Karthikadeepotsavam at Anjaneya Devasthan, Vaddarahatti
ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದ ಭಕ್ತರು
ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕಮಾಸ ಅಂಗವಾಗಿ ಸೋಮವಾರ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಾರ್ತಿಕೋತ್ಸವ ಅಂಗವಾಗಿ ಶ್ರೀ ಆಂಜನೇಯ ದೇವರ ಮೂರ್ತಿಗೆ ಅಭಿಷೇಕ ಪೂಜೆ ನಡೆಸಲಾಯಿತು.
ಸಂಜೆ ವೇಳೆ ಗ್ರಾಮದ ಭಕ್ತರು ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.
ಶ್ರೀ ಮಾರುತೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಹನುಮಗೌಡ ತಳವಾರ, ಖಜಾಂತಿ ವೀರೇಶ ನಾಯಕ, ಸದಸ್ಯರಾದ ಟಿ.ಬುಡ್ಡಪ್ಪ ನಾಯಕ, ಮುದ್ದಣ್ಣ ವದ್ದಟ್ಟಿ, ಬೀರಪ್ಪ ಗಡ್ಡಿ, ಗಡ್ಡಿ ಮುದಕಪ್ಪ ನಾಯಕ, ಶಿವಪ್ಪ ನಾಯಕ, ಗಡ್ಡಿ ಯಮನಪ್ಪ, ಗೌಡ್ರು ಗೌಡಪ್ಪ, ಕಲ್ಲಪ್ಪ ಗಡ್ಡಿ, ಸಣ್ಣ ಈರನಗೌಡ, ಟಿ. ಅನಿಲ್ ನಾಯಕ, ಕತ್ತಿ ಹನುಮಂತ, ರಾಮಣ್ಣ ಹತ್ತಿಮರದ, ಟಿ. ವೆಂಕಟೇಶ ನಾಯಕ ಸೇರಿ ಗ್ರಾಮದ ಮುಖಂಡರು ಇದ್ದರು.