Karnataka Ratna Dr. Puneeth Rajkumar’s 3rd year death anniversary
ಸಹೃದಯ ಶ್ರೀಮಂತ ಹಾಗೂ ನಗುವಿನ ಯವರಾಜ ದಿವಂಗತ ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ದಿನವಾದ (ಅಕ್ಟೋಬರ್ 29) ಮಂಗಳವಾರ ಸ್ಮರಣಾರ್ಥ ಪಟ್ಟಣದ ಗಾಂಧಿ ವೃತ್ತದಲ್ಲಿ ಕಾರ್ಯಕ್ರಮ ನಡೆಯಿತು
ಕೊಟ್ಟೂರು: ಕರ್ನಾಟಕದ ಜನತೆಗೆ ಕರಾಳ ದಿನವಾದ ಅಕ್ಟೋಬರ್ 29 ರಂದು ಈ ನಾಡಿನ ಜನತೆ ಆ ದಿನ ಎಂದು ಮರೆಯಲು ಸಾಧ್ಯವಿಲ್ಲ. ಅವರು ನಮ್ಮನ್ನಗಲಿ ಮೂರು ವರ್ಷ ಕಳೆಯುತ್ತಾ ಬಂತು. ಅವರ ಅಭಿಮಾನಿ ಆಗಿರುವ ನಾನು ಅವರನ್ನು ನೆನೆಯದ ದಿನವಿಲ್ಲ ಅದೆಷ್ಟೋ ಅಭಿಮಾನಿಗಳು ಅಪ್ಪು ಅನ್ನು ನೆನೆಸಿಕೊಂಡು ನೋವಿನಲ್ಲಿ ದಿನ ದೂಡುತ್ತಿದ್ದಾರೆ. ಡಾ. ಪುನೀತ್ ರಾಜ ಕುಮಾರ್ ಅವರು ಮಾಡಿರುವ ಸಮಾಜ ಸೇವೆ ದಾನ, ಧರ್ಮ ಕಾರ್ಯಗಳು ಈಗಿನ ಯುವಕರು ರೂಪಿಸಿಕೊಳ್ಳಬೇಕು ಎಂದು ಕೊಟ್ಟೂರು ತಾಲೂಕು ಅಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಂಪುರ ಪ್ರಕಾಶ್ ಹೇಳಿದರು.
ಪಟ್ಟಣದ ಗಾಂಧಿ ಸರ್ಕಲ್ ಹತ್ತಿರ ದಿ: ಡಾ. ಪುನೀತ್ ರಾಜಕುಮಾರ್ ರವರ 3ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕರಾಗಿ ಆಗಮಿಸಿ ಎಸ್ ಕೊಟ್ರೇಶಪ್ಪ, ಶಿವುಕುಮಾರ,ಬಿ ಚೆನ್ನಬಸಪ್ಪ,ಕೆ ಎಚ್ ಎಂ ಕಲಾವತಿ ಬಿ ಮುತ್ತೇಶ್ ಚಂದ್ರಕಲಾ ಅಕ್ಕಹಾದೇವಿ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ 200 ಮಕ್ಕಳಿಗೆ ಪುನೀತ್ ರಾಜಕುಮಾರ್ ಭಾವಚಿತ್ರವುಳ್ಳ ಪುಸ್ತಕ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಸಲಾಯಿತು.
ಪ್ರತಿ ವರ್ಷ ಹುಟ್ಟು ಹಬ್ಬ ಹಾಗೂ ಪುಣ್ಯ ಸ್ಮರಣೆ ಈ ಕಾರ್ಯಕ್ರಮಕ್ಕೆ ರೂವಾರಿಯಾಗಿರುವ ಕೊಟ್ಟೂರು ತಾಲೂಕು ಅಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಂಪುರ ಪ್ರಕಾಶ್ ರವರನ್ನು ಶಿಕ್ಷಕರು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಅಪ್ಪು ಅಭಿಮಾನಿಗಳ ಸಂಘದ ಉಪಾಧ್ಯಕ್ಷರಾದ ಕೆಎಂಎಂ ಗುರುಸ್ವಾಮಿ, ಬಿ ಉಚ್ಚಂಗೆಪ್ಪ, ಗಜಾಪುರ ರಾಜು, ಎಚ್ ವಿರೇಶ್, ಎಲ್ ಕೊಟ್ರೇಶ್, ಬಿ ಅಪ್ಪಣ್ಣ, ಜಿ ನಾಗರಾಜ್,ಕೊಟ್ರೇಶ್ ಪೇಟ್ರಿ ,ಜೆ ಸಂತೋಷ್,ಬಸನಾಳು ಕೊಟ್ರೇಶ್,ಹಾಗೂ ಅಪ್ಪು ಅಭಿಮಾನಿಗಳು ಶಾಲಾ ಮಕ್ಕಳು ಇತರರು ಉಪಸ್ಥಿತರಿದ್ದರು.