Nakkundi: The new Sangolli Rayanna Murty is presented to the world
ಮಾನ್ವಿ: ತಾಲೂಕಿನ ನಕ್ಕುಂದಿ ಗ್ರಾಮದಲ್ಲಿನ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂತನ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ತಿಂತಿಣಿ ಬ್ರಿಡ್ಜ್ ಕಲಬುರ್ಗಿ ವಿಭಾಗದ ಕಾಗೀನೆಲೆ ಗುರು ಪೀಠದ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳು ಆರ್ಶಿವಚನ ನೀಡಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕನಕದಾಸರ ಹಾಗೂ ಸಂಗೊಳ್ಳಿ ರಾಯಣನವರ ಮೂರ್ತಿಗಳನ್ನು ಇಡುವ ಮುಖ್ಯ ಉದ್ದೇಶ ಪ್ರತಿ ಯೊಬ್ಬರು ಅತ್ಮಗೌರವದಿಂದ ಬದುಕ ಬೇಕು ಎನ್ನುವ ಪ್ರೇರಣೆಯನ್ನು ಪಡೆಯುವುದಕ್ಕಾಗಿ ಸ್ಥಾಪನೆ ಮಾಡಲಾಗುತ್ತದೆ. ಭೂಮಿಯಲ್ಲಿ ತಂದೆ ತಾಯಿಗಳ ಋಣವನ್ನು ಬಿಟ್ಟು ಅನ್ಯರ ಋಣದಲ್ಲಿ ಇರಬಾರದು ಎನ್ನುವ ಸಂದೇಶವನ್ನು ನೀಡಿದವರು ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರು ಭಾರತ ಮಾತೆಯನ್ನು ಸ್ವತಂತ್ರö್ಯ ಗೊಳಿಸುವುದಕ್ಕಾಗಿ ಬ್ರೀಟಿಷರಿಗೆ ತಮ್ಮ ಜೀವವನ್ನೆ ಅರ್ಪಣೆ ಮಾಡಿದ ಮಹಾನಿಯರಾಗಿದ್ದರೆ ಸತ್ಕಾರ್ಯ ಮಾಡುವ ಸಮಯದಲ್ಲಿ ಜಾತಿ ,ಮತ,ಪಂಥಗಳನ್ನು ನೋಡದೆ ನೆರವನ್ನು ನೀಡಬೇಕು ಎನ್ನುವ ಸಂದೇಶವನ್ನು ರಾಯಣ್ಣ ನೀಡಿದ್ದಾರೆ. ನಿಮ್ಮ ಜೀವನಕ್ಕೆ ನೀವೆ ಆಸರೆಯಾಗಬೇಕು ನಮ್ಮ ಮಕ್ಕಳಿಗೆ ಪ್ರೀತಿಯೊಂದನೆ ನೀಡದೆ ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಸಿಕೊಡಬೇಕಾಗಿದೆ. ಇಂದಿನ ದಿನಗಳಲ್ಲಿ ಯುವಸಮುದಾಯ ಮಧ್ಯಪಾನ ಹಾಗೂ ಜೂಜಾಟದಲ್ಲಿ ತಮ್ಮನ್ನು ತಾವು ಕಳೆದು ಕೊಂಡಿದ್ದು ಅವರಿಗೆ ಭಂಡರಾದ ಸಂಸ್ಕೃತಿಯನ್ನು ,ಕಂಬಳಿಗೆ ಗೌರವಕೊಡುವುದನ್ನು ,ಭಂಡರಧರಿಸುವುದನ್ನು ಪ್ರತಿ ಮನೆಗಳಲ್ಲಿ ಪಾಲಕರು ಕಲಿಸಿಕೊಡುವ ಮೂಲಕ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದರಿ ಹೊಂದಬೇಕು ಎಂದು ತಿಳಿಸಿದರು.
ರಾಜ್ಯ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಮಾತನಾಡಿ ಹಾಲುಮತ ಕುರುಬ ಸಮುದಾಯವು ಶೈಕ್ಷಣಿಕವಾಗಿ ,ಅರ್ಥಿಕವಾಗಿ,ಸಮಾಜಿಕವಾಗಿ,ಮುಂದು ಬರಬೇಕಾದಲ್ಲಿ ಸಂಘಟಿತರಾಗುವುದು ಅವಶ್ಯವಾಗಿದ್ದು ರಾಜ್ಯ ಕುರಬರ ಸಂಘವು ಅರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಗತ್ಯವಾಗಿರುವ ವಸತಿ ನಿಲಯ ಹಾಗೂ ಅರ್ಥಿಕ ನೆರವನ್ನು ಕೂಡ ನೀಡುತ್ತಿದೆ. ರಾಜ್ಯ ಸರಕಾರವು ಸಂಗೊಳ್ಳಿ ರಾಯಣ್ಣನವರ ಜಯಂತಿ ಹಾಗೂ ಪುಣ್ಯ ಸ್ಮಾರಣೆಯನ್ನು ಆಚಾರಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ೧೧ ಅಡಿಗಳ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ರೂಪಿಸಿದ ಶಿಲ್ಪಿ ಲಕ್ಷ್ಮಣ್ ರವರನ್ನು ಸನ್ಮಾನಿಸಲಾಯಿತು. ಗ್ರಾಮದ ಬೀರಪ್ಪ ದೇವಸ್ಥಾನದಿಂದ ವೇದಿಕೆಯ ವರೆಗೂ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತಿ ಮೆರವಣಿಗೆಯಲ್ಲಿ ಗ್ರಾಮದ ಸುಮಂಗಳಿಯರು ಕಳಸ,ಕುಂಭ ಹೊತ್ತು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು,ಗಬ್ಬೂರು ಶಾಂತಯ್ಯ ಗುರುವಿನ,ಪ್ರಭುಲಿಂಗದೇವರು, ಮಾಜಿ ಶಾಸಕರಾದ ಬ್ಯಾಗವಾಟ ಬಸವನಗೌಡ,ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಬಸವಂತಪ್ಪ,ತಾ.ಅಧ್ಯಕ್ಷರಾದ ಸತ್ಯನಾರಾಯಣ ವಕೀಲರು,ಮುಖಂಡರಾದ ಬಿ.ಕೆ.ಅಮರೇಶಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿ,ಬಸವರಾಜ ಯರಮದೊಡ್ಡಿ,ಮಲ್ಲನಗೌಡ ಪೊಲೀಸ್ ಪಾಟೀಲ್, ಶರಣಪ್ಪಗೌಡ ಪೊಲೀಸ್ ಪಾಟೀಲ್,ಬಜ್ಜಣ್ಣ ಗುಡದಿನ್ನಿ, ಬೀರಪ್ಪ ಕಡದಿನ್ನಿ,ಡಾ.ವೆಂಕನಗೌಡ ಬೊಮ್ಮನಾಳ,ಗ್ರಾ.ಪಂ.ಪಿ.ಡಿ.ಓ.ಬಸಪ್ಪ ಸೇರಿದಂತೆ ಹಾಲುಮತ ಸಮಾಜದ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದರು