The 33rd Sabari Male Yatra was successfully held under the leadership of Kanchalli Guruswami.
ಹನೂರು : ಪ್ರತಿವರ್ಷದಂತೆ ಈ ವರ್ಷ ನಮ್ಮ ಗ್ರಾಮದಿಂದ ಶಬರಿಮಲೆ ಸ್ವಾಮಿ ಯಾತ್ರೆಯನ್ನು ಬಹಳ ಅದ್ದೂರಿಯಾಗಿ ನಡೆಸುಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ದೆವರ ಭಕ್ತಿಗೆ ಪಾತ್ರರಾಗೋಣವೆಂದು ಗುರುಸ್ವಾಮೀಜಿಗಳಾದ ಕಾಂತರಾಜ್ ಸ್ವಾಮಿಗಳು ತಿಳಿಸಿದರು.
ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಶಬರಿ ಮಲೆ ದೇವಾಲಯಕ್ಕೆ ಹೊರಟ ಮಾಲಾದಾರಿಗಳ ಜೊತೆಯಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಮಾಲಾ ದರಿಸುವ ಸ್ವಾಮಿಗಳು ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರವೆ ಕಠಿಣ ವ್ರತ ಆಚಾರ ಮಾಡಿ ನಂತರ ಯಾತ್ರೆಕೈಗೊಂಡರೆ ನಮ್ಮೇಲ್ಲರಿಗೂ ಶುಭವಾಗಲಿದೆ ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಮಾಲಾದಾರಿಗಳಾದ ಮೂರ್ತಿಸ್ವಾಮಿ ,ನಾಗರಾಜ್ ,ಮಾದೇಶ್ ,ನಂಜುಂಡಸ್ವಾಮಿ ,ಪತ್ರಕರ್ತರಾದ ಬಸವರಾಜು,ವಿಜಯಕುಮಾರ್ ,ವೀರಸ್ವಾಮಿ ಸೇರಿದಂತೆ ಇನ್ನಿತರ 53 ಮಾಲಾದಾರಿಗಳು ಯಾತ್ರೆಗೆ ತೆರಳಿದರು .