Koppal District Workshop for Economics Lecturers
ಗಂಗಾವತಿ: ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಲ್ಲಿ ಆಗಸ್ಟ್-೨೮ ರಂದು ಅರ್ಥಶಾಸ್ತç
ವಿಷಯದ ಫಲಿತಾಂಶ ಸುಧಾರಣೆಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ
ಶ್ರೀ ಜಗದೀಶ್ ಎಚ್.,ರವರು ಉದ್ಘಾಟಿಸಿ ಮಾತನಾಡುತ್ತಾ ಅರ್ಥಶಾಸ್ತç ಮಾನವನ ದೈನಂದಿನ ಬದುಕಿನ
ಆರ್ಥಿಕ ವ್ಯವಹಾರಗಳನ್ನು ಅಧ್ಯಯನ ಮಾಡುವ ಜೊತೆಗೆ ಮಾನವೀಯ ವರ್ತನೆಯನ್ನು ಅಧ್ಯಯನ
ಮಾಡುತ್ತದೆ. ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ನಾವು ಹೇಗೆ ಸದ್ಬಳಕೆ ಮಾಡಿಕೊಂಡು ಬದುಕನ್ನು
ರೂಪಿಸಿಕೊಳ್ಳಬೇಕು ಎಂದು ತಿಳಿಸುತ್ತಾ, ಸಂಪನ್ಮೂಲ ವಿರಳ ಇರುವ ಕಾರಣ ಎಲ್ಲ ಬೇಕುಗಳನ್ನು ಮತ್ತು
ಅವಶ್ಯಕತೆಗಳನ್ನು ನೆರವೇರಿಸಲು ಸಾಕಾಗುವುದಿಲ್ಲ. ಇಂಥ ವಿಷಯಗಳನ್ನು ವಿದ್ಯಾರ್ಥಿಗಳ ಮನದಲ್ಲಿ
ಮೂಡಿಸಿ ಅರ್ಥಶಾಸ್ತç ವಿಷಯದ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹುಟ್ಟಿಸಿ ಉತ್ತಮ ಅಂಕ
ಗಳಿಸಿಕೊಳ್ಳಲು ಉಪನ್ಯಾಸಕರು ಮುಂದಾಗಬೇಕು. ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ಭದ್ರಗೊಳಿಸುವುದು
ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸದರಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜಗದೀಶ್ ಬೆಂಗಳೂರು ಇವರು
ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಶ್ರೀ ಅನಿಲ್‌ಕುಮಾರ್,
ಹಿರಿಯ ಉಪನ್ಯಾಸಕರಾದ ಸೋಮಶೇಖರ್‌ಗೌಡ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಶಾಂತಪ್ಪ ಟಿ ಸಿ, ರಮೇಶ್ ಹೇಮರೆಡ್ಡಿ, ರಾಜಶೇಖರ್ ಪಾಟೀಲ್ ಉಪಸ್ಥಿತರಿದ್ದರು,
ಶ್ರೀ ರಮೇಶ್ ಹೇಮರೆಡ್ಡಿ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಶ್ರೀ ಶಿವಪ್ಪ ಬೇಲೆರಿ ಸ್ವಾಗತಿಸಿದರೆ, ಶ್ರೀ
ರಮೇಶ್ ಗಬ್ಬೂರ್ ಪ್ರಾರ್ಥಿಸಿದರು, ಅಂಬರೀಶ್ ದೇವರಾಳ ವಂದಿಸಿದರು.
ಮಾಹಿತಿಗಾಗಿ:
(ಶ್ರೀ ಸೋಮಶೇಖರಗೌಡ)
ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿಗಳು,
ಸರಕಾರಿ ಬಾಲಕರ ಜೂನಿಯರ್ ಪದವಿಪೂರ್ವ ಕಾಲೇಜು, ಗಂಗಾವತಿ.