Breaking News

ಹೈಟೆಕ್ ಜೋಳದ ಬೀಜಕ್ಕೆ ಹೆಚ್ಚಿದ ಬೇಡಿಕೆ

Increased demand for high-tech corn seed

ಜಾಹೀರಾತು

ಮಾನ್ವಿ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಹಿಂಗಾರು ಬಿತ್ತನೆಗಾಗಿ ಜೋಳದ ಬೀಜ ಸಂಗ್ರಹಿಸಿಕೊಳ್ಳಬೇಕಾಗಿದೆ. ಬೀಜ ಸಿಗದೆ ರೈತರು ಇಂದು ನಗರ ಶ್ರೀತಿರುಮಲ ಟ್ರೇಡರ್ಸ್ ಅಂಗಡಿಯ ಮುಂದೆ ಜಮಾಯಿಸಿ ರೈತರು ಪರದಾಡುತ್ತಿದ್ದುದ್ದು ಕಂಡುಬಂತು.
ನಗರದ ತಿರುಮಲ ಟ್ರೇಡಿಂಗ್ ಕಂಪನಿ ಅಂಗಡಿಯವರು ಎಲ್ಲಾ ಅಂಗಡಿಗಳಿಗೆ ಬೀಜ ವಿತರಕರಾಗಿದ್ದು ಸರಿಯಾಗಿ‌ ವಿತರಿಸದೆ, ಸಂಗ್ರಹ ಮಾಡಿಕೊಂಡು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆಂದು ರೈತರು ಅಂಗಡಿ ಮುಂದೆ ಬೆಳಿಗ್ಗೆ ಯಿಂದ ಕಾದು ಕುಳಿತು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರದಲ್ಲಿ ಅಂಗಡಿ ಮಾಲೀಕರು ಒಬ್ಬ ರೈತನಿಗೆ 5 ಪ್ಯಾಕೆಟ್ ಬೀಜ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು ನಂತರದಲ್ಲಿ ರೈತರು ಸಾಲಾಗಿ ನಿಂತು ಜೋಳದ ಪ್ಯಾಕೆಟ್ ತೆಗೆದುಕೊಂಡರು.

______ _______________
ಹೈಟೆಕ್ ಬೀಜಕ್ಕೆ ಯಾಕೆ ರೈತರು ಮೊರೆ ..?
ಹೈಟೆಕ್ -3601 ಜೋಳದ ತಳಿ ಉತ್ತಮವಾಗಿದ್ದು ಬಿತ್ತನೆಯ ತರುವಾಯ ಮಳೆ ಬಂದರೂ ನೆಲಕ್ಕೆ ಬೀಳುವುದಿಲ್ಲ ಮತ್ತು ಕೃಷಿಯಲ್ಲಿ ಅಳವಡಿಸಿ ಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಿದೆ.ಬಿತ್ತನೆಯ ಎರಡು ಮೂರು ದಿನಗಳಲ್ಲಿ ಮಳೆ ಬಂದರೆ‌ ಮೊಳಕೆ ಕೊಳೆತು ಹೋಗುದಿಲ್ಲ, ರೈತರಿಗೆ ಮಾರಾಟಕ್ಕೆ ಲಾಭದಾಯಕವಾಗಿದೆ. ಬೇರೆ ತಳಿಯ ಬೀಜಗಳು‌ ಕಡಿಮೆ ಇಳುವರಿ ಹಾಗೂ ಬಿತ್ತನೆಯ ಎರಡು ಮೂರು ದಿನಗಳಲ್ಲಿ ಮಳೆ ಬಂದರೆ‌ ಮೊಳಕೆಯೊಡೆಯುವ ಮುನ್ನವೇ ಮಳೆಯಿಂದಾಗಿ ಕೊಳೆತು ಹೋಗುತ್ತವೆ, ಮತ್ತು ಇಳುವರಿ ಕಡಿಮೆ ಬರುತ್ತವೆ ಎಂಬ ನಂಬಿಕೆಯಿಂದ ರೈತರು ಹೈಟೆಕ್ ಬೀಜ ಅದನ್ನು ಆಸರಿಸಿದ್ದಾರೆನ್ನುತ್ತಾರೆ ರೈತರಾದ. ನಾಗರಾಜ್, ವಿರೇಶ ನಾಯಕ, ಹುಸೇನಪ್ಪ, ನಾರಾಯಣ, ಹನುಮಂತ,

________________________________________
ಕಳೆದ ವರ್ಷಕ್ಕಿಂತ ಈ ವರ್ಷ ನಮ್ಮ ತಾಲೂಕಿಗೆ ಕಡಿಮೆ ಬೀಜ ಸರಬರಾಜು ಆಗಿದೆ ಮತ್ತು ಕೇವಲ ಹೈಟೆಕ್ ಬೀಜಕ್ಕೆ ಅಂಟಿಕೊಳ್ಳದೇ ರೈತರು ಬೇರೆ ತಳಿಗಳನ್ನು ಬಿತ್ತಿರಿ ಎಂದು ರೈತರಿಗೆ ‌ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಭೂಸನೂರ್ ಮನವಿ ಮಾಡಿದರು ಮತ್ತು
ಹೈಟೆಕ್ ಬೀಜ ಮಾರಾಟದ ಬೆಲೆ 1300 ರೂ ಇದ್ದು ಅದಕ್ಕಿಂತ ಹೆಚ್ಚಿನ ಬೆಲೆಗೆ ಯಾರಾದರೂ ಮಾರಾಟ ಮಾಡಿದಲ್ಲಿ ದೂರು ನೀಡಿ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೆನೆಂದು ಪತ್ರಿಕೆ ಪ್ರಕಟಣೆ ಮೂಲಕ ರೈತರಲ್ಲಿ ಕೃಷಿ ಅಧಿಕಾರಿ ಮಾಡಿದರು.

_____ __________________________________
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಹೈಟೆಕ್ 01 ನಂಬರ್ ಬೀಜ ಖಾಲಿಯಾದರೆ ತೊಂದರೆಯಾಗುತ್ತದೆ. ಅದಕ್ಕಾಗಿ ಈಗಲೇ ಬೀಜ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ. ಬಿತ್ತನೆ ಅಗತ್ಯವಿರುವ ಮಳೆಯಾದ ನಂತರ ಬಿತ್ತನೆ ಕಾರ್ಯ ಮಾಡಲಾಗುವುದು. ಈಗ ಸ್ವಲ್ಪ ಬೀಜದ ದರ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಹುನ್ನಾರ ಇದೆ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ರೈತರಿಗೆ ಹೊರೆಯಾಗಲಿದೆ.
ಚನ್ನಬಸವ ರೈತ

About Mallikarjun

Check Also

ಗಂಗಾವತಿ:ನಗರದಲ್ಲಿರುವ ರಸ್ತೆಯಲ್ಲಿ  ಹಸುಗಳಿಂದ ಸಾರ್ವಜನಿಕರಿಗೆ ತೊಂದರೆ  ಗೋಶಾಲೆಗೆ ಕಳಿಸಿ ಎಂದುಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

Gangavathi: Appeal to the civic commissioner demanding that cows be sent to a cowshed to …

Leave a Reply

Your email address will not be published. Required fields are marked *