Breaking News

ಕ್ರಾಂತಿ ಕಾರಿ ರೈತ ಸೇನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. 16ರಂದು ಬೆಳಗಾವಿ ಚಲೋ,,,

Demanding fulfillment of various demands from revolutionary peasant army d. Come to Belgaum on 16th.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಕ್ರಾಂತಿ ಕಾರಿ ರೈತ ಸೇನೆಯಿಂದ ವಿವಿಧ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. 16ರಂದು ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿಕಾರಿ ರೈತ ಸೇನೆಯ ಕುಕನೂರು ತಾಲೂಕಾಧ್ಯಕ್ಷ ರಾಜೇಶ ವಾಲ್ಮೀಕಿ ಹೇಳಿದರು.

ಕುಕನೂರು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಬುಧವಾರದಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಂತರದಲ್ಲಿ ಈ ಕುರಿತು ರಾಜ್ಯಾಧ್ಯಕ್ಷ ಎಮ್.ಎನ್ ಕುಕನೂರ ಮಾತನಾಡಿ ರಾಜ್ಯದಲ್ಲಿ ನಮ್ಮ ರೈತ ಸಂಘಟನೆಗಳು ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಒಂದು ಟನ್ ಕಬ್ಬಿಗೆ ಕನಿಷ್ಠ 5500 ರೂಪಾಯಿ ನಿಗದಿ ಪಡಿಸುವಂತೆ ಒತ್ತಾಯಿಸಿ ನಮ್ಮ ವಿವಿಧ ಹಕ್ಕೋತ್ತಾಯಗಳು ಜಾರಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಚಲೋ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯದ ರೈತ ಭಾಂದವರು ಆಗಮಿಸಬೇಕು ಎಂದು ಮನವಿ ಮಾಡಿದರು.

ರೈತರ ಬೇಡಿಕೆ : ತುಂಗಾಭದ್ರಾ ಅಣೆಕಟ್ಟೆಯ ಗೇಟ್ ಗಳ ಆಧುನಿಕರಣ, ಹಾಗೂ ಹೂಳು ತೆಗೆಸಬೇಕು, ಭತ್ತವನ್ನು ರಪ್ತು ಮಾಡಲು ಕ್ರಮ ಕೈಗೊಂಡು ರೈತರಿಗೆ ಆರ್ಥಿಕ ಶಕ್ತಿ ತುಂಬಬೇಕು, ಬೆಳೆ, ಆಸ್ತಿ, ಜೀವ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು, ಕಸ್ತೂರಿ ರಂಗನ್ ವರದಿ ವಾಪಸ್ ಪಡೃಯಬೇಕು, ರಾಜ್ಯಾಧ್ಯಂತ 10 ಎಚ್ ಪಿ. ಕೃಷಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಸಬ್ಸಿಡಿ ನೀಡಬೇಕು, ಮುಳುಗಡೆ ಸಂತ್ರಸ್ತರ ಪುನರ್ವಸತಿ ಕಲ್ಪಿಸಬೇಕು, ಶಿವಮೊಗ್ಗ ಜಿಲ್ಲೆಯ ಅತಿವೃಷ್ಠಿ ಬೆಳೆನಷ್ಟಗಳಿಗೆ ಪರಿಹಾರ ನೀಡಬೇಕು, ಮೀಸಲು ಅರಣ್ಯವನ್ನು ಪುನರ್ ಪರಿಶೀಲಿಸಬೇಕು ಸೇರಿದಂತೆ ಇನ್ನೂ ಮನವಿ ಪತ್ರದಲ್ಲಿರುವ ರಾಜ್ಯದ ರೈತರು ಹಕ್ಕೋತ್ತಾಯಗಳನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ನಿಂಗಪ್ಪ ಬೆಣಕಲ್, ಕಾರ್ಯಾಧ್ಯಕ್ಷ ಮಾಜಿದ್ ಖಾನ್ ಮುಲ್ಲಾ ಇದ್ದರು.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *