Breaking News

ಪಂಚಮಸಾಲಿ ಹೋರಾಟ ಆರೆಸಸ್ ಲಿಂಗಾಯತ ಸಮಾಜದ ವಿರುದ್ಧ ಹೆಣೆದ ದೊಡ್ಡ ಷಡ್ಯಂತ್ರ: ಶ್ರೀಕಾಂತ ಸ್ವಾಮಿ

Panchmasali struggle is a big conspiracy against Lingayat society: Srikanta Swamy

ಜಾಹೀರಾತು

ವಾಟ್ಸಪ್ ಸಂಗ್ರಹ

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸೌಲಭ್ಯ ಹೋರಾಟಕ್ಕೆ ರಾಜ್ಯ ಸರ್ಕಾರ 2017ರಲಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು, ಅದಕ್ಕೆ ಆರೆಸಸ್ ವಿರೋಧ ಮಾಡಿತ್ತು, ಅದರ ಕಪಿ ಮುಷ್ಠಿಯಲ್ಲಿ ಇರುವ ಮೋದಿಜಿ ಸರಕಾರ ಮುಖಾಂತರ ತಿರಸ್ಕಾರ ಮಾಡಿಸಿತ್ತು. 2018ರ ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯತ ಬಹುಸಂಖ್ಯಾತ ಇರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆ ಆಗಿತ್ತು. ಆದರಿಂದ ಆರೆಸಸ್ ದೊಡ್ಡ ಯೋಜನೆ ಮಾಡಿ ಅದಕ್ಕೆ ಯತ್ನಾಳ ಅವರನ್ನು ಬಳಸಿ, ಅವರ ಮುಖಾಂತರ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿ ಇದ್ದ ಪಂಚಮಸಾಲಿ ಜಗದ್ಗುರು ಪೂಜ್ಯ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯನ್ನು ಸೆಳೆದುಕೊಂಡು ಅವರ ಮುಖಾಂತರ , ಲಿಂಗಾಯತ ಸಮಾಜಕ್ಕೆ ಅಲ್ಪಸಂಖ್ಯಾತ ಸೌಲಭ್ಯ ಏಕೆ , ಪಂಚಮಸಾಲಿ ಸಮಾಜಕ್ಕೆ ಅಲ್ಪಸಂಖ್ಯಾತ ಸೌಲಭ್ಯಕ್ಕಾಗಿ ಹೋರಾಟ ಮಾಡಿ ಎಂದು ಪುಸ್ಲಾಯಿಸಿತು. ಅದಕ್ಕೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಕುಮಾರಸ್ವಾಮಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿತ್ತು.

