Blood donation camp to commemorate the birthday of MMJ Chittaranjan
ಕೊಟ್ಟೂರು : ಶ್ರೀಯುತ ದಿ. ಎಂ.ಎಂ.ಜೆ. ಚಿತ್ತರಂಜನ್ ಅವರ 65 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಚಿರಂಜೀವಿ ರಕ್ತ ಬಂಡಾರ ಮತ್ತು ರಕ್ತ ವಿತರಣಾ ಘಟಕ ಇವರ ಸಹಯೋಗದಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ರಕ್ತ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ರಕ್ತದಾನ ಶಿಬಿರಕ್ಕೆ ದೀಪದ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಲಾಯಿತು.
ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ್ ಮಾತನಾಡಿ ವೃತ್ತಿಯಲ್ಲಿ ವರ್ತಕ ತನ್ನ ಸೃಷ್ಟಿಶೀಲತೆಯ ಫಲವಾಗಿ ದಲಾಲಿ ವರ್ತಕರ ಸಂಘದ ದಿ.ಎಂ.ಎಂ.ಜೆ ಚಿತ್ತರಂಜನ್ ಅಧ್ಯಕ್ಷರಾದವರು.ಆ ಮುಖೇನ ರೈತ ಮತ್ತು ವರ್ತಕರ ಮಧ್ಯೆ ಸಾಮರಸ್ಯ ಮೂಡಿಸಿದವರು. ಪ್ರವೃತ್ತಿಗಳಲ್ಲಿ ಜನಾನುರಾಗತ್ವವೂ ಒಂದು.ಅದರ ಪರಿಣಾಮವೇ ಪಟ್ಟಣದ ಅಧ್ಯಕ್ಷ ಸ್ಥಾನವೂ ಒಲಿದು ಬಂತು. ಪಟ್ಟಣದ ಮೂಲಭೂತ ಸೌಲಭ್ಯಗಳ ಶ್ರಮಗೈದವರು.ಎಂದು ಹೇಳಿದರು
ಈ ಸಂದರ್ಭದಲ್ಲಿ ಎಂ ಎಂ ಜೆ ಸತ್ಯಪ್ರಕಾಶ್ ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿದ್ದಯ್ಯ,ಅಶೋಕ್ ಭೀಮಾ ನಾಯ್ಕ್,ಎ ಮಂಜುನಾಥ್,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್,
ಡಿ ಎಸ್ ಎಸ್ ಮುಖಂಡ ಬದ್ದಿ ಮರಿಸ್ವಾಮಿ,ಕೊಗಳಿ ಕೊಟ್ರೇಶ್, ಎಂ ಎಂ ಜೆ ಮಂಜುನಾಥ್,ಪ್ರಮುಖ ಮುಖಂಡರು ಉಪಸ್ಥಿತರಿದ್ದರು.