Breaking News

ವರ್ಗಾವಣೆಗೊಂಡ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ

A grand farewell to the transferred teachers

ಯಲಬುರ್ಗಾ : ತಾಲೂಕಿನ ಹಿರೇವಂಕಲಕುಂಟಾ ಹೊಬಳಿಯ ಬೋದೂರು ಗ್ರಾಮದ ಸಹಿಪ್ರಾ ಶಾಲೆಯ ಸಹ ಶಿಕ್ಷಕರಾದ ಗವಿಸಿದ್ದಪ್ಪ ಅವರಿಗೆ ಶಾಲಾ ಸಿಬ್ಬಂದಿ ವರ್ಗದಿಂದ, ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೋಡುಗೆ ಸಮಾರಂಭ ಮಾಡಲಾಯಿತು.

ಜಾಹೀರಾತು

ಗವಿಸಿದ್ದಪ್ಪ ಸಹ ಶಿಕ್ಷಕರು ಮಾತೃ ಶಾಲೆಯಿಂದ ಮ್ಯಾದನೇರಿ ಶಾಲೆಗೆ ವರ್ಗಾವಣೆ ಹೊಂದಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿದ್ದಪ್ಪ ಸಜ್ಜಗಾರ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ ಪೋಷಕ ಮಗುವಿನ ಸಂಬಂಧವಾಗಿರುತ್ತದೆ. ಒಬ್ಬ ಸಹೋದ್ಯೋಗಿ ವರ್ಗವಾದಾಗ ಮನಸಿಗೆ ಬಹಳ ದುಃಖವಾಗುತ್ತದೆ. ಆದರೆ, ವರ್ಗಾವಣೆ ಅನಿವಾರ್ಯ, ಬದಲಾವಣೆ ಜಗದ ನಿಯಮ. ಈ ನಮ್ಮ ಶಾಲೆಗೆ ಈ ಶಿಕ್ಷಕರ ಕೊಡುಗೆ ಸದಾ  ಅವಿಷ್ಮರಣೀಯ, ವಿದ್ಯಾರ್ಥಿಗಳ ಏಳಿಗೆಯಲ್ಲಿ ಸಿಂಹಪಾಲು, ಇಂಥ ಶಿಕ್ಷಕರ ವರ್ಗಾವಣೆ ತುಂಬಲಾರದ ನಷ್ಟ ಎಂದು ಹೇಳಿದರು.

ಶಿಕ್ಷಕರು ಶಾಲೆಗೆ ಸಲ್ಲಿಸಿದ ಸೇವೆ ಮತ್ತು ಕೊಡುಗೆಗಳ ಬಗ್ಗೆ ವಿವರಿಸುತ್ತಾ ಅವರ ನಿಸ್ವಾರ್ಥ ಸುದೀರ್ಘ ಸೇವೆಯನ್ನು ಕೊಂಡಾಡಿದರು.

ಸಹ ಶಿಕ್ಷಕರಾದ ಸತಿಶ್ ಭಟ್ ಹಾಗೂ ವಿನಾಯಕ ನಾಯ್ಕ ಮಾತನಾಡಿ, ಶಿಕ್ಷಕರ ಮಕ್ಕಳ ಬಾಂಧವ್ಯ ಕುರಿತು ಹಾಗೂ ವರ್ಗಾವಣೆಯಾದ ಶಿಕ್ಷಕರು ಮತ್ತೂ ತಮ್ಮ ನಡುವಿನ ಬಾಂಧವ್ಯದ ಕುರಿತು ಮಾತನಾಡಿದರು.

ನಂತರ ವರ್ಗಗೊಂಡ ಶಿಕ್ಷಕರಿಗೆ ಶಾಲೆಯ ವತಿಯಿಂದ, ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿಂದ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿದರು.

ಇದೆ ವೇಳೆ  ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಕೃಷ್ಣಾಪರ ಗ್ರಾಮದ ಶಿಕ್ಷಕರಾದ ಶಿವಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಮತ್ತು ನಿವೃತ್ತಿ ಹೊಂದಿರುವ ಬೋದೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಲಲಿತಾ ಪತ್ತಾರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಬೋದೂರು ಶಾಲೆಗೆ ಹೊಸದಾಗಿ ಬಂದಿರುವ ಶಿಕ್ಷಕರಾದ ಧರ್ಮಣ್ಣ ಬಿಂಗಿ ಅವರಿಗೆ ಹೂವಿನಹಾರ ಹಾಕಿ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಮ್ಸಿ ಅಧ್ಯಕ್ಷ ಬೀಮನಗೌಡ ಗೌಡ್ರು ವಹಿಸಿದ್ದರು.  ಸಮಾರಂಭದಲ್ಲಿ ಶಿಕ್ಷಕರಾದ ಧರ್ಮಣ್ಣ ಬಿಂಗಿ ನಿರೂಪಿಸಿದರೆ, ಸತಿಶ್ ಭಟ್ ಸ್ವಾಗತಿಸಿದರು ವಿನಾಯಕ ನಾಯ್ಕ್ ವಂದಿಸಿದರು. ಪ್ರಭು ಮತ್ತು ಸೋಮಣ್ಣ ಗೌಡ್ರು ಹಾಗೂ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮದ ಹಿರಿಯರಾದ ಷಡಕ್ಷರಯ್ಯ ಹಿರೇಮಠ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹನಮಂತ ಕೊಬ್ಲರ್, ಉಪಾಧ್ಯಕ್ಷ ನಿರುಪಾದೆಪ್ಪ ತಳವಾರ,  ಸದಸ್ಯರಾದ ಸೋಮನಗೌಡ ಗೌಡ್ರು, ಹನಮಂತ ತಳವಾರ, ಯಮನೂರಪ್ಪ ಹಗೆದಾಳ ಮುಖಂಡರಾದ ಹನಂತಪ್ಪ ಕೊಬ್ಲರ್, ನಾಗಪ್ಪ ಗಧಾರಿ, ಬಸವರಾಜ ದಡೆಸುಗೂರು, ಯಮನೂರಪ್ಪ ಗುಂಟಮಡು, ಬಸಪ್ಪ ಮೇಟಿ, ಹುಲಗಪ್ಪ ನೇಗಿಲರ್, ಪತ್ರಕರ್ತ ಬಸವರಾಜ ಬೋದೂರು ಸೇರಿಂದತೆ ಅನೇಕ ಗ್ರಾಮಸ್ಥರು ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿಗಳು ಇದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.