Constitution is more than all scriptures: Dr. Sharanbasappa Kolkara
ಗಂಗಾವತಿ: ಪ್ರತಿ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥಗಳಿವೆ. ಆಯಾ ಧರ್ಮಿಯರು ತಮ್ಮ ತಮ್ಮ ಧರ್ಮಗ್ರಂಥಗಳ ಸಂಹಿತೆಯನ್ವಯ ನಡೆಯಬೇಕೆಂಬ ಆಶಯವಿದೆ. ಧರ್ಮಗ್ರಂಥಗಳ ಮೌಲ್ಯಗಳು ಎಷ್ಟೇ ಶ್ರೇಷ್ಠ ವಾಗಿದ್ದರೂ ಅದು ಅನ್ಯಧರ್ಮಿಯರಿಗೆ ಗೌಣ ಆದರೆ ಸಂವಿಧಾನ ಮಾತ್ರ ಸಮಸ್ತ ಜನತೆಗೆ ಅನ್ವಯಿಸುವ ರಾಷ್ಟ್ರೀಯ ಧರ್ಮಗ್ರಂಥವಾಗಿ ಎಲ್ಲಾ ಧರ್ಮಗ್ರಂಥಗಳಿಗಿಂತಲೂ ಮಿಗಿಲಾಗಿದೆ ಹಾಗಾಗಿ ಎಲ್ಲರೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಪ್ರಾಚಾರ್ಯ, ಕನ್ನಡ ಪುಸ್ತಕ ಪ್ರಾದಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟರು ಅವರು ಗಂಗಾವತಿಯ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಅಜೀಂ ಪ್ರೇಮಜೀ ಫೌಂಡೇಷನ್ ನ ಸಹಯೋಗದಲ್ಲಿ ನಡೆದ ” ಭಾರತದ ಸಂವಿಧಾನದ ಮೌಲ್ಯಗಳು ” ಕುರಿತು ದಿನಾಂಕ 10 ಮತ್ತು 11 ರಂದು ನಡೆದ ಎರಡು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ಕಾರ್ಯಾಗಾರದಲ್ಲಿ ಸಂವಿಧಾನದ ಮಹತ್ವ, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ಸಂವಿಧಾನದೊಂದಿಗೆ ಅಳವಡಿಸಿಕೊಳ್ಳಬೇಕಾದ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ತತ್ವ,ಸಾಮಾಜಿಕ ಜವಾಬ್ದಾರಿ , ಯಶಸ್ವಿ ಜೀವನ ರೂಪಿಸಿಕೊಳ್ಳಲು ಬೇಕಾದ ಅಂಶಗಳು ಮುಂತಾದ ಸಂಗತಿಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಯಿತು. ಕಾರ್ಯಾಗಾರದ ಪ್ರಯೋಜನೆ ಮತ್ತು ಅನುಭವಗಳನ್ನು ವಿದ್ಯಾರ್ಥಿ ನಿಯರು ಹಂಚಿಕೊಂಡರು. ಅಜೀಂ ಫ್ರೇಮ್ ಜೀ ಫೌಂಡೇಷನ್ನಿನ ಸಂಪನ್ಮೂಲ ವ್ಯಕ್ತಿಗಳಾದ ಹಮೀದ್, ಸತೀಶ,ಭರತೇಶ, ಉಮೇಶ ಮತ್ತು ಸವಿತ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಪ್ರೊ. ಜಿ.ಬಸವರಾಜ, ಪ್ರೊ.ಚಂದ್ರಶೇಖರ ಉಪಸ್ಥಿತರಿದ್ದರು.