No suspension of State Drug Controller – Ashokaswamy Herura
ಗಂಗಾವತಿ: ಕರ್ನಾಟಕ ರಾಜ್ಯ ಔಷಧ ನಿಯಂತ್ರಕರ ಅಮಾನತ್ತು ಶಿಫ಼ಾರಸ್ಸನ್ನು ಹಿಂತೆಗೆಯುವಂತೆ ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಸಂಭವಿಸಿರುವುದಕ್ಕೆ ರಾಜ್ಯ ಔಷಧ ನಿಯಂತ್ರಕರನ್ನು ಹೊಣೆಗಾರರನ್ನಾಗಿ ಮಾಡಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.
ಸರಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಬೆಲೆಗೆ ಕೊಟೇಷನ್ ನೀಡಿದ ಸಂಸ್ಥೆಗಳಿಂದ ಔಷಧಗಳನ್ನು ಖರೀದಿಸುವುದು, ವಾಡಿಕೆ.ಅದಕ್ಕಾಗಿ ಬಳ್ಳಾರಿ ಆಸ್ಪತ್ರೆಯ ಸಂಭಂದಿಸಿದ ವೈಧ್ಯರ ಮೇಲೆ ಮತ್ತು ಆಡಳಿತಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಸರಿಯಾಗುತ್ತದೆ.ಆದರೆ ರಾಜ್ಯದ ಔಷಧ ನಿಯಂತ್ರಕರನ್ನು ಈ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಿ,ಅವರನ್ನು ಅಮಾನತ್ತು ಮಾಡಲು ಶಿಫ಼ಾರಸ್ಸು ಮಾಡಿರುವುದು ತಪ್ಪಾದ ನಿರ್ಧಾರವಾಗುತ್ತದೆ ಎಂದು ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.
ಆದ್ದರಿಂದ ಕೂಡಲೇ ರಾಜ್ಯ ಔಷಧ ನಿಯಂತ್ರಕ ಡಾ.ಉಮೇಶ್ ಎಸ್. ಅವರ ಅಮಾನತ್ತು ಶಿಫ಼ಾರಸ್ಸನ್ನು ಹಿಂತೆಗೆದು ಕೊಳ್ಳಲು ಮುಖ್ಯಮಂತ್ರಿ,ಆರೋಗ್ಯ ಖಾತೆ ಸಚಿವ,ಸರಕಾರದ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇವುರುಗಳಿಗೆ ಪತ್ರ ಬರೆದು ಹೇರೂರ ಒತ್ತಾಯಿಸಿದ್ದಾರೆ.