Karate training program for female students launched by SDMC and Headmaster.
ಕೊಪ್ಪಳ : ತಾಲೂಕಿನ ಹೃದಯ ಭಾಗದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶುಕ್ರವಾರದಂದು ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಈ ವೇಳೆ ಅಧ್ಯಕ್ಷತೆ ವಹಿಸಿ ಎಸ್ ಡಿ ಎಂ ಸಿ ಅಧ್ಯಕ್ಷ ಈಶಪ್ಪ ಕಾತರಕಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಕರಾಟೆ ಅತ್ಯವಶ್ಯಕವಾಗಿದ್ದು ಮಹಿಳೆಯರ ಆತ್ಮ ರಕ್ಷಣೆಗೆ ಸಹಕಾರಿಯಾಗುವುದಲ್ಲದೇ ಸುಸ್ಥಿರ ಸಮಾಜದಲ್ಲಿ ಆರೋಗ್ಯವಂತರಾಗಿರಲು ಸಹಾಯಕವಾಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ನಂತರ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್ ಬಿ ತಗಡಿಮನಿ ಮಾತನಾಡಿ ಸರ್ಕಾರ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಸುಮಾರು ಕಾಯ್ದೆಗಳನ್ನು ಜಾರಿಗೊಳಿಸುತ್ತದೆ ಅದರಲ್ಲಿ ಈ ಕರಾಟೆ ಕಲೆ ಕೂಡ ಒಂದು ಎಂದರು.
ಶಾಲೆಯ ಕರಾಟೆ ಶಿಕ್ಷಕ ರಾಘವೇಂದ್ರ ಅರಕೆರೆ ಅವರು ಕರಾಟೆಯ ಕುರಿತು ಸವಿಸ್ತಾರವಾಗಿ ತಿಳಿಸಿಕೊಡುತ್ತಾರೆ ಅವರ ಮಾರ್ಗದರ್ಶನದಲ್ಲಿ ಕಲಿತು ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಾಲಕರಾದ ವಿನಾಯಕ ಜೋಶಿ , ಹಿರಿಯ ಶಿಕ್ಷಕ ಉದಯಕುಮಾರ್ . ಸಹ ಶಿಕ್ಷಕಿ ಶಾರದಾ, ಸುನಿತಾ , ಗಂಗಾಧರ ಸಾಲಿಮನಿ ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.