Breaking News

ಹೆದ್ದಾರಿಯಲ್ಲಿ ಪಥ ಬಿಟ್ಟು ಚಲಿಸುವ ವಾಹನಗಳನಿಯಂತ್ರಣ:ಹೆದ್ದಾರಿಪ್ರಾಧಿಕಾರದಿಂದ ಸ್ಪಂಧನೆ.

Control of off-road vehicles on highways: Response from highway authorities.

ಜಾಹೀರಾತು
Screenshot 2025 01 09 16 46 02 63 6012fa4d4ddec268fc5c7112cbb265e7

ಗಂಗಾವತಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ವಾಹನಗಳು ರಸ್ತೆಯ ಎಡ ಪಥ ಬಿಟ್ಟು ಸಂಚರಿಸುತ್ತಿರುವುದರಿಂದ ಅಫ಼ಘಾತಗಳು ಸಂಭವಿಸುತ್ತಿವೆ.ಇತ್ತೀಚಿಗೆ ಭಾರಿ ವಾಹನವೊಂದು ರಸ್ತೆಯ ಬಲ ಭಾಗದಲ್ಲಿ ಸಂಚರಿಸಿದ್ದರಿಂದ ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ವೋಲ್ವಾ ಕಾರ್ ಒಂದರ ಮೇಲೆ ಲಾರಿ ಮಗುಚಿ ಬಿದ್ದು ಆರು ಜನ ಮೃತರಾದರು,ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ವಾಣಿಜೋಧ್ಯಮ ಮಹಾ ಮಂಡಳದ ನಿಕಟ ಪೂರ್ವ ನಿರ್ದೇಶಕ ಅಶೋಕಸ್ವಾಮಿ ಹೇರೂರ ಪಬ್ಲಿಕ್ ಗ್ರೀವಿಯನ್ಸ್ ಪೊರ್ಟಲ್ ನಲ್ಲಿ ದೂರು ದಾಖಲಿಸಿದ್ದರಿಂದ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿದೆ.

ಲಾರಿ ಮತ್ತು ಕಾರು ಬೇರೆ ಬೇರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಅಫ಼ಘಾತ ಸಂಭವಿಸಲು ಲಾರಿಯು ರಸ್ತೆಯ ಎಡ ಭಾಗದಲ್ಲಿ ಸಂಚರಿಸುವ ಬದಲು, ಬಲ ಭಾಗದಲ್ಲಿ ಸಂಚರಿಸಿದ್ದೇ ಕಾರಣ.
ಲಾರಿ,ಬಸ್,ಟ್ರ್ಯಾಕ್ಟರ್,ಎತ್ತಿನ ಬಂಡಿ ಮುಂತಾದವುಗಳು ಹಿಂಬಾದಲ್ಲಿ ಯಾವುದೇ ರೇಡಿಯಮ್ ಸ್ಟಿಕ್ಕರ್ ಗಳನ್ನು ಅಳವಡಿಸಿ ಕೊಂಡಿರುವುದಿಲ್ಲ.ಬ್ರೆಕ್ ಲೈಟ್ ಹಾಗೂ ಇಂಡಿಕೇಟರ್ ಸಿಗ್ನಲ್ ಗಳು ಕೆಲಸ ನಿರ್ವಹಿಸುತ್ತಿರುವುದಿಲ್ಲ.ಎಲ್ಲಾ ರಸ್ತೆಗಳಲ್ಲಿಯೂ ಸಂಚರಿಸುವ ಉಸುಕು, ಬಿಂಚಿ ಕಲ್ಲುಗಳು, ಹೊತ್ತ ಲಾರಿ ಮತ್ತು ಟ್ರ್ಯಾಕ್ಟರ್ ಗಳು ಟ್ರಾಲಿಯ ಮೇಲೆ ಯಾವುದೇ ಹೊದಿಕೆಯನ್ನು ಹೊದ್ದಿರುವುದಿಲ್ಲ.ಇದರಿಂದ ಸಾಕಷ್ಟು ಸಣ್ಣ-ಪುಟ್ಟ ವಾಹನಗಳ ಮುಂದಿನ ಗ್ಲಾಸ್ ಗಳು ಒಡೆದ ಉದಾಹರಣೆಗಳು ಸಾಕಷ್ಟಿವೆ ಎಂಬ ದೂರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿವರಣೆ ನೀಡಿದೆ.

ಕಬ್ಬಿಣದ ರಾಡ್ ಹೊತ್ತ ಲಾರಿ,ಟ್ರ್ಯಾಕ್ಟರ್ ಗಳು ಮುಂಜಾಗ್ರತೆಯ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿವೆ,ಎತ್ತರದ ರಸ್ತೆಯಲ್ಲಿ ಇಂತಹ ವಾಹನಗಳು ಸಂಚರಿಸುವಾಗ ಹಿಂಬದಿಯ ವಾಹನಗಳ ಮೇಲೆ ಕಬ್ಬಿಣದ ವಸ್ತುಗಳು ನೇರವಾಗಿ ಹಿಂದೆ ಸಂಚರಿಸುವ ವಾಹನಗಳ ಮೇಲೆ ಬಿದ್ದು ,ಸಾವು-ನೋವುಗಳು ಸಂಭವಿಸಿದ ಘಟನೆಗಳು ಸಹ ವರದಿಯಾಗಿವೆ.(ಹಳೇ ಟಯರ್ ಅಥವಾ ರಬ್ಬರ್ ಪಟ್ಟಿಗಳನ್ನು ಕಟ್ಟಿಕೊಂಡು ಸಂಚರಿಸುವುದು ವಾಡಿಕೆ) ಎಂದು ಹೇರೂರ ವಿವರಿಸಿದ್ದರು.

ಹೈವೇ ಪೆಟ್ರೊಲಿಂಗ್ ವಾಹನಗಳು ಮತ್ತು ಆರ್.ಟಿ.ಓ ಅಧಿಕಾರಿಗಳು ಇವೆಲ್ಲವುಗಳನ್ನು ಕಂಡು ಕಾಣದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ,ಅವೈಜ್ಞಾನಿಕವಾಗಿ ಬಾಡಿ ಕಟ್ಟಿಸಿ ಕೊಂಡು ಸಂಚರಿಸುವ ಭಾರಿ ಗಾತ್ರದ ವಾಹನಗಳನ್ನು ತಡೆಯಬೇಕು.ಬೆಂಗಳೂರಿನ ನೆಲಮಂಗಲ ಹೈವೇ ದಲ್ಲಿ ಇಂತಹ ಅವೈಜ್ಞಾನಿಕ ಬಾಡಿ ಹೊಂದಿದ ಲಾರಿಯಿಂದಲೇ ಅಫ಼ಘಾತ ಸಂಭವಿಸಿರುವುದನ್ನು ಅವರು ಉಲ್ಲೇಖಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹೈವೇ ಪೆಟ್ರೊಲಿಂಗ್ ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ವಾಹನಗಳ ಓಡಾಟ ತಡೆಯುವುದು ಅಗತ್ಯ.
ಈ ನಿಟ್ಟಿನಲ್ಲಿ ಮೇಲ್ಕಾಣಿಸಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ,ಕ್ರಮ ಕೈಗೊಳ್ಳಲು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಅಶೋಸ್ವಾಮಿ ಹೇರೂರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇಮೇಲ್ ಮೂಲಕ ಪತ್ರ ಒತ್ತಾಯಿಸಿದ್ದರು.

About Mallikarjun

Check Also

screenshot 2025 10 09 18 49 33 65 e307a3f9df9f380ebaf106e1dc980bb6.jpg

2005ರಪೂರ್ವಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು : ಮುಖ್ಯಮಂತ್ರಿ ಸಿದ್ದರಾಮಯ್ಯ 

Those who made a living in forest land before 2005 have the right to land: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.