Breaking News

ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿಯನ್ನು ಬಂಧಸಿ ಅಪಹರಿಸಿದ ಕಂದನ ರಕ್ಷಣೆ.

Rescue of a beggar who was arrested and kidnapped.

ಜಾಹೀರಾತು
IMG 20241121 WA0331


ವರದಿ :ಬಂಗಾರಪ್ಪ .ಸಿ .
ಹನೂರು :ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿ ಮಂಡ್ಯದ ಹೊಸಹಳ್ಳಿ ಕಾಲೊನಿಯ ರಾಧಾಳನ್ನು(28) ಪೊಲೀಸರು ಬಂಧಿಸಿದ್ದಾರೆ. ಈಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಅನಿತಾಳನ್ನು ತನ್ನ ಹೆಸರು, ವಿಳಾಸ ತಿಳಿಸದೆ ಪರಿಚಯ ಮಾಡಿಕೊಂಡಿದ್ದಳು.

ಅನಿತಾಳ ಮಗುವನ್ನು ಭಿಕ್ಷೆ ಬೇಡಲು ಪಡೆದುಕೊಂಡು ಹಣ ಕೊಟ್ಟು ಆಸೆ ತೋರಿಸಿದ್ದಳು. ಇಲ್ಲಿಂದ ಅನಿತಾ ಮತ್ತು ಮಗುವನ್ನು ಕೊಳ್ಳೇಗಾಲ, ಮೈಸೂರು, ನಂಜನಗೂಡಿಗೆ ಕರೆದುಕೊಂಡು ಬಂದು ಭಿಕ್ಷೆ ಬೇಡಿದ್ದಳು.ನಂತರ ನ.14ರಂದು ಚಾಮರಾಜ
ನಗರಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನಿತಾಳಿಂದ ಮಗು ಪಡೆದುಪರಾರಿಯಾ
ಗಿದ್ದಳು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಆರೋಪಿ ರಾಧಾ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದರು. ಇದನ್ನು ಆಧರಿಸಿ ತನಿಖಾ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ವೀಕ್ಷಣೆ ಮಾಡಿದಾಗ ರಾಧಾ ನಗರದ ಹಲವು ಕಡೆ ಮಗುವನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡಿ, ನಂತರ ಚಾಮರಾಜೇಶ್ವರ ದೇಗುಲದ ಮುಂಭಾಗ ಆಟೋದಲ್ಲಿ ಹೋಗಿರುವುದು ಗೊತ್ತಾಗಿತ್ತು.

ಈ ಆಟೋವನ್ನು ಪತ್ತೆ ಮಾಡಿ ವಿಚಾರ ಮಾಡಿದಾಗ ಆಟೋ ಚಾಲಕ ಆಕೆಯ ಜೊತೆಯಲ್ಲಿ ಮಗು ಇತ್ತು. ಮತ್ತು ಆಕೆಯನ್ನು ರೈಲು ನಿಲ್ದಾಣಕ್ಕೆ ಬಿಟ್ಟಿರುವ ಮಾಹಿತಿ ನೀಡಿದ್ದ.ಪೊಲೀಸರು ರಾಧಾ ಮತ್ತು ಮಗುವನ್ನು ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು, ಬಸ್ ನಿಲ್ದಾಣಗಳು, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಕೆಂಗೇರಿ ಮತ್ತು ಇಲ್ಲಿನ ರೈಲು ನಿಲ್ದಾಣಗಳಲ್ಲಿ ಹುಡುಕಿ, ಹಲವು ಮಾಹಿತಿ ಕಲೆಹಾಕಿದ್ದರು. ನ. 19 ರಂದು ಮೈಸೂರು ರೈಲ್ವೆ ಪೊಲೀಸರ ನೆರವಿನೊಂದಿಗೆ ಮಗುವನ್ನು ಅಪರಿಸಿದ್ದ ರಾಧಾಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಧಾಳನ್ನುವಿಚಾರಣೆಗೊಳಪಡಿಸಿದಾಗ ಮಗುವನ್ನು ಅಪಹರಿಸಿಕೊಂಡು ಹೋಗಿ ಕಳೆದ 4 ದಿನಗಳಿಂದ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಇಲಾಖೆಯ ಮುಂದೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.