A young man surrendered to the hand of his girlfriend.

ಕೊಪ್ಪಳ : (ಮಾನ್ವಿ) ಇನ್‌ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾ ಹೌಸ್‌ನಲ್ಲಿ ಬುಧವಾರ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಜನತಾ ಹೌಸ್‌ನಲ್ಲಿ ಘಟನೆ ನಡೆದಿದ್ದು. ಮಾನ್ವಿ ನಿವಾಸಿ ವರುಣ್ ( 26) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮಾವನ ಜೊತೆ ಪ್ರೇಯಸಿಯ ಮದುವೆ ನಿಶ್ಚಯವಾಗಿದ್ದಕ್ಕೆ ಖಿನ್ನತೆಗೊಳಗಾಗಿದ್ದ ಯುವಕ, ಮನೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್‌ಸ್ಟಾಗ್ರಾಂ ಮೂಲಕ ವರುಣ್‌ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ರಾದಿಕ (ಹೆಸರು ಬದಲಿಸಲಾಗಿದೆ) ಎಂಬ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಪರಿಚಯವಾಗಿ, ಅದು ಪ್ರೀತಿಯಾಗಿ ಅರಳಿತ್ತು.
ರಾಯಚೂರಿನಲ್ಲಿ 3 ವರ್ಷಗಳ ಕಾಲ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ರಾದಿಕಾ ಮತ್ತಷ್ಟು ಹತ್ತಿರವಾಗಿದ್ದಳು. ಓದು ಮುಗಿಸಿ ಮನೆಗೆ ತೆರಳಿದ್ದ ರಾದಿಕಾಗೆ ಮನೆಯಲ್ಲಿ ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ವರುಣ್‌ನನ್ನು ಯುವತಿ ದೂರ ಮಾಡಿದ್ದಳು. ಪ್ರೇಯಸಿ ದೂರವಾಗಿ, ಪ್ರೀತಿಸಿದ ಹುಡುಗಿ ದೂರವಾದಳು ಎಂಬ ಕಾರಕ್ಕ ಮನನೊಂದು ಕೊನೆಯ ಬಾರಿ ವಿಡಿಯೊ ಕಾಲ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವರುಣ್ ಶವ ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಪಂಚಯ್ಯ ಹಿರೇಮಠ,
Kalyanasiri Kannada News Live 24×7 | News Karnataka
