರಾ ನದಿಯನ್ನು ವಿಷಮುಕ್ತಗೊಳಿಸುವ ಈ ಒಂದು ಸಂಕಲ್ಪದಲ್ಲಿ ನಮ್ಮೊಂದಿಗೆ ಕೈಜೋಡಿಸಿರಿ ಎಂದು ಕರಪತ್ರ, ಕಡ್ಲೆಹಿಟ್ಟಿನ ಪಾಕೆಟ್ ವಿತರಿಸಿ ಜಾಗೃತಿ ಮೂಡಿಸಿದರು.
ಇದೇ ವೇಳೆ ಪುಣ್ಯಸ್ನಾನಕ್ಕೆ ಬಂದ ನಾಗರಿಕರಿಗೆ ಕಡಲೆಹಿಟ್ಟಿನ ಪೊಟ್ಟಣಗಳನ್ನು ವಿತರಿಸಲಾಯಿತು.ಈ ವೇಳೆ ರಾಘವೇಂದ್ರ ತೂನ, ಚಿತ್ರನಟ ವಿಷ್ಣು ತರ‍್ಥ ಜೋಶಿ, ಆನೆಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಹುಲಿಗೆಮ್ಮ ಹೊನ್ನಪ್ಪ ನಾಯಕ ರವರು ಆರ್ ಕೃಷ್ಣ ಗಂಗಾವತಿ, ಹನುಮೇಶ್ ಬಾವಿಕಟ್ಟಿ ಇದ್ದರು.

ಋಷಿಮುಖ ರ‍್ವತ ತರ‍್ಥ ಕ್ಷೇತ್ರದಲ್ಲಿ ಪುಣ್ಯ ಸ್ನಾನಕ್ಕೆ ಎಂದು ಬಂದಿರುವ ಹನುಮನಳ್ಳಿ ಗ್ರಾಮದ ಪರಿಸರವಾದಿ ನೇತೃತ್ವದಲ್ಲಿ ಕಡ್ಲೆಹಿಟ್ಟಿನ ಪಟ್ಟಣಗಳನ್ನು ಹಂಚುತ್ತಿರುವ ದೃಶ್ಯ

ವಿರುಪಾಪುರ ಗಡ್ಡಿಯಲ್ಲಿ ಹನುಮೇಶ್ ಬಾವಿಕಟ್ಟಿ ಅವರ ನೇತೃತ್ವದಲ್ಲಿ ೧೦೦೦ಕ್ಕೂ ಹೆಚ್ಚು ಕಡ್ಲೆಹಿಟ್ಟಿನ ಪೊಟ್ಟಣಗಳನ್ನು ವಿತರಿಸಲಾಯಿತು

About Mallikarjun

Check Also

ಬಸವನದುರ್ಗಾ ಗ್ರಾಮದ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡು ಆರಂಭ

Book stall opens at Basavandurga village bus stand ಜ್ಞಾನ ವೃದ್ಧಿಗಾಗಿ ಪುಸ್ತಕ ಗೂಡು ತಾಪಂ ಇಓ ರಾಮರೆಡ್ಡಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.