Mariappa Weds Mallamma The new couple embarked on a love vacation.
ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಮದುವೆ ಎನ್ನುವದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವದಕ್ಕೆ ಯಲಬುರ್ಗಾ ತಾಲೂಕಿನ ಈ ಇಬ್ಬರು ಪ್ರೇಮಿಗಳೇ ಸಾಕ್ಷಿ,,
ಹೌದು,, ಮದುವೆ ಎನ್ನುವದು ಏಳು ಜನ್ಮದ ಸಂಬಂಧವಾಗಿದ್ದು, ನಮ್ಮ ಸಂಗಾತಿ ನಮ್ಮ ಪಕ್ಕದಲ್ಲಿಯೇ ಇದ್ದರು ಸಂಗಾತಿಗಾಗಿ ದಿಲ್ಲಿಯವರೆಗೆ ಅಲಿಯುವ ಪಡಿಪಾಟಲು ತಪ್ಪಿದ್ದಲ್ಲಾ,,,
ನಾವು ಸಾವಿರ ವಧು, ವರರನ್ನು ನೋಡಿದರು ಕೊನೆಗೆ ನಮ್ಮ ಸಂಗಾತಿಯಾಗುವವರು ಋಣ ಇರುವವರು ಮಾತ್ರ.
ನಾವೆಷ್ಟೇ ಪ್ರಯತ್ನಿಸಿದರು ನಮ್ಮ ಸಂಗಾತಿ ಇವರೇ ಎಂದಿರುವಾಗ ಅದಕ್ಕೆ ಜಾತಿ, ಮತ, ಅಂದ, ಚೆಂದ, ಬಡವ, ಶ್ರೀಮಂತ ಎನ್ನುವ ಭೇದ ಭಾವವೇ ಇಲ್ಲಾ,,
ಅದಕ್ಕೆ ನಿದರ್ಶನ ಎಂಬಂತೆ ಇಲ್ಲಿ ಅಂದರೇ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಈ ಇಬ್ಬರು ಪ್ರೇಮಿಗಳು ಸ್ಥಳೀಯರ ಸಹಕಾರದಿಂದ ಒಂದಾಗಿ ನೂತನ ದಾಂಪತ್ಯಕ್ಕೆ ಕಾಲಿಟ್ಟಿರುವುದು ಮಾದರಿ.
ಯಲಬುರ್ಗಾ ತಾಲೂಕಿನ ಕಲ್ಲಭಾವಿಯ ಮರಿಯಪ್ಪ ಹಾಗೂ ಯಲಬುರ್ಗಾದ ಮಲ್ಲಮ್ಮ ಎನ್ನುವ ಈ ಇಬ್ಬರು ಪ್ರೇಮಿಗಳ ಮದ್ಯೆ ಏಳೇಂಟು ತಿಂಗಳ ಹಿಂದೆ ಪ್ರೇಮಾಂಕುರವಾಗಿತ್ತು.
ಇವರ ಪ್ರೇಮಾಂಕುರಕ್ಕೆ ಮನೆಯವರು ಎಲ್ಲಿ ಒಪ್ಪಿಗೆ ನೀಡುವದಿಲ್ಲವೋ ಎಂಬ ಭಯದಿಂದ ದಿನ ದೂಡುತ್ತಿದ್ದರು.
ಇವರ ಪ್ರೇಮದ ವಿಷಯ ಅವರಿವರ ಮೂಲಕ ಬಹಿರಂಗವಾದ ನಂತರ ಎರಡು ಕುಟುಂಬಗಳೊಂದಿಗೆ ಯಲಬುರ್ಗಾ ನಿವಾಸಿಗಳು ಚರ್ಚಿಸಿ ಮನವೊಲಿಸಿ ಕೊನೆಗೆ ಮದುವೆಯನ್ನು ಸಹ ಮಾಡಿದ್ದು ಇತರರಿಗೆ ಮಾದರಿಯಾಗಿದೆ.
ಯಲಬುರ್ಗಾ ನಿವಾಸಿಗಳು ಹಾಗೂ ಸ್ನೇಹೀತರು, ಸ್ನೇಹಿತೆಯರು ಹಾಗೂ ಮಹಿಳಾ ಆಯೋಗದವರು ಈ ಎರಡು ಬಡ ಕುಟುಂಬಗಳಿಗೆ ಹೊರೆಯಾಗದಂತೆ ತಾವೇ ಸ್ವತಃ ಆರ್ಥಿಕ ನೆರವು ಒದಗಿಸಿ ಯಲಬುರ್ಗಾ ವಿಜಯದುರ್ಗಾ ದೇವಸ್ಥಾನದಲ್ಲಿ ಶುಕ್ರವಾರದಂದು ಸರಳ ವಿವಾಹವನ್ನು ಮಾಡಿದರು.
ಇಂತಹ ಪ್ರೇಮಿಗಳನ್ನು ಒಂದಾಗಿಸಿ ಅವರ ವಿವಾಹವನ್ನು ಸರಳವಾಗಿ ಮಾಡಿ ಮಾನವಿಯತೇಯನ್ನು ಮೆರೆದದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಇದರಿಂದ ಬಡ ಕುಟುಂಬಗಳಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎನ್ನುವುದು ಪ್ರೇರಣೆಯಾಗಬೇಕಿದೆ.
ಈ ಒಂದು ವಿವಾಹಕ್ಕೆ ಯಲಬುರ್ಗಾ ನಿವಾಸಿಗಳು ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ವೀರಣ್ಣ ಹುಬ್ಬಳ್ಳಿ, ಸುರೇಶಗೌಡ್ರ ಶಿವನಗೌಡ್ರ, ವೀರನಗೌಡ್ರ ಬನ್ನಪ್ಪಗೌಡ್ರ, ದಾನನಗೌಡ ತೊಂಡಿಹಾಳ, ಕುಮಾರ ಗಣಾಚಾರ, ಬಸವರಾಜ ಹಡಪದ, ಸಿದ್ದಪ್ಪ ದಂಡಿನ, ಕಳಕಪ್ಪ ಬಚಲಾಪೂರ ಹಾಗೂ ಮಹಿಳಾ ಆಯೋಗದ ಮಂಜುಳಾ ಕೊಪ್ಪಳ ಸೇರಿದಂತೆ ವಿವಿಧ ಮುಖಂಡರು ಹಿರಿಯರು ಇದ್ದರು.