Breaking News

ಕ್ರಸ್ಟ್ಗೇಟ್ ನಾಶ ಟಿ.ಬಿ.ಬೋರ್ಡ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Protest demanding action against TB Board officials for destruction of Crustgate

ಜಾಹೀರಾತು

ಗಂಗಾವತಿ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ನಾಶವಾಗಲು ಟಿ.ಬಿ.ಬೋರ್ಡ್ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣವಾಗಿದ್ದು ಸರಕಾರ ಕೂಡಲೇ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕನ್ನಡಸೇನೆ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಡ್ಯಾಂ ನಿರ್ವಾಹಣೆ ಮಾಡಲು ಸಮಯವಿರುವಾಗ ನಿರ್ಲಕ್ಷö್ಯ ಮಾಡಿದ್ದರಿಂದ ಕ್ರಸ್ಟ್ ಗೇಟ್ ನಾಶವಾಗಿ ೬೦ ಟಿಎಂಸಿಗೂ ಅಧಿಕ ನೀರು ನದಿಯಲ್ಲಿ ಪೋಲಾಗಿದೆ. ಈಗ ಜಲಾಶಯಕ್ಕೆ ಗೇಟ್ ಅಳವಡಿಸಲು ಸುಮಾರು ೫೫ ರಿಂದ ೬೦ ಟಿ.ಎಂ.ಸಿ ನೀರನ್ನು ಖಾಲಿ ಮಾಡಿದಾಗ ಮಾತ್ರ ಸಾಧ್ಯ ಎಂದು ಹೇಳಲಾಗುತ್ತಿದೆ. ಜಲಾಶಯಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರರವರು, ಗೇಟ್ ಕಟ್ ಆಗಿರುವುದಕ್ಕೆ ಯಾರೂ ಹೊಣೆಗಾರರಲ್ಲ, ಯಾರನ್ನೂ ದೂಷಿಸಲಾಗದು ಎಂದು ನಿರ್ಲಕ್ಷö್ಯತನದ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ಜಲಾಶಯಕ್ಕೆ ತಜ್ಞರ ಸಲಹೆಯಂತೆ ಕನಿಷ್ಟ ೫೦ ವರ್ಷಗಳಿಗೊಮ್ಮೆ ಗೇಟ್ ಬದಲಾಯಿಸಬೇಕಿತ್ತು, ಆದರೆ ಬದಲಾಯಿಸದಿದ್ದರಿಂದ ಈ ಅವಘಡ ಸಂಭವಿಸಿದೆ. ಆದರೆ ನೀರು ಪೋಲಾಗದಂತೆ ತಾತ್ಕಾಲಿಕ ಗೇಟ್ ಅಳವಡಿಸಲು ಸೂಚಿಸಲಾಗಿದೆ ಎಂದು ಹೇಳಿರುತ್ತಾರೆ. ಈಗಾಗಲೇ ಜಲಾಶಯದ ೧೯ನೇ ಗೇಟ್ ಕಟ್ ಆಗಿ ಸುಮಾರು ೩-೪ ದಿನಗಳು ಕಳೆದಿವೆ. ಈ ಬಾರಿ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ೧೦೫ ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು. ಆದರೆ ಈಗ ಜಲಾಶಯದ ನೀರು ವ್ಯರ್ಥವಾಗಿ ಹೋರಹೋಗುತ್ತಿರುವುದರಿಂದ ರೈತರು ಎರಡನೇ ಬೆಳೆಗೆ ನೀರು ಇಲ್ಲದಂತಾಗಿ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಆದಿಲ್‌ಪಾಷಾ ಮುಸ್ಟೂರು, ಜಿಲ್ಲಾ ಎಸ್.ಸಿ,ಎಸ್.ಟಿ ಘಟಕದ ಅಧ್ಯಕ್ಷ ಶಿವಪ್ಪ ವಿನೋಬನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿÀ ಆನಂದ ಎಸ್., ಗಂಗಾವತಿ ತಾಲೂಕ ಅಧ್ಯಕ್ಷ ಮಂಜುನಾಥ ಪತ್ತಾರ, ಕನ್ನಡಪರ ಒಕ್ಕೂಟದ ಜಿಲ್ಲಾಧ್ಯಕ್ಷ ಪೀರ್ ಮಹಮ್ಮದ್, ಉಪಾಧ್ಯಕ್ಷ ರಮೇಶ, ಸಂಘಟನಾ ಕಾರ್ಯದರ್ಶಿ ಮಲ್ಲೇಶ ನಾಯ್ಕ ಸೇರಿದಂತೆ ಮತ್ತಿತರರಿದ್ದರು.

About Mallikarjun

Check Also

screenshot 2025 09 04 21 39 56 48 6012fa4d4ddec268fc5c7112cbb265e7.jpg

ಪತ್ರಿಕೆ ವಿತರಕರ ಶ್ಯೆಯೋಭಿವೃದ್ಧಿಗೆ ಬದ್ಧ* . ಜಿ.ಎಂ. ರಾಜಶೇಖರ್

Committed to the professional development of newspaper distributors*. G.M. Rajashekar  ಚಿಕ್ಕಮಗಳೂರು:ಪತ್ರಿಕೆ ಮುದ್ರಣ ಎಷ್ಟು ಮುಖ್ಯವೋ ಪತ್ರಿಕೆಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.