Breaking News

ವಾರಾಂತ್ಯದ ರಜಾ ದಿನಗಳಲ್ಲೂ ನೋಂದಣಿ ಕಚೇರಿ ಕೆಲಸ

Registration office work on weekends and holidays as well

ಜಾಹೀರಾತು

Screenshot 2024 09 24 09 56 43 78 680d03679600f7af0b4c700c6b270fe7

ಬೆಂಗಳೂರು: ಸುಗಮ ಆಡಳಿತ ನೀಡುವ ಭಾಗವಾಗಿ ಅಕ್ಟೋಬರ್ 21 ರ ನಂತರ ನೋಂದಣಿ ಕಚೇರಿಗಳು ಶನಿವಾರ-ರವಿವಾರ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ದುಡಿಯುವ ಮಧ್ಯಮ ವರ್ಗದ ಜನ ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ ದುಡಿಯುವ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.

ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಅವಧಿಗೆ ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆಸ್ಟೈನ್ ಮೂಲಕ

ನೀಡಲಾಗುತ್ತದೆ ಎಂದು ತಿಳಿಸಿದರು. ಡಿಜಿಟಲ್ ಇಂಟಗ್ರೇಷನ್ ಖಾತಾ:

ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ

ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗೆಯೂ ಮಾಹಿತಿ ನೀಡಿದ ಅವರು, “ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕ್ಯಾಟಗರಿ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಮಾತ್ರ ಈ ಕ್ಯಾಟಗರಿಯನ್ನು ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ (ಗೈಡನ್ಸ್ ವ್ಯಾಲ್ಯೂ) ಕಡಿಮೆ ಇರತ್ತೆ, ನೋಂದಣಿ ಶುಲ್ಕವೂ ಕಡಿಮೆ ಇರುತ್ತದೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚವನ್ನು ಮೋಸ ಮಾಡುತ್ತಿದ್ದಾರೆ.

ಈ ಹಿಂದೆ ನೋಂದಣಿ ಮುಖ್ಯಸ್ಥರಾಗಿದ್ದ ತ್ರಿಲೋಕ್ ಚಂದ್ರ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಅಧ್ಯಯನದ ವೇಳೆ ಬೆಂಗಳೂರಿನ ನೋಂದಣಿ ಕಚೇರಿಯನ್ನು ಆಯ್ಕೆ ಮಾಡಿಕೊಂಡು ಈ ಕಚೇರಿಗಳಲ್ಲಿ ನಕಲಿ ಖಾತೆ, ಮೂಲಕ ಎಷ್ಟು ನೋಂದಣಿಯಾಗುತ್ತಿವೆ ಹಾಗೂ ತೆರಿಗೆ ವಂಚನೆ ಪ್ರರಕಣಗಳನ್ನೂ ಗುರುತಿಸಿದ್ದಾರೆ. ಅವರ ಪ್ರಕಾರ 1-7-2018 ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ ರೂ. 250 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ ಎಂದರು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಇನ್ನೂ ನೋಂದಣಿ ಮಾಡುವಾಗ ಸ್ಕೆಚ್ ಕಡ್ಡಾಯ ಬೇಕು. ಆದರೆ ಕೆಲವೆಡೆ ಸ್ಕೆಚ್ ಇಲ್ಲದೆಯೂ ನೋಂದಣಿ ಮಾಡಲಾಗಿದೆ. ಜನವರಿಯಿಂದ ಈಚೆಗೆ 200 ನೋಂದಣಿ ಸ್ಕೆಚ್ ಇಲ್ಲದೆ ಮಾಡಲಾಗಿದೆ. ಸೈಟು ಅಥವಾ ಜಮೀನನನ್ನು ಟಿಡಿಆ‌ರ್ ಅಂತೇಳಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ಅಕ್ರಮದ ಜೊತೆಗೆ ತೆರಿಗೆ ಹಣವೂ ವಂಚಿಸಲಾಗುತ್ತಿದೆ. ಇದನ್ನು ಹೇಗೆ ತಡೆಗಟ್ಟುವುದು ಎಂದು ಕಳೆದ ಎಂಟು ತಿಂಗಳಿನಿಂದ ಯೋಚಿಸಿ ಬೋಗಸ್ ಖಾತಾ ಮೂಲಕ ಆಗುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಲು. ಅಮಾಯಕರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು ಎಂದರು. ರಿಜಿಸ್ಟ್ರೇಷನ್ ಸಮಯದಲ್ಲಿ ನಮ್ಮ ಹಾಗೂ ಅವರ ಸಿಸ್ಟಂ ಲಿಂಕ್ ಮಾಡಿ, ಖಾತೆ ನಂಬರ್ ಹೆಸರು ಹಾಗೂ ವಿಳಾಸ ಹೊಂದಾಣಿಕೆ ಆದ್ರೆ ಆಟೋಮ್ಯಾಟಿಕ್ ಖಾತೆ ಮಾಡಿಕೊಡಲಾಗುವುದು ಯಾವುದೇ ಖಾತೆ ಇರಲಿ ಪೇಪರ್ ಖಾತೆ ಆಧಾರದಲ್ಲಿ ನೋಂದಣಿಯಾಗುವಾಗ ವೆರಿಫಿಕೇಷನ್ ತಿಂಗಳೇ ಬೇಕು. ಅಲ್ಲಿಯವರೆಗೆ ನೋಂದಣಿಯನ್ನು ಬಾಕಿ ಇಡಲಾಗಲ್ಲ. ಪೇಪರ್ ಅನ್ನು ಯಾರು ಬೇಕಾದರೂ ಮುದ್ರಿಸಬಹುದು. ಅದಕ್ಕೆ ಒಂದು ತೀರ್ಮಾನ ಮಾಡಿದ್ದೇವೆ. ಗ್ರಾಮ ಬಿಡಿಎ ಯಾರೇ ಇರಬಹುದು, ಎಲ್ಲಾ ಖಾತೆಯನ್ನೂ ಡಿಜಿಟಲ್ ಮಾಡಬೇಕು. ಖಾತೆ ಡಿಜಿಟಲ್ ಆಗಿರಬೇಕುಎಂದರು.

.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.