Location Survey for Suryanayakantanda Revenue Village Declaration

ಗಂಗಾವತಿ: ತಾಲೂಕಿನ ಗಂಗಾವತಿ ಹೋಬಳಿಯ ಸೂರ್ಯನಾಯಕನತಾಂಡ ವಾರ್ಡ್ ನಂ: ೦೬ ಲಂಬಾಣಿ ತಾಂಡವನ್ನು ಕಂದಾಯ ಗ್ರಾಮ ಘೋಷಣೆ ಕುರಿತು ಶ್ರೀ ಬಾಲಾಜಿ ಟಿ. ಚವ್ಹಾಣ್ ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿ ಪ್ರಕಾರ ಇಂದು ಜನವರಿ-೦೯ ಸರ್ಕಾರದ ಕಂದಾಯ ಆಯುಕ್ತಾಲಯದಿಂದ ಪ್ರಧಾನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಕಂದಾಯ ಗ್ರಾಮ ಘೋಷಣೆ ಕೋಶದ ಅಧಿಕಾರಿ ಶ್ವೇತಾ ಹಾಗೂ ಸ್ಥಳೀಯ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರರು, ಸರ್ವೆ ಅಧಿಕಾರಿಗಳು, ಗಂಗಾವತಿ ಹಾಗೂ ವೆಂಕಟಗಿರಿಯ ಕಂದಾಯ ನಿರೀಕ್ಷಕರು, ಬಸಾಪಟ್ಟಣ ಗ್ರಾ.ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇವರುಗಳು ಜಂಟಿ ಸ್ಥಳ ತನಿಖೆ ಸಮೀಕ್ಷೆ, ಸರ್ವೇ ಕಾರ್ಯ ಮಾಡಿದರು. ಆದಷ್ಟು ಬೇಗ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಕೇಂದ್ರ ಕಾರ್ಯಾಲಯದ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಸ್ಥಳದಲ್ಲಿ ಸ್ಥಳೀಯ ಮುಖಂಡರಾದ ಗ್ರಾ.ಪಂ ಗೌರಮ್ಮ ಶಂಕರ ನಾಯಕ, ಮುಖಂಡರಾದ ಬಾಲಾಜಿ ಚವ್ಹಾಣ್, ಕಟ್ಟಿಮನಿ ಹನುಮಂತಪ್ಪ ನಾಯಕ, ಎಸ್.ವಿ ಗೋಪಾಲಕೃಷ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಮರೇಶ ನಾಯಕ, ಬಂಜಾರ ಸಮಾಜದ ಮುಖಂಡರಾದ ಕಟ್ಟಿಮನಿ ಹನುಮಂತಪ್ಪ, ಕಾರಭಾರಿ ಸಕ್ರಪ್ಪ, ಡಾವು ಶಂಕ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.
ಸದರಿ ಅಧಿಕಾರಿಗಳ ತಂಡವು ಸೂರ್ಯನಾಯಕನ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲು ಸಂಪೂರ್ಣ ಅರ್ಹತೆ ಹೊಂದಿದ್ದು, ಆದಷ್ಟು ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸ್ಥಳೀಯ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು.