Breaking News

ಸೊಲ್ಲಾಪುರ ಗಾರ್ಮೆಂಟ್ಸ್ ಹಬ್ ; ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್

Solapur Garments Hub; Governor CP Radhakrishnan

ಜಾಹೀರಾತು

ಬೆಂಗಳೂರು :ಸೊಲ್ಲಾಪುರದಲ್ಲಿ ಸಿಗುವ ಬಟ್ಟೆಗಳು ಗುಣಮಟ್ಟದ್ದಾಗಿದ್ದು, ಇದೊಂದು ಗಾರ್ಮೆಂಟ್ಸ್ ಹಬ್ ಎಂದು ರಾಜ್ಯಪಾಲ ಸಿ‌.ಪಿ.ರಾಧಾಕೃಷ್ಣನ್ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಸೋಲಾಪುರ ಗಾರ್ಮೆಂಟ್ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ 8 ನೇ ಸಮವಸ್ತ್ರ 2024 ಮೇಳ ಉದ್ಘಾಟಿಸಿ

ಮಾತನಾಡಿದರು.ಸೊಲ್ಲಾಪುರ ನಗರವನ್ನು ಪ್ರಮುಖ ಗಾರ್ಮೆಂಟ್ ಹಬ್ ಆಗಿ ಉತ್ತೇಜಿಸಲು ಸಾಕಷ್ಟು ಕ್ರಮ ವಹಿಸಲಾಗುತ್ತಿದೆ. ಇಲ್ಲಿನ ಬಟ್ಟೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಿದೆ. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗಿದೆ. ಇಲ್ಲಿನ ಬಟ್ಟೆಗಳು ಗುಣಮಟ್ಟವಾಗಿದ್ದು, ವಿಶ್ವಾಸಾರ್ಹತೆವುಳ್ಳದ್ದಾಗಿದೆ. ಸೊಲ್ಲಾಪುರದಲ್ಲಿ ಸುಮಾರು 300 ಗಾರ್ಮೆಂಟ್ಸ್ ಗಳಿದ್ದು, ತರೇಹವಾರಿ ಬಟ್ಟೆಗಳು ಉತ್ಪಾದಿಸಲಾಗುತ್ತಿದೆ ಎಂದರು.

ಮಹಾರಾಷ್ಟ್ರ ಸರ್ಕಾರವು ಸೊಲ್ಲಾಪುರದಲ್ಲಿ 300 ಕೋಟಿ ರೂ ವೆಚ್ಚದಲ್ಲಿ ಗಾರ್ಮೆಂಟ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಿದೆ ಅದರ ಮೇಲೆ ಅಭಿವೃದ್ಧಿಪಡಿಸುವ ಉದ್ಯಾನವನದ ಭೂಮಿ ಪೂಜೆ (ನೆಲ ಒಡೆಯುವ ಸಮಾರಂಭ) ಜನವರಿ 26 ರಂದು ನಡೆಯಲಿದೆ ಎಂದು ರಾಜ್ಯ ತಿಳಿಸಿದೆ. ಈ ವಿಶಿಷ್ಟವಾದ ಗಾರ್ಮೆಂಟ್ ಪಾರ್ಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಮತ್ತು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಸರ್ಕಾರವು ಒದಗಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿ ಸೋಲಾಪುರವು ದೇಶದ ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರವನ್ನು ಒದಗಿಸುವ ಪ್ರಮುಖ ಜವಳಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು‌. ಈ ಮೇಳದಲ್ಲಿ ಇತ್ತೀಚಿನ ಹೊಸ ವಿನ್ಯಾಸಗಳು, ಸಮವಸ್ತ್ರಗಳು ಮತ್ತು ಇತರ ಉಡುಪುಗಳನ್ನು ಪ್ರದರ್ಶಿಸುವ 110 ಮಳಿಗೆಗಳು

ಇದ್ದವು.ಅಸೋಸಿಯೇಷನ್ ಅಧ್ಯಕ್ಷ ನೀಲೇಶ್ ಶಾಹ, ಫೇರ್ ಚೇರಮನ್ ಸುನೀಲ್ ಮೆಂಗೋಜಿ, ಸಂಚಾಲಕ ಅಮಿತ್ ಜೈನ್, ಉಪಾಧ್ಯಕ್ಷ ಪ್ರಕಾಶ್ ಪವಾರ್, ಜಾಯಿಂಟ್ ಸೆಂಕೆಂಟರಿ ವೆಂಕಟೇಶ್ ಮೆಹಾಂಗಾಜಿ, ಸತೀಶ್ ಪವಾರ್ ಉಪಸ್ಥಿತಿ ಇದ್ದರು‌.

About Mallikarjun

Check Also

ಡಿ. 27ಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಕೊಪ್ಪಳ ಜಿಲ್ಲೆ ಪ್ರವೇಶ :ಬಾಲಕೃಷ್ಣ ನಾಯ್ಡು

D. 27 Nirmala Tungabhadra Abhiyan Padayatra Koppal District Entry : Balakrishna Naidu ರಾಷ್ಟ್ರೀಯ ಸ್ವಾಭಿಮಾನ ಆಂದೋಲನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.