Breaking News

ಕಾರ್ತಿಕೋತ್ಸವಗಳು ಮನದ ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು : ಶಿವಕುಮಾರ,,,

Kartikotsavas should be festivals that wash away the impurities of the mind and illuminate the light of knowledge: Shivakumar.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಕಲ್ಯಾಣಸಿರಿ ವರದಿ ಕೊಪ್ಪಳ.
ಕುಕನೂರು :ಕಾರ್ತಿಕೋತ್ಸವಗಳು ಮನಸ್ಸಿನ ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು, ಅದರಂತೆ ನಮ್ಮ ಕುಕನೂರು ಪಟ್ಟಣದ ವೀರಭದ್ರೇಶ್ವರ ಕಾರ್ತಿಕೋತ್ಸವವು ಸರ್ವರನ್ನೋಳಗೊಂಡ ಕಾರ್ತಿಕೋತ್ಸವವಾಗಿದೆ ಎಂದು ಶಿವಕುಮಾರ ನಾಗಲಾಪೂರ ಮಠ ಹೇಳಿದರು.

ಅವರು ಕುಕನೂರು ಪಟ್ಟಣದ ಮಹಾಮಾಯ ದೇವಸ್ಥಾನದ ಬಳಿ ಇರುವ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಂದು ಸಾಯಂಕಾಲ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷದ ಕಾರ್ತಿಕ ಮಾಸದ ಕಾರ್ತಿಕೋತ್ಸವದಲ್ಲಿ ಪಾಲ್ಗೋಂಡು ಮಾತನಾಡಿದರು.

ಈ ವೀರಭದ್ರೇಶ್ವರನು ಉಗ್ರ ರೂಪಿಯಾದ ಈಶ್ವರನಾಗಿದ್ದು ಇಲ್ಲಿ ತುಂಬಾ ಮಡಿಯಿಂದ ಬೆಳಗ್ಗೆಯಿಂದಲೇ ವಿಷೇಶ ಪೂಜಾ ಕಾರ್ಯಕ್ರಮಗಳು ಜರುಗಿದವು, ನಂತರದಲ್ಲಿ ಸಾಯಂಕಾಲ ಪಾಲಕಿ ಉತ್ಸವ ಹಾಗೂ ಭಕ್ತಾಧಿಗಳಿಂದ ಕಾರ್ತಿಕೋತ್ಸವ ಜರುಗಿತು. ನಂತರದಲ್ಲಿ ಯಾವಬ್ಬ ಭಕ್ತರನ್ನು ಕರೆಯದೇ ಸ್ವತಃ ತಾವಾಗಿಯೇ ಸ್ವಯಂ ಪ್ರೇರಿತರಾಗಿ ಬಂದು ಭಕ್ತರು ಸೇವೆ ಸಲ್ಲಿಸಿ ನೆರೆದ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವಿತರಿಸುತ್ತಾರೆ.
ಈ ಕಾರ್ತಿಕೋತ್ಸವದಲ್ಲಿ ಬೇರೆ ಬೇರೆ ಗ್ರಾಮಗಳಿಂದ ಭಕ್ತರು ಆಗಮಿಸಿ ನೂರಾರು ಸಂಖ್ಯೆ ಭಕ್ತರು ಕಾರ್ತಿಕ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿದ್ದಯ್ಯ ಕಳ್ಳಿಮಠ, ಮಂಜುನಾಥ ಕೂಕನಪಳ್ಳಿ, ಸಿದ್ದಪ್ಪ ಸಬರದ, ಸಿದ್ದು ಉಳ್ಳಾಗಡ್ಡಿ, ಹರ್ಷ ಪಂಚಯ್ಯ ಹಿರೇಮಠ, ಶರಣಪ್ಪ ಚಂಡೂರ, ವೀರಯ್ಯ ಶಂಕ್ರಯ್ಯ ಹಿರೇಮಠ, ಬಸವರಾಜ ಈಬೇರಿ, ಮಲ್ಲಿಕಾರ್ಜುನ ಕೂಕನಪಳ್ಳಿ, ಶಿವಪ್ಪ ಸಬರದ, ಗವಿಸಿದ್ದಪ್ಪ ಮೇಟಿ, ಈರಣ್ಣ ಮೆಣಸಿಕಾಯಿ, ಬಸಲಿಂಗಪ್ಪ ಸುರೇಬಾನ, ಬಸವರಡ್ಡಿ ಬಿಡ್ನಾಳ, ಡಾ. ಜಂಬಣ್ಣ ಅಂಗಡಿ, ಮಹೇಶ ಯಾಳಗಿ, ಬಸವರಾಜ ಶಿವಶಿಂಪರ, ಮಂಜು ಪಟ್ಟಣಶೆಟ್ಟಿ, ಕಳಕಪ್ಪ ಹರ್ಲಾಪೂರ, ಅಶೋಕ ಹೂಗಾರ ಸೇರಿದಂತೆ ಅನೇಕ ಭಕ್ತರು, ಹಿರಿಯರು, ಮಹಿಳೆಯರು ಇದ್ದರು.

About Mallikarjun

Check Also

ಕೃಷಿ ಪಂಡಿತ ಪ್ರಶಸ್ತಿಗೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Application deadline extended for Krishi Pandita Award ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.