Breaking News

ಹನೂರು ಪಟ್ಟಣದಲ್ಲಿ ದಿ 18ರಂದು ಕರ್ನಾಟಕ ಪತ್ರಕರ್ತರ ದಿನಾಚರಣೆ : ಅಧ್ಯಕ್ಷ ಬಂಗಾರಪ್ಪ .

Karnataka Journalists Day Celebration on 18th in Hanur Town: President Bangarappa

ಜಾಹೀರಾತು


ವರದಿ : ಬಂಗಾರಪ್ಪ .ಸಿ .

ಹನೂರು : ಪ್ರತಿವರ್ಷದಂತೆ ಪತ್ರಕರ್ತರ ದಿನಾಚರಣೆ ಆಚರಿಸುವುದು ವಾಡಿಕೆ ಅದರಂತೆಯೇ ಇದೇ ತಿಂಗಳ ಹದಿನೆಂಟನೆ ತಾರೀಖು ಭಾನುವಾರ ನಮ್ಮ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಕಲ್ಯಾಣ ಮಂಟಪದಲ್ಲಿ ಸಮಯ ಬೆಳಿಗ್ಗೆ ಹತ್ತು ಘಂಟೆ ಮೂವತ್ತು ನಿಮಿಷಕ್ಕೆ ಪತ್ರಿಕ ದಿನಾಚರಣೆ ಪ್ರಾರಂಭಿಸಲು ತಿರ್ಮಾನಿಸಲಾಗಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಸಿ . ತಿಳಿಸಿದರು .

ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮನುಷ್ಯನ ದಿನಚರಿ ಪ್ರಾರಂಭವಾಗುವುದೆ ದಿನ ಪತ್ರಿಕೆಗಳನ್ನು ಓದುವುದರಿಂದ ಅಂತಹ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಪತ್ರಕರ್ತರ ದಿನಾಚರಣೆ ಮಾಡುವುದು ನಮ್ಮೇಲ್ಲರ ಸೌಭಾಗ್ಯವೆ ಸರಿ,ಇದೇ ಭಾನುವಾರವು ನಡೆಯುವ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಸಾಲೂರು ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿಗಳು ವಹಿಸಲಿದ್ದಾರೆ ,ಕಾರ್ಯಕ್ರಮದ ಉದ್ಘಾಟನೆಯನ್ನು ಹನೂರು ಕ್ಷೇತ್ರದ ಶಾಸಕರಾದ ಶ್ರೀಯುತ ಎಂ ಆರ್ ಮಂಜುನಾಥ್ ರವರು ಮಾಡಲಿದ್ದಾರೆ , ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಶ್ರೀಯುತ ಬಂಗಾರಪ್ಪ ,ಸಿ ರವರು ವಹಿಸಲಿದ್ದಾರೆ ,ಹಾಗೂ ಮುಖ್ಯ ಭಾಷಣಕಾರರಾಗಿ ರಾಮನಗರ ಟೈಮ್ಸ್ ಪತ್ರಿಕೆ ಸಂಪಾದಕರು ಹಾಗೂ ರಾಮನಗರ ಕ ಪ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಪ್ರಕಾಶ್ ಎಮ್ ಹೆಚ್ ಮಾಡಲಿದ್ದಾರೆ ,
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಶ್ರೀಯುತ ಆರ್ ನರೇಂದ್ರರವರು ,ಶ್ರೀ ಮತಿ ಶ್ರೀ ಪರಿಮಳ ನಾಗಪ್ಪರವರು ,ಬಿಜೆಪಿ ಜಿಲ್ಲಾಪ್ರಮುಖರು ಹಾಗೂ ದತ್ತೇಶ್ ಕುಮಾರ್ ರವರು ಕಾರ್ಯದರ್ಶಿ ಮಾನಸ ಶಿಕ್ಷಣ ಸಂಸ್ಥೆ ಕೊಳ್ಳೇಗಾಲ , ಬಿಜೆಪಿ ಮುಖಾಂಡರಾದ ಡಾಕ್ಟರ್ ಪ್ರೀತನ್ ನಾಗಪ್ಪರವರು ,ರೋಷನ್ ಬಾಬುರವರು ಕ್ರಿಸ್ತರಾಜ ವಿದ್ಯಾಸಂಸ್ಥೆಗಳು. ಉದ್ಯಮಿಗಳಾದ ಪೊನ್ನಾಚಿ ರಂಗಸ್ವಾಮಿ ಹಾಗೂ ನಾಗೇಶ್ ಜಿ ,ಬೆಂಗಳೂರು ,ರೈತ ಸಂಘದ ಹನೂರು ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ರೈತ ಮುಖಂಡರುಗಳು ,ಪತ್ರಿಕ ಸಂಪಾದಕರುಗಳು ಸೇರಿದಂತೆ ಹಲವು ಗಣ್ಯರು ,ಸಾದಕರು ,ಪತ್ರಿಕ ಮಿತ್ರರು ಆಗಮಿಸಲಿದ್ದಾರೆ ಎಂದು ತಿಳಿಸಿದರು . ಇದೇ ಸಮಯದಲ್ಲಿ ಹಲವು ಸಾದಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಗುವುದು , ಧಾನಿಗಳ ಸಹಾಯದಿಂದ ಕಾಡಂಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಮಾಡಲಾಗುತ್ತದೆ ,ಸಕಾಲಕ್ಕೆ ಸಾರ್ವಜನಿಕರು ಸೇರಿದಂತೆ ಪತ್ರಿಕ ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡ ಬೇಕಾಗಿದೆ ಎಂದರು .
ಇದೇ ಸಂದರ್ಭದಲ್ಲಿ ಪತ್ರಕರ್ತರುಗಳಾದ ಸಂಘದ ಉಪಾಧ್ಯಕ್ಷರಾದ ಸತೀಶ್ ಕುಮಾರ್ , ಕಾರ್ಯದರ್ಶಿ ಬಸವರಾಜು ಕಾಂಚಳ್ಳಿ ,ಖಜಾಂಚಿಗಳಾದ ಚೇತನ್ ಕುಮಾರ್ , ಸಂಘಟನೆ ಕಾರ್ಯದರ್ಶಿ
ಶಾರುಖ್ ಖಾನ್ , ನಿರ್ದೇಶಕರುಗಳಾದ ಪ್ರಸನ್ನ .ಅಜಿತ್ ,ನಾಗೇಂದ್ರ ಎನ್ ,ಸದಸ್ಯರುಗಳಾದ ವಿಲಿಯಂ ,ಕಾರ್ತಿಕ್ ,ರವಿಗೌಡ ,ಎಸ್ .ರವಿ. ಹಾಜರಿದ್ದರು

About Mallikarjun

Check Also

whatsapp image 2025 08 17 at 4.54.21 pm

ಶ್ರೀ ತ್ರಯಂಬಕೇಶ್ವರ ಮಹಾಮೂರ್ತಿಗೆ ಮಹಾ ರುದ್ರಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ

Maha Rudrabhishekam and special puja program for Sri Trimbakeshwara Mahamurti ಗಂಗಾವತಿ:17 ನಗರದಲ್ಲಿರುವ ಆನೆಗೊಂದಿ ರಸ್ತೆಯಲ್ಲಿ ಶ್ರೀ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.