ಈ ಕುತಂತ್ರ ಮುಖಾಂತರ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ಕುಮಾರಸ್ವಾಮಿ ಸಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ರಚಿಸಿತ್ತು. ಆವಾಗ ಕೂಡ ಡಬಲ್ ಎಂಜಿನ್ ಸರಕಾರ ಪಂಚಮಸಾಲಿ ಅವರಿಗೆ ಅಲ್ಪಸಂಖ್ಯಾತ ಮೀಸಲಾತಿ ಕೊಡಲಿಲ್ಲ, ನಂತರ ಪಂಚಮಸಾಲಿ ಜಗದ್ಗುರು ಅವರನ್ನು ತಂದು ಸ್ವತಂತ್ರ ಉದ್ಯಾನದಲ್ಲಿ ತಿಂಗಳುಗಟ್ಟಲೆ ಧರಣಿ ಕೂಡಿಸಿದ್ದರು. ಇದರ ಹಿಂದೆ ಆರೆಸಸ್ ಶ್ರೀ ಸಂತೋಷಜಿ ತಂತ್ರಗಾರಿಕೆ, ಯತ್ನಾಳ ಸಾಥ್ ಕೊಟ್ಟರು. ಕೊನೆಗೂ ಬಿಜೆಪಿ ಮತ್ತೊಂದು ಷಡ್ಯಂತ್ರ ಮಾಡಿ ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೀಸಲಾತಿ ತೆಗೆದು ಹಿಂದುಳಿದವರ ಗುಂಪು ಮಾಡಿ 2% ಪಂಚಮಸಾಲಿ ಅವರಿಗೆ ಮೀಸಲಾತಿ ಕೊಟ್ಟಿತ್ತು. ಅವರಿಗೆ ಗೊತ್ತಿತ್ತು ಮುಂದೆ ನ್ಯಾಯಾಲಯದಲ್ಲಿ ಮೀಸಲಾತಿ ರದ್ದಾಗುತ್ತದೆ ಎಂದು, ಸ್ವಾಮೀಜಿ ಒಪ್ಪಲಿಲ್ಲ ಆದರೂ ಅವರನ್ನು ಒಪ್ಪಿಸಲು ಒತ್ತಡ ಹಾಕಿದರು. ಆವಾಗ ಪಂಚಮಸಾಲಿ ಒಕ್ಕೂಟದಲ್ಲಿ ಒಡಕು ಹುಟ್ಟಿತ್ತು. ಭಸ್ಮಾಸುರ ತನ್ನ ತಲೆ ಮೇಲೆ ಕೈಯಿಟ್ಟು ಕೊಂಡ ಹಾಗೆ ಬಿಜೆಪಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಿರ್ನಾಮ ಆಯಿತು, ಕಾಂಗ್ರೆಸ್ ಗೆದ್ದಿತ್ತು.

ಇಂದು ಕೂಡ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಂಖ್ಯಾತ ಸೌಲಭ್ಯ ಹೋರಾಟಕ್ಕೆ ಹಿನ್ನಡೆ ಮಾಡಲು ಆರೆಸಸ್ ಕುತಂತ್ರ ಮಾಡುತ್ತಿದೆ. ಬಸವಣ್ಣನವರನ್ನು ಅವಮಾನ ಮಾಡುವದು, ಅವರ ಬಗ್ಗೆ ಸುಳ್ಳಿನ ಕಂತೆಯ ” ವಚನ ದರ್ಶನ” ಎನ್ನುವ ಕಳಪೆ ಪುಸ್ತಕ ಬರೆದು ಪ್ರಚಾರ ಮಾಡಿದರು, ನಂತರ ಯತ್ನಾಳ ಅವರಿಂದ ಬಸವಣ್ಣ ಹೊಳೆ ಹಾರಿ ಆತ್ಮಹತ್ಯಾ ಮಾಡಿಕೊಂಡರು ಹೇಳಿಕೆ ಕೊಡಿಸಿದರು, ಅದಕ್ಕೆ ಬದ್ದವಾಗಿ ಇರಲು ಯತ್ನಾಳ ಮೇಲೆ ಪ್ರಭಾವ ಬೀರಿದರು.

ಪಂಚಮಸಾಲಿ ಹೋರಾಟಕ್ಕೆ ಲಿಂಗಾಯತ ಸಂಘಟನೆಗಳು ಮತ್ತು ಮಠಾಧೀಶರು ಮೌನ ವಹಿಸಿದರು. ಪಂಚಮಸಾಲಿ ಸಂಖ್ಯಾ ಬಲ ಹೆಚ್ಚು ಇದೆ ಎನ್ನುವ ಒಂದು ಹೆದರಿಕೆ ಮತ್ತು ಕೆಲವು ಲಿಂಗಾಯತ ಧರ್ಮ ಸಂಘಟನೆ ಮುಖಂಡರು ಪಂಚಮಸಾಲಿ ಆಗಿದ್ದು ಒಂದು ಕಾರಣ ಆಗಿದೆ. ಮಾತಾಜಿ ಮಾತೆ ಮಹಾದೇವಿ, ತೋಂಟದಾರ್ಯ ಶ್ರೀಗಳು ಮತ್ತು ಇಲ್ಲಕಲ್ ಶ್ರೀಗಳು ಲಿಂಗೈಕ್ಯ ಆಗಿದ್ದು ಲಿಂಗಾಯತ ಧರ್ಮ ಮತ್ತು ಅಲ್ಪಸಂಖ್ಯಾತ ಸೌಲಭ್ಯ ಹೋರಾಟಕ್ಕೆ ದೊಡ್ಡ ಹೊಡೆತ ಬಿತ್ತು. ರಾಷ್ಟ್ರೀಯ ಬಸವ ದಳ ಎರಡು ಹೋಳ ಆಯಿತು, ಬಸವ ಪ್ರತಿಷ್ಠಾನ ಒಡೆದು ಹೋಯಿತು, ಚಿತ್ರದುರ್ಗ ಶ್ರೀಗಳಿಗೆ ನಕಲಿ ಕೇಸ್ ನಲ್ಲಿ ಜೈಲ ಕಳುಹಿಸಿದರು, ಜಾಲಿಮ ಸಂಘಟನೆಯ ಇಬ್ಬರು ಮಹಿಳೆಯರು ಅಶ್ಲೀಲ ಆಡಿಯೋ ಬಿಟ್ಟು ಲಿಂಗಾಯತ ಸ್ವಾಮೀಜಿಗಳ ಅವಹೇಳನ ಮಾಡಿದರು, ಅದರಲ್ಲಿ ಒಬ್ಬ ಲಿಂಗಾಯತ ಸ್ವಾಮೀಜಿ ಆತ್ಮಹತ್ಯಾ ಮಾಡಿಕೊಂಡರು. ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿ ಇದ್ದ ಎಲ್ಲಾ ರಾಜಕೀಯ ನಾಯಕರು ಮೌನವಹಿಸಿ ಹಿಂದೆ ಸರಿದರು, ಪಂಚಮಸಾಲಿ ಇಬ್ಬರು ಜಗದ್ಗುರುಗಳ ಜಗಳ ಪೈಪೋಟಿಯ ಕಾರಣವೂ ಇದೆ. ಇವೆಲ್ಲ ದುರಂತಗಳು ನಾಲ್ಕೈದು ವರ್ಷಗಳಲ್ಲಿ ನಡೆದು ಹೋಗಿ ಸಂಪೂರ್ಣ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸೌಲಭ್ಯ ಹೋರಾಟ ನಿಂತು ಹೋಗಿದೆ.ಇದರಲ್ಲಿ ಆರೆಸಸ್ ಸ್ವಲ್ಪ ಯಶಸ್ಸು ಕಂಡಿತ್ತು.

ಇನ್ನು ಕಾಲ ಮಿಂಚಿಲ್ಲ, ಲಿಂಗಾಯತ ಸಮಾಜದ ಎಲ್ಲ ವರ್ಗದವರೂ ಒಂದಾಗಿ ಮತ್ತೆ ಲಿಂಗಾಯತ ಸಮಾಜಕ್ಕೆ ಅಲ್ಪಸಂಖ್ಯಾತ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕು. ನಾವೇ ಪಂಚಮಸಾಲಿ, ವೀರಶೈವ, ಜಂಗಮ, ಬಣಜಿಗ, ಸಾದರ ಲಿಂಗಾಯತ ಎಂದು ಒಡೆದು ಹೋದರೆ ಯಾರು ಯಶಸ್ವಿ ಆಗಲ್ಲ, ಒಗ್ಗೂಡಿದರೆ ಎಲ್ಲರಿಗೂ ಒಳ್ಳೆಯದು ಆಗುತ್ತದೆ.

ಜೈ ಬಸವ ಜೈ ಲಿಂಗಾಯತ ಜೈ ಭಾರತ 🙏

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

About Mallikarjun

Check Also

ಜಾವಗಲ್‌ ಮತ್ತು ಕಲಬುರ್ಗಿಗೆ ಬಸ್ ಬಿಡಲು ಮನವಿ ಸಲ್ಲಿಕೆ

Submission of request to leave bus to Javagal and Kalaburgi ಯಲಬುರ್ಗಾ.ಡಿ.11.: ಯಲಬುರ್ಗಾ ಪಟ್ಟಣದ ಬಸ್‌ ಡಿಪೋ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.