Sharan Navratri Mahotsav under the leadership of Gangavati Arya Vaishya Samaj.. President Roopa Rani L
ಗಂಗಾವತಿ.2 ಆರ್ಯ ವೈಶ್ಯ ಸಮಾಜ ಗಂಗಾವತಿ ಶ್ರೀ ವಾಸವಿ ಮಹಿಳಾ ಮಂಡಳಿ. ಹಾಗು ವಾಸವಿ ಯುವಜನ ಸಂಘ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷ ಶ್ರೀ ನಗರೇಶ್ವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪದ ಆವರಣದಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ ಎಂದು ಸಮಾಜದ ಅಧ್ಯಕ್ಷ ರೂಪ ರಾಣಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷ ಸಿ ಭಾಗ್ಯ. ಸೇರಿದಂತೆ ಈಶ್ವರ ಶೆಟ್ಟಿ ಹೇಳಿದರು.
ಅವರು ಆರ್ಯವೈಶ್ಯ ಸಮಾಜದ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅಕ್ಟೋಬರ್ 2 ಅತ್ಯಂತ ಮಹತ್ವವಾದ ದಿನ ಮಹಾತ್ಮ ಗಾಂಧೀಜಿಯವರ 155ನೇ ಜ ಯಂತೋತ್ಸವ ಪ್ರಯುಕ್ತ ಸಮಾಜ ಬಾಂಧವರೆಲ್ಲರೂ ಸೇರಿ ಮಹಾತ್ಮ ಗಾಂಧಿ ವೃತ್ತಕ್ಕೆ ತೆರಳಿ ಮಾಲಾರ್ಪಣೆ ನಡೆಸಿ ಸಂಭ್ರಮಿಸಲಾಯಿತು ಈ ಕುರಿತಂತೆ ಈಶ್ವರ ಶೆಟ್ಟಿ ಮಾತನಾಡಿ ಅಹಿಂಸ ತತ್ವದ ಮೂಲಕ ದೇಶಕ್ಕೆ ಶಾಂತಿ ಮಂತ್ರದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಮ್ಮವರು ಎಂಬ ಹೆಗ್ಗಳಿಕೆ ಇದೆ. ಈ ಹಿನ್ನೆಲೆಯಲ್ಲಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸೌಹಾರ್ದತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಬಳಿಕ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪರಾಣಿ ಮಾತನಾಡಿ ನವರಾತ್ರಿ ಮಹೋತ್ಸವದ ಅಂಗವಾಗಿ ಸತತ ಒಂಬತ್ತು ದಿನಗಳ ಕಾಲ ದಿನಾಂಕ 3 ರಿಂದ 11 ರವರೆಗೆ 9 ಬಗೆಯ ದೇವಿಯ ರೂಪ ಅಷ್ಟೋತ್ತರಗಳು ಅರ್ಚನೆಗಳು ಸೇರಿದಂತೆ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ದಿಗಂಬರ್ ಭಟ್ ನೇತ್ರತ್ವದಲ್ಲಿ ಅಭಿಷೇಕ ಲಲಿತ ಸಹಸ್ರನಾಮ ಪಾರಾಯಣ ಕುಂಕುಮ ಅರ್ಚನೆ ಇತರೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ದೇವಿಯ ರೂಪವಾದ ಶೈಲ ಪುತ್ರಿ ಬ್ರಹ್ಮಚಾರಿ ಚಂದ್ರಘಂಟ ಸೇರಿದಂತೆ ವಿವಿಧ ರೂಪಗಳನ್ನು ನಡೆಸಲಾಗುತ್ತದೆ ದಿನಂಪ್ರತಿ ಅಷ್ಟೋತ್ತರ ಪ್ರಯುಕ್ತ ಶ್ರೀ ಅನ್ನಪೂರ್ಣ ಶ್ರೀ ಲಕ್ಷ್ಮಿ ಶ್ರೀ ಗಾಯಿತ್ರಿ ಲಲಿತ ಬಾಲ ತ್ರಿಪುರ ಸುಂದರಿ ಶ್ರೀರಾಜರಾಜೇಶ್ವರಿ ಶ್ರೀ ಸರಸ್ವತಿ ಶ್ರೀ ದುರ್ಗಾದೇವಿ ಶ್ರೀ ಮಹಿಷಾಸುರ ಮರ್ದಿನಿ ಪಾರಾಯಣ ನಡೆಸಲಾಗುತ್ತದೆ ಉಳಿದಂತೆ ಸಂಜೆ ಕಲ್ಯಾಣ ಮಂಟಪದ ಆವರಣದಲ್ಲಿ ಸಮಾಜ ಬಾಂಧವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು ಈ ಒಂದು ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಸಮಾಜದ ಕುಲಬಾಂಧವರು ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಲಕ್ಷ್ಮಣ್ ರೈಚೂರ್ ಶ್ರೀನಿವಾಸ್ .ಪ್ರಸಾದ್ ಪಾನಗಂಟಿ ಸಮಾಜದ ಬಾಂಧವರು ಉಪಸ್ಥಿತರಿದ್ದರು