Unity is necessary for a strong society: Nagesh Kumar
ಗಂಗಾವತಿ: ನಮ್ಮಲ್ಲಿರುವ ವೈಮನಸ್ಸು ಬಿಟ್ಟಾಗ ಮಾತ್ರ ಸಮಾಜ ಬೆಳೆಯುತ್ತದೆ. ಸಮಾಜ ಸದೃಢವಾಗಿ ಬೆಳೆಯಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮದ ಉಳ್ಳಿಡಗ್ಗಿಯಲ್ಲಿರುವ ಶ್ರೀ ಬನ್ನಿಮಹಾಂಕಾಳಮ್ಮ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವ ಹಾಗೂ ಸಮಿತಿಯ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ವರ್ಷ ತಾಲೂಕ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾತ್ರ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈಗ ಗ್ರಾಮೀಣ ಭಾಗದಲ್ಲಿಯೂ ಸಮಾಜದ ಜನತೆ ಜಾಗೃತರಾಗಿದ್ದಾರೆ. ಗ್ರಾಮೀಣ ಭಾಗಗಳಲ್ಲಿಯೂ ವಿಶ್ವಕರ್ಮ ಜಯಂತೋತ್ಸವ ನಡೆಸುತ್ತಿರುವುದು ಸಂತಸ ತಂದಿದೆ. ಸಮಾಜದ ಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕೆಂದರು.
ಸಮಾಜದ ಹಿರಿಯರಾದ ಈಶ್ವರಪ್ಪ ಅವರು ವಿಶ್ವಕರ್ಮ ಜಯಂತೋತ್ಸವದ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಹನುಮೇಶ ಬಡಿಗೇರ, ಮಂಜುನಾಥ ಪತ್ತಾರ , ಕಾಳೇಶ ಬಡಿಗೇರ, ಚಿದಂಬರ ದಿಕ್ಷಿತ್, ಸುನೀಲ್‌ಕುಮಾರ, ಜೆ. ಮಂಜನಾಥ ಸರಾಫ್,ಜಿ.ಬಿ. ಕುಮಾರಸ್ವಾಮಿ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಚೊಳಚಗುಡ್ಡ, ಉಪಾಧ್ಯಕ್ಷರಾದ ಬಿ.ಆರ್. ಬಡಿಗೇರ್, ಕಾರ್ಯದರ್ಶಿ ಮಹೇಶ ಪತ್ತಾರ, ರುದ್ರೇಶ ಬಡಿಗೇರ, ಮೌನೇಶ, ಗಂಗಪ್ಪ, ನಾಗರಾಜ ಬಡಿಗೇರ, ಈಶ್ವರಪ್ಪ ಬಡಿಗೇರ ಸೇರಿದಂತೆ ವಡ್ಡರಹಟ್ಟಿ, ಆರ‍್ಹಾಳ ಗ್ರಾಮದ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